ಬುಧವಾರ, ಜೂನ್ 23, 2021
22 °C

ಗ್ರಾಮೀಣರಿಗೆ ದಿನಕ್ಕೆ 85 ಲೀ ನೀರು: ಸಿ.ಎಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ‘ಗ್ರಾಮೀಣ ಪ್ರದೇ­ಶದ ಪ್ರತಿಯೊಬ್ಬ ವ್ಯಕ್ತಿಗೂ ದಿನಕ್ಕೆ 85 ಲೀಟರ್‌ ಕುಡಿಯುವ ನೀರು ಪೂರೈ­ಸಲು ರಾಜ್ಯ ಸರ್ಕಾರ ಬದ್ಧವಾಗಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣ­ದಲ್ಲಿ ಶನಿವಾರ ನಡೆದ ವಿವಿಧ ಅಭಿ­ವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಕಾರ್ಯಕ್ರಮ­ದಲ್ಲಿ ಅವರು ಮಾತನಾಡಿದರು.ಪ್ರಸ್ತುತ ಸರ್ಕಾರ ರೂಪಿಸಿರುವ ಕುಡಿ­ಯುವ ನೀರು ಪೂರೈಕೆ ಯೋಜನೆ­ಗಳಡಿ ಗ್ರಾಮೀಣರಿಗೆ ನಿತ್ಯ 55 ಲೀ. ನೀರು ಪೂರೈಕೆಗೆ ಮಾತ್ರವೇ ಅವಕಾಶ­ವಿದೆ. ಮುಂದಿನ ದಿನಗಳಲ್ಲಿ ರೂಪಿ­ಸುವ ಹೊಸ ಯೋಜನೆಗಳಡಿ ಒಬ್ಬ ವ್ಯಕ್ತಿಗೆ ದಿನಕ್ಕೆ ಕನಿಷ್ಠ 85 ಲೀ. ನೀರು ಪೂರೈಸಲಾಗುವುದು. ಈ ನಿಟ್ಟಿನಲ್ಲಿ ಯೋಜ­ನೆಯ ನೀಲನಕ್ಷೆ ಸಿದ್ಧಪಡಿಸಲಾಗುತ್ತದೆ ಎಂದರು.ತಳವಾರ–ಪರಿವಾರ ಎರಡೂ ಒಂದೇ ಜನಾಂಗ ಪ್ರತಿನಿಧಿಸುವ ಪದಗಳಾಗಿವೆ. ಮೈಸೂರು ಭಾಗದಲ್ಲಿ ಈ ಸಮುದಾಯದ ಜನರು ಹೆಚ್ಚಿದ್ದಾರೆ. ಇವರನ್ನು ‘ನಾಯಕ’ ಜನಾಂಗಕ್ಕೆ ಸೇರಿದವರೆಂದು ಕರೆಯು­ತ್ತಾರೆ. ಆದರೆ, ಈ ಸಮುದಾಯ ಮೀಸಲು ಸೌಲಭ್ಯದಿಂದ ವಂಚಿತವಾಗಿದೆ. ಇವರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ ಎಂದು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.