ಗ್ರಾಮೀಣ ಕಲಾವಿದರಿಗೆ ಪ್ರಶಸ್ತಿ ಗೌರವ

ಮಂಗಳವಾರ, ಜೂಲೈ 23, 2019
26 °C

ಗ್ರಾಮೀಣ ಕಲಾವಿದರಿಗೆ ಪ್ರಶಸ್ತಿ ಗೌರವ

Published:
Updated:

ಘಟಪ್ರಭಾ (ಗೋಕಾಕ): ಇಲ್ಲಿಗೆ ಸಮೀಪದ ಅರಭಾವಿಮಠದ ಶಿವಾನಂದ ಶಿವಯೋಗಿ ಪಿಯು ಕಾಲೇಜಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಹಾಗೂ ಬಿಂದು ಸಂಸ್ಥೆ ಇವುಗಳ ಸಹಯೋಗದಲ್ಲಿ ಹಮ್ಮಿಕೊಂಡ ಜಾನಪದ ಕಲಾಮೇಳದಲ್ಲಿ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆಗೈದ ಕಲಾವಿದರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.ಸಾಹಿತಿ ಶಿವಯೋಗಿ ಬಿದರಿಗೆ  ಜಾನಪದ ಜಾಣ  ಪ್ರಶಸ್ತಿ, ಭರತನಾಟ್ಯ ಕಲಾವಿದ ಟಿ.ರವೀಂದ್ರ ಶರ್ಮರಿಗೆ  ನಾಟ್ಯ ವರ್ಮ  ಪ್ರಶಸ್ತಿ, ಹಿಡಕಲ್‌ದ ಶ್ರಿಕೃಷ್ಣ ಪಾರಿಜಾತ ಕಲಾವಿದೆ ಮಾಲಾಬಾಯಿ ಸಾಂಬ್ರೇಕರ ಇವರಿಗೆ  ರಂಗನಾಯಕಿ  ಪ್ರಶಸ್ತಿ, ಚಿಕ್ಕೋಡಿಯ ಸಾಗರ ಆರ್ಟ್ಸ್‌ದ ಶಂಕರ ಕಟ್ಟಿಕಾರರಿಗೆ  ಚಿತ್ರಕಲಾ ತಪಸ್ವಿ  ಪ್ರಶಸ್ತಿ, ಗುಜನಟ್ಟಿಯ ಹಿರಿಯ ಭಜನಾ ಕಲಾವಿದ ರಾಮಚಂದ್ರ ಮುಕ್ಕಣ್ಣವರಿಗೆ  ಗಾನಗಾರುಡಿಗ  ಪ್ರಶಸ್ತಿ ಪ್ರದಾನ ಮಾಡಲಾಯಿತು.ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ. ಜಯಾನಂದ ಮಾದರ, ಬಸವರಾಜ ಸಸಾಲಟ್ಟಿ, ಭರತ ಕಲಾಚಂದ್ರ, ರಾಮಚಂದ್ರ ಕಾಂಬಳೆ, ಅಶೋಕ ಲಗಮಪ್ಪಗೋಳ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry