ಗ್ರಾಮೀಣ ಕ್ರೀಡೆಗಳ ಸಂರಕ್ಷಣೆಗೆ ಸಲಹೆ

7

ಗ್ರಾಮೀಣ ಕ್ರೀಡೆಗಳ ಸಂರಕ್ಷಣೆಗೆ ಸಲಹೆ

Published:
Updated:

ದೇವನಹಳ್ಳಿ: ಗ್ರಾಮೀಣ ಕ್ರೀಡೆಗಳು ಹೆಚ್ಚು ಕ್ರೀಯಾಶೀಲವಾಗಿ ಬೆಳವಣಿಗೆ ಕಾಣಲು ಪ್ರೋತ್ಸಾಹಕರು ಮುಂದೆ ಬರಬೇಕು ಎಂದು ಮುಖಂಡ ಹಾಗೂ ಕ್ರೀಡಾ ಸ್ಪರ್ಧೆ ಆಯೋಜಕ ಸಿ.ನಂಜಪ್ಪ ಅಭಿಪ್ರಾಯ ಪಟ್ಟರು.ದೇವನಹಳ್ಳಿ ತಾಲ್ಲೂಕಿನ ಆವತಿ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ಕುವೆಂಪು ವಿನಾಯಕ ಬಳಗದ ವತಿಯಿಂದ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ಗುಡ್ಡಗಾಡು ಓಟದ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು.ಇಂದಿನ ಯುವಕರು ಕೆಲವೇ ಕ್ರೀಡೆಗಳಿಗೆ ತಮ್ಮನ್ನು ಸೀಮಿತಗೊಳಿಸಿಕೊಂಡಿದ್ದಾರೆ. ಆದರೆ ಯಾವುದೇ ಅಂಕಣ, ಕ್ರೀಡಾಂಗಣವಿಲ್ಲದೆ, ಗುಡ್ಡಗಾಡು ಓಟದಿಂದ ದೈಹಿಕ ಗಟ್ಟಿತನ ಬೆಳೆಸಿಕೊಂಡಿದ್ದಾರೆ ಎಂದು ಶ್ಲಾಘಿಸಿದರು.ನಶಿಸುತ್ತಿರುವ ಅನೇಕ ಗ್ರಾಮೀಣ ಕ್ರೀಡೆಗಳನ್ನು ಹೊರತಂದು ಇಂದಿನ ಯುವ ಜನತೆಗೆ ಪರಿಚಯಿಸುವ ಅಗತ್ಯವಿದೆ. ಈ ದಿಸೆಯಲ್ಲಿ ಗ್ರಾಮೀಣ ಹವ್ಯಾಸಿ ಕ್ರೀಡೆಗಳಾದ ಮಲ್ಲಕಂಭ, ಗುಂಡುಕಲ್ಲು ಎತ್ತುವುದು, ಎತ್ತಿನಗಾಡಿ ಚಕ್ರ ಎತ್ತುವುದು ಮತ್ತು ಎಳೆಯುವುದು ಆತ್ಮರಕ್ಷಣೆಯ ಲಾಠಿ ವರಸೆ, ಕುಸ್ತಿ ಸ್ಪರ್ಧೆಗಳು ಅಳಿವಿನಂಚಿನಲ್ಲಿದ್ದು ಇವಕ್ಕೆ ಮರುಹುಟ್ಟು ನೀಡುವಂತಾಗಬೇಕು ಎಂದರು.ಎಂ.ಪಿ.ಸಿ.ಎಸ್ ಅಧ್ಯಕ್ಷ ಎ.ಸಿ.ನಾಗರಾಜ್, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಆವತಿ ವೆಂಕಟೇಶ್, ರಾಷ್ಟ್ರೀಯ ಅಥ್ಲೀಟ್ಸ್ ತೀರ್ಪುಗಾರ ಎಲ್.ಸಿ.ಚಂದ್ರಪ್ಪ, ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ವೆಂಕಟೇಶ, ಉಪಾಧ್ಯಕ್ಷ ಶ್ರೀನಿವಾಸ್, ಕಾರ್ಯದರ್ಶಿ ಕೆ.ಮಹೇಶ್. ಖಜಾಂಚಿ, ಜೆ.ಸತೀಶ್, ನಿರ್ದೇಶಕ ಮೋಹನ್ ಕುಮಾರ್, ತಿಪ್ಪೇನಹಳ್ಳಿ ಶ್ರಿನಿವಾಸ್, ಸಂಘಟನಾ ಕಾರ್ಯದರ್ಶಿ ಸುರೇಶ್, ಗುರುಪ್ರಸಾದ್, ಚಂದ್ರಶೇಖರ್, ಚನ್ನಕೇಶವ ಇದ್ದರು.

10 ಕಿ.ಮೀ ಓಟದ ಸ್ಪರ್ಧೆಯಲ್ಲಿ ವಿಜೇತ ಬಾಲಕರು: ಸಿದ್ದೇಶ್ ಕಾರಹಳ್ಳಿ (ಪ್ರಥಮ) ಪೃಥ್ವಿರಾಜ್ ಕೋರಮಂಗಲ (ದ್ವಿತೀಯ), ನವಿನ್ ಬಿದಲೂರು (ತೃತೀಯ)6 ಕಿ.ಮೀ ಓಟದ ಸ್ಪರ್ದೆ ವಿಜೇತ ಬಾಲಕಿಯರು: ಎಂ.ರಮ್ಯಾ ಬಿದಲೂರು (ಪ್ರಥಮ), ಬಿ.ಆರ್.ಕೀರ್ತನಾ ಬಿದಲೂರು (ದ್ವಿತಿಯ) ಎನ್.ಸುಧಾ, ಬಿದಲೂರು (ತೃತಿಯ).ಸಮಾಧಾನಕರ ಬಹುಮಾನ ಪಡೆದವರು:  ತಿಲಕ್,  ಅಶೋಕ್ ಆವತಿ, ಅಮೃತಾ, ರಂಜಿತಾ, ಬಿದಲೂರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry