ಗ್ರಾಮೀಣರಿಂದ ಕನ್ನಡ ಉಳಿದಿದೆ: ಗೋನಾಸ್ವಾಮಿ

7

ಗ್ರಾಮೀಣರಿಂದ ಕನ್ನಡ ಉಳಿದಿದೆ: ಗೋನಾಸ್ವಾಮಿ

Published:
Updated:
ಗ್ರಾಮೀಣರಿಂದ ಕನ್ನಡ ಉಳಿದಿದೆ: ಗೋನಾಸ್ವಾಮಿ

ಶ್ರೀನಿವಾಸಪುರ: ಗ್ರಾಮೀಣ ಜನರಿಂದ ಕನ್ನಡ ಭಾಷೆ ಉಳಿದಿದೆ. ಗಡಿನಾಡಿನಲ್ಲೂ ಕನ್ನಡ ಪ್ರಜ್ಞೆ ಹೆಚ್ಚಿದೆ. ಹೃದಯದಲ್ಲಿ ಅಡಗಿರುವ ಕನ್ನಡ ಪ್ರೇಮವನ್ನು ಮಾತಿನ ಮೂಲಕ ಹೊರಹಾಕಿದಾಗ ಭಾಷೆಯ ವೈಶಾಲ್ಯತೆ ಹೆಚ್ಚುತ್ತದೆ ಎಂದು ಸಾಹಿತಿ ಗೋನಾ ಸ್ವಾಮಿ ಹೇಳಿದರು.ಇಲ್ಲಿನ ವಿವೇಕಾನಂದ ವೃತ್ತದಲ್ಲಿ ಚೈತನ್ಯ ಜನ ಜಾಗೃತಿ ವೇದಿಕೆಯು ರಾಜ್ಯೋತ್ಸವದ ಅಂಗವಾಗಿ ಶನಿವಾರ ಆಯೋಜಿಸಿದ್ದ ರಸ ಸಂಜೆ ಕಾರ್ಯ ಕ್ರಮದಲ್ಲಿ ಮಾತನಾಡಿದ ಅವರು, ನಗರ ಪ್ರದೇಶದಲ್ಲಿ ಇಂಗ್ಲಿಷ್ ಪ್ರಭಾವದಿಂದ ಕನ್ನಡ ಭಾಷೆ ಸೊರಗುತ್ತಿದೆ ಎಂದರು. ಗ್ರಾಮೀಣ ಭಾಗದ ಮಕ್ಕಳು ಕನ್ನಡ ವನ್ನು ಕಾಪಾಡಿಕೊಂಡು ಬರುತ್ತಿದ್ದಾರೆ. ಕನ್ನಡ ಭಾಷೆಗೆ ಇದು ಶ್ರೀರಕ್ಷೆ ಎಂದು ಅಭಿಪ್ರಾಯಪಟ್ಟರು.ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾ.ವೆಂಕೋಬರಾವ್ ಮಾತ ನಾಡಿ, ಕನ್ನಡಿಗರು ಎಚ್ಚೆತ್ತುಕೊಳ್ಳ ದಿದ್ದರೆ ಅನ್ಯ ಭಾಷಿಕರು ಕನ್ನಡ ಭಾಷೆ ಹಾಗೂ ಸಂಸ್ಕೃತಿಗೆ ಕಂಟಕವಾಗಿ ಪರಿಣಮಿಸು ತ್ತಾರೆ ಎಂದು ಕಳವಳ ವ್ಯಕ್ತಪಡಿಸಿದರು.ಬಿಜೆಪಿ ಜಿಲ್ಲಾ ಘಟಕದ ಕಾರ್ಯ ದರ್ಶಿ ಬಿ.ವಿ.ಶಿವಾರೆಡ್ಡಿ ಕಾರ್ಯಕ್ರಮ ಉದ್ಘಾಟಿಸಿದರು. ವೆಂಕಟೇಶ್ವರ ಗ್ರಾಮೀಣ ಆರೋಗ್ಯ ಹಾಗೂ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಡಾ.ವೆಂಕಟಾಚಲ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ರಾಜಶೇಖರರೆಡ್ಡಿ, ಪುರಸಭಾಧ್ಯಕ್ಷ ಎಸ್. ಶ್ರೀನಿವಾಸಪ್ಪ, ಸದಸ್ಯ ಮುನಿರೆಡ್ಡಿ, ಜಿಲ್ಲಾ ಪಂಚಾಯಿತಿ ಸದಸ್ಯ ಆರ್. ನಾರಾಯಣ ಸ್ವಾಮಿ, ತಾಲ್ಲೂಕು ಪಂಚಾಯಿತಿ ಸದಸ್ಯ ಕೃಷ್ಣಾರೆಡ್ಡಿ, ಸಬ್‌ಇನ್ಸ್‌ಪೆಕ್ಟರ್ ಡಿ. ಆರ್.ಪ್ರಕಾಶ್, ಉದ್ಯಮಿ ವೆಂಕಟೇಶ್ ಬಾಬು, ಹಳೆಪೇಟೆ ಶ್ರೀನಿವಾಸರೆಡ್ಡಿ, ಚೈತನ್ಯ ಜನ ಜಾಗೃತಿ ವೇದಿಕೆ ಅಧ್ಯಕ್ಷ ಎಸ್.ಎಂ.ಶ್ರೀನಿವಾಸ್, ಉಪಾಧ್ಯಕ್ಷ ಆರ್.ಕೆ.ಶ್ರೀನಿವಾಸ ಕುಮಾರ್, ಕಾರ್ಯದರ್ಶಿ ನಟರಾಜ್, ಖಜಾಂಚಿ ವೇಣುಗೋಪಾಲ್ ಮತ್ತಿತರರು ಉಪಸ್ಥಿತರಿದ್ದರು.ನಿವೃತ್ತ ಶಿಕ್ಷಕ ಕೆ.ಸಿ.ಬಸವರಾಜ್, ನಿವೃತ್ತ ಉಪನ್ಯಾಸಕ ಜಿ.ವಿ.ಕೃಷ್ಣಪ್ಪ ಅವರನ್ನು ಸನ್ಮಾನಿಸಲಾಯಿತು. ಗೋನಾ ಸ್ವಾಮಿ ತಂಡದಿಂದ ಕನ್ನಡ ಗೀತೆಗಳ ಗಾಯನ ಹಾಗೂ ವಾದ್ಯಗೋಷ್ಠಿ ನಡೆಯಿತು. ಜಡಿಮಳೆಯಲ್ಲೂ ಹೆಚ್ಚಿನ ಜನರು ಸೇರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry