`ಗ್ರಾಮಾಭಿವೃದ್ಧಿ ಯೋಜನೆಯಿಂದ ಪರಿವರ್ತನೆ'

7

`ಗ್ರಾಮಾಭಿವೃದ್ಧಿ ಯೋಜನೆಯಿಂದ ಪರಿವರ್ತನೆ'

Published:
Updated:
`ಗ್ರಾಮಾಭಿವೃದ್ಧಿ ಯೋಜನೆಯಿಂದ ಪರಿವರ್ತನೆ'

ಬಿ.ಎಚ್.ಕೈಮರ (ನರಸಿಂಹ ರಾಜ ಪುರ): ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಜನರದಲ್ಲಿ ಸಂಘ ಟನಾ ಮನೋಭಾವನೆ ಬೆಳೆದು ಗ್ರಾಮಗಳಲ್ಲಿ ಕ್ರಾಂತಿಕಾರಿ ಬದಲಾವಣೆ ಉಂಟಾಗುತ್ತಿದೆ ಎಂದು ಬಿಲ್ಲವರ ಸಮಾಜದ ತಾಲ್ಲೂಕು ಅಧ್ಯಕ್ಷ ಆರ್.ಸದಾಶಿವ ತಿಳಿಸಿದರು.ತಾಲ್ಲೂಕಿನ ಬಿ.ಎಚ್.ಕೈಮರ ಗ್ರಾಮದ ನಾರಾಯಣಗುರು ಸಮುದಾಯಭವನದಲ್ಲಿ ಬುಧವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜ ನೆಯ ಸುತ್ತಾ ಮತ್ತು ಬಿ.ಎಚ್.ಕೈಮರ ಗ್ರಾಮದ ಪ್ರಗತಿ ಬಂದು ಹಾಗೂ ಸ್ವಸಹಾಯ ಸಂಘಗಳ ಒಕ್ಕೂಟದ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.ಗ್ರಾಮಾಭಿವೃದ್ಧಿ ಯೋಜನೆಯಿಂದ ಸ್ವಸಹಾಯ ಸಂಘ ಸ್ಥಾಪಿಸಿಕೊಂಡು ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಸಾಧ್ಯವಾಗಿದೆ. ವಿಚಾರ ವಂತಿಕೆ ಬೆಳೆದಿದೆ. ಮಹಿಳೆಯರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇ ಕೆಂದರು.ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜ ನೆಯ ಯೋಜನಾಧಿಕಾರಿ ಎ.ಎಸ್.ಸುಕೇಶ್ ಮಾತನಾಡಿ, 1982ರಲ್ಲಿ ಪ್ರಾರಂಭವಾದ  ಗ್ರಾಮಾಭಿವೃದ್ಧಿ ಯೋಜನೆ ಸದ್ಯ 12 ಜಿಲ್ಲೆಗಳನ್ನು ಆವರಿಸಿದೆ. ಕೊಪ್ಪ, ಶೃಂಗೇರಿ,ಎನ್.ಆರ್.ಪುರ ತಾಲ್ಲೂಕಿನಲ್ಲಿ 2600 ಸ್ವಸಹಾಯ ಸಂಘಗಳಿದ್ದು 30ಸಾವಿರ ಸದಸ್ಯರನ್ನು ಹೊಂದಿದೆ. ರೂ.96 ಕೋಟಿ ಪ್ರಗತಿ ನಿಧಿ ನೀಡ ಲಾಗಿದೆ. ರೈತ ಸಮುದಾಯಕ್ಕೆ ಅನುಕೂಲವಾಗುವ ಯೋಜನೆಗಳಿಗೆ ರೂ. 2.20 ಕೋಟಿ ಹಣ ನೀಡ ಲಾಗಿದೆ.ಸಂಪೂರ್ಣ ಸುರಕ್ಷ ಯೋಜನೆ ಯಲ್ಲಿ 98ಜನರಿಗೆ ಪರಿಹಾರ ನೀಡಲಾಗಿದೆ ಎಂದು ಹೇಳಿದರು. ಅಧ್ಯಕ್ಷತೆಯನ್ನು ಸುತ್ತಾ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷ ಡಿ.ಶಂಕರ್‌ವಹಿಸಿದ್ದರು. ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಬಿ.ಎಂ.ತಿಮ್ಮರಾಜ್,  ಮುಖ್ಯೋಪಾಧ್ಯಾಯನಿ ಯಶೋಧಾ ಭಟ್, ನೂತನ ಅಧ್ಯಕ್ಷ ರಾದ ಶಾರದ, ಆದರ್ಶ, ಅಣ್ಣಪ್ಪ, ಮೇಲ್ವಿಚಾರಕ ಗಣೇಶ್, ಯಶೋದಾ, ಲಕ್ಷ್ಮಿದೇವಿ, ಶಾರದ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry