ಗ್ರಾಮೀಣರಲ್ಲಿ ಜಾಗೃತಿ ಮೂಡಿಸಲು ಅಭಿಯಾನ

7
ಜಿಲ್ಲೆಯಲ್ಲಿ 23,834 ಶೌಚಾಲಯ ನಿರ್ಮಾಣದ ಗುರಿ n ಆರು ತಿಂಗಳಲ್ಲಿ ದುಪ್ಪಟ್ಟು ಪ್ರಗತಿ

ಗ್ರಾಮೀಣರಲ್ಲಿ ಜಾಗೃತಿ ಮೂಡಿಸಲು ಅಭಿಯಾನ

Published:
Updated:

ರಾಮನಗರ: ಜಿಲ್ಲೆಯಲ್ಲಿ ಬಯಲು ಶೌಚಾಲಯ ಮುಕ್ತಗೊಳಿಸುವ ಮಹ ತ್ವದ ಉದ್ದೇಶ ಹೊಂದಿರುವ ಜಿಲ್ಲಾ ಪಂಚಾಯಿತಿಯು ಪ್ರಸಕ್ತ ವರ್ಷ ಶೌಚಾಲಯ ನಿರ್ಮಿಸಲು ನಿಗದಿಪ ಡಿಸಿರುವ ಗುರಿ ತಲುಪಲು ಒಂದು ದಿನದ ಅಭಿಯಾನ ಹಮ್ಮಿಕೊಳ್ಳಲು ನಿರ್ಧರಿಸಿದೆ.ಪ್ರತಿಯೊಬ್ಬರ ಮನೆಯಲ್ಲೂ ಶೌಚಾಲಯ ನಿರ್ಮಾಣದ ಮಹತ್ವದ ಕುರಿತು ವಿವಿಧ ರೀತಿಯಲ್ಲಿ ಜಾಗೃತಿ ಅಭಿ ಯಾನಗಳನ್ನು ಹಮ್ಮಿಕೊಂಡ ಜಿ.ಪಂ ಇದೀಗ ಒಂದು ದಿನದ ನೋಂದಣಿ ಅಭಿಯಾನ ಹಮ್ಮಿಕೊ ಳ್ಳಲಿದೆ.ಶೌಚಾಲಯ ನಿರ್ಮಿಸಿಕೊಳ್ಳಲು ಆಸಕ್ತಿ ಇರುವವರು ಆ ನಿಗದಿತ ದಿನದಂದು ಗ್ರಾಮ ಪಂಚಾಯಿತಿಗಳಲ್ಲಿ ಪೂರಕ ದಾಖಲಾತಿ ನೀಡಿ, ಹೆಸರು ನೋಂದಾ ಯಿಸಿದರೆ ನರೇಗಾ ಯೋಜನೆಯಡಿ ಶೌಚಾಲಯ ನಿರ್ಮಾ ಣಕ್ಕೆ ಎನ್‌ಎಂ ಆರ್‌ ತೆಗೆಸಿ, ಕಾರ್ಯಾ ದೇಶವನ್ನು ಮಾಡಲಾ ಗುವುದು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ.ಎಂ.ವಿ. ವೆಂಕಟೇಶ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.11,049 ಶೌಚಾಲಯ ನಿರ್ಮಾಣ: ಜಿಲ್ಲೆಯಲ್ಲಿ ಪ್ರಸಕ್ತ ವರ್ಷ 23,834 ಶೌಚಾಲಯ ನಿರ್ಮಿಸುವ ಗುರಿ ಹೊಂದಲಾಗಿದ್ದು, ನರೇಗಾ ಕಾರ್ಯ ಕ್ರಮದ ನೆರವಿನಿಂದ ಆರು ತಿಂಗಳಲ್ಲಿ 11,049 ಶೌಚಾಲಯಗ ಳನ್ನು ನಿರ್ಮಿಸ ಲಾಗಿದೆ. ಗುರಿಯಲ್ಲಿ ಉಳಿದಿರುವ ಶೌಚಾಲಯ ನಿರ್ಮಾ ಣಕ್ಕೂ ಕ್ರಮ ಕೈಗೊಳ್ಳಲು ಈ ಅಭಿ ಯಾನ ಹಮ್ಮಿ ಕೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿ ದರು.ಅಭಿಯಾನದ ಕುರಿತು ಜಿಲ್ಲೆಯ ಎಲ್ಲ 130 ಗ್ರಾ.ಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ಜನಪ್ರತಿನಿಧಿಗಳು, ಪಿಡಿಒ ಮತ್ತು ಕಾರ್ಯದರ್ಶಿಗಳ ಮೂಲಕ ಜನರಿಗೆ ಅಗತ್ಯ ಮಾಹಿತಿ ನೀಡಿ, ಆಸಕ್ತಿ ಹೊಂದಿ ರುವ ಜನರ ಹೆಸರನ್ನು ನೋಂದಾಯಿಸಲು ಸೂಚಿಸಲಾ ಗುವುದು ಎಂದು ಅವರು ತಿಳಿಸಿದರು.ಇನ್ನೂ 12 ಸಾವಿರ ನಿರ್ಮಿಸುವ ಗುರಿ: ಶೀಘ್ರದಲ್ಲಿಯೇ ಈ ಅಭಿಯಾನದ ದಿನ ನಿಗದಿಪಡಿಸಲಾಗುವುದು. ಆ ದಿನ ದಂದು ಜಿಲ್ಲೆಯ ಶೌಚಾಲಯ ಇಲ್ಲದ 12,000 ಕುಟುಂಬಗಳಿಗೆ ಶೌಚಾ ಲಯ ನಿರ್ಮಿಸಿಕೊಡುವ ಕಾರ್ಯಾ ದೇಶ ಹೊರಡಿಸುವ ಯೋಜನೆ ಹಮ್ಮಿಕೊಳ್ಳ ಲಾಗುವುದು ಎಂದು ಅವರು ಹೇಳಿದರು.2013ರಲ್ಲಿ ಎದುರಾದ ಸಾರ್ವತ್ರಿಕ ವಿಧಾನಸಭಾ ಚುನಾವಣೆ, ಲೋಕ ಸಭೆಯ ಉಪ ಚುನಾವಣೆಯಿಂದಾಗಿ ಶೌಚಾಲಯ ನಿರ್ಮಾಣದ ಗುರಿ ತಲು ಪುವಲ್ಲಿ ವಿಳಂಬವಾಗಿದೆ. ಆದರೂ ಈಗ ಆಗಿರುವ ಸಾಧನೆ ಸ್ವಲ್ಪ ಮಟ್ಟಿಗೆ ಸಮಾಧಾನ ತಂದಿದೆ ಎಂದರು.ಐದು ವರ್ಷದಲ್ಲಿ ಕೇವಲ 5000 ಶೌಚಾಲಯ: ಜಿಲ್ಲೆಯಲ್ಲಿ ಕಳೆದ ಐದು ವರ್ಷದಲ್ಲಿ ಕೇವಲ 5000 ಶೌಚಾಲ ಯಗಳನ್ನು ನಿರ್ಮಿಸಲಾಗಿತ್ತು. ಆದರೆ 2013ನೇ ಸಾಲಿನ 6 ತಿಂಗಳಲ್ಲಿ 11,049 ಶೌಚಾ ಲಯ ನಿರ್ಮಿಸುವ ಮೂಲಕ ಮಹತ್ವದ ಮೈಲಿಗಲ್ಲು ತಲು ಪಲಾಗಿದೆ. ಉಳಿದಿ ರುವ 12 ಸಾವಿರ ಶೌಚಾಲಯವನ್ನು ಒಂದೆರಡು ತಿಂಗ ಳಲ್ಲಿ ಪೂರ್ಣಗೊಳಿ ಸಲು ನಿರ್ಧರಿ ಸಲಾಗಿದೆ ಎಂದು ಅವರು ಹೇಳಿದರು.ನರೇಗಾ ಯೋಜನೆಯಡಿ ಫಲಾನುಭವಿ ಗಳು ಶೌಚಾಲಯ ನಿರ್ಮಿಸಲು 9.200 ರೂ.  ಪಡೆಯ ಬಹುದಾಗಿದೆ. ಎಸ್ಸಿ–ಎಸ್ಟಿ ಸಮು ದಾಯದ ಫಲಾನು ಭವಿಗಳಿಗೆ 15 ಸಾವಿರ ರೂ. ಶೌಚಾಲಯ ನಿರ್ಮಿಸಿ ಕೊಳ್ಳಲು ದೊರೆ ಯಲಿದೆ. ವೈಯಕ್ತಿಕ ಫಲಾನು ಭವಿಗಳನ್ನು ಆಯ್ಕೆ ಮಾಡ ಬೇಕಿದ್ದು, ಆಸಕ್ತರು ಮುಂದೆ ಬರು ವಂತೆ ಅವರು ಮನವಿ ಮಾಡುತ್ತಾರೆ.ಫಲಾನುಭವಿಗಳಾಗುವವರ ಬಳಿ ಶೌಚಾ ಲಯ ನಿರ್ಮಿಸಲು ಜಾಗ, ಉದ್ಯೋಗ ಚೀಟಿ (ಜಾಬ್‌ ಕಾರ್ಡ್‌) ಹಾಗೂ ಅರ್ಜಿ ನಮೂನೆ 6 ಇರ ಬೇಕು. ಇವಿಷ್ಟಿದ್ದರೆ ಫಲಾನುಭವಿಗ ಳಾಗಲು ಅರ್ಹತೆ ದೊರೆಯುತ್ತದೆ. ಅವರಿಗೆ ಅಭಿಯಾನದ ನಿಗದಿತ ದಿನ ದಂದು ಎನ್‌ಎಂಆರ್‌ ತೆಗೆಸಿ, ಕಾರ್ಯಾದೇಶ ನೀಡಲಾಗುವುದು ಎಂದು ಸಿಇಒ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry