`ಗ್ರಾಮಾಭಿವೃದ್ಧಿಯಿಂದ ಮಹಿಳೆ ಸ್ವಾವಲಂಬಿ'

7

`ಗ್ರಾಮಾಭಿವೃದ್ಧಿಯಿಂದ ಮಹಿಳೆ ಸ್ವಾವಲಂಬಿ'

Published:
Updated:

ಕಳಸ: ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜ ನೆಯ ಫಲವಾಗಿ ಮಹಿಳೆಯರು ಸ್ವಾವ ಲಂಬಿಗಳಾಗಿದ್ದಾರೆ. ಕೀಳರಿಮೆ ತೊರೆದು ಸಂಸಾರದ ಜವಾಬ್ದಾರಿ ಹೊತ್ತಿರುವ ಮಹಿಳೆಯರು ಸಂಸಾರದ ಬೆಳಕಾಗಿದ್ದಾರೆ ಎಂದು ಕಾರ್ಕಳದ ತರಬೇತು ದಾರ ರಾಜೇಂದ್ರ ಭಟ್ ಅಭಿ ಪ್ರಾಯಪಟ್ಟರು.ಪಟ್ಟಣದ ದುರ್ಗಾ ಮಂಟಪದಲ್ಲಿ ಭಾನುವಾರ ನಡೆದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು. ವೀರೇಂದ್ರ ಹೆಗ್ಗಡೆ ಅವರ ಸಂಕಲ್ಪದ ಫಲವಾಗಿ ಧರ್ಮಸ್ಥಳ ಯೋಜನೆಯು ಇಂದು ಲಕ್ಷಾಂತರ ಮಹಿಳೆಯರಿಗೆ ದಾರಿದೀಪವಾಗಿದೆ. ಅಶಕ್ತರಾಗಿದ್ದ ಮಹಿಳೆಯರು ಕೂಡ ಸಂಸಾರದ ಕಣ್ಣಾಗಿದ್ದಾರೆ ಎಂದು ರಾಜೇಂದ್ರ ಭಟ್ ವಿವರಿಸಿದರು.

 

ಇದಕ್ಕೂ ಮುನ್ನ ಕಾರ್ಯಕ್ರಮ ಉದ್ಘಾಟಿಸಿದ ಹೊರನಾಡಿನ ಜಿ.ಭೀಮೇಶ್ವರ ಜೋಷಿ, ಧರ್ಮಸ್ಥಳ ಸಂಘಗಳ ಮೂಲಕ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗುತ್ತಿದೆ. ವಿಶೇಷವಾಗಿ ಮಹಿಳೆಯರ ಮೂಲಕ ಸಮಾ ಜದಲ್ಲಿ ಅಪೂರ್ವ ಎನ್ನಬಹು ದಾದ ಬದಲಾವಣೆ ಕಂಡು ಬರುತ್ತಿದೆ ಎಂದರು.

ನೂತನ ಪದಾಧಿಕಾರಿಗಳಿಗೆ ಇದೇ ಸಂದರ್ಭದಲ್ಲಿ ಅಧಿಕಾರ ಹಸ್ತಾಂತರ ಮಾಡಲಾಯಿತು.

ತಾಲ್ಲೂಕು ಯೋಜನಾಧಿಕಾರಿ ನಾಗರತ್ನ ಹೆಗಡೆ, ಡಾ.ವಿಕ್ರಮ್ ಪ್ರಭು, ಚಂಪಾ ಎಂ.ರಾವ್, ಶ್ರೆಧರ ಶೆಟ್ಟಿ, ವಲಯ ಮೇಲ್ವಿಚಾರಕ ರಾಘವೇಂದ್ರ ಮತ್ತಿತ ರರು ಭಾಗವಹಿಸಿದ್ದರು. ಮಧ್ಯಾಹ್ನದ ನಂತರ ಒಕ್ಕೂಟದ ಸದಸ್ಯರು ಆಕರ್ಷಕ ಸಾಂಸ್ಕ್ರತಿಕ ಪ್ರದರ್ಶನ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry