ಗ್ರಾಮೀಣ ಅಭಿವೃದ್ಧಿ: ಅಣ್ಣಾಗೆ ಪ್ರಶಸ್ತಿ

7

ಗ್ರಾಮೀಣ ಅಭಿವೃದ್ಧಿ: ಅಣ್ಣಾಗೆ ಪ್ರಶಸ್ತಿ

Published:
Updated:

ಮುಂಬೈ (ಪಿಟಿಐ): ಗ್ರಾಮೀಣ ಅಭಿವೃದ್ಧಿಗಾಗಿ ಸಲ್ಲಿಸಿದ ಕೊಡುಗೆ ಪರಿಗಣಿಸಿ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರನ್ನು ದೆಹಲಿಯ ಸೀತಾರಾಂ ಜಿಂದಾಲ್ ಫೌಂಡೇಶನ್  ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.ಪ್ರಶಸ್ತಿ ಮೊತ್ತ 25 ಲಕ್ಷ ರೂ. ಒಳಗೊಂಡಿದ್ದು, ಫೆಬ್ರುವರಿ 23ರಂದು ನವದೆಹಲಿಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ ಎಂದು ಅಣ್ಣಾ ಬೆಂಬಲಿಗ ದತ್ತಾ ಅವಾರಿ ತಿಳಿಸಿದ್ದಾರೆ.ದೆಹಲಿಯಲ್ಲಿ ಫೆ. 22ರಂದು ನಡೆಯಲಿರುವ ಅಣ್ಣಾ ತಂಡದ ಸಭೆಯಲ್ಲಿ ಹಜಾರೆ ಅವರು ಪಾಲ್ಗೊಳ್ಳಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry