ಶುಕ್ರವಾರ, ಮೇ 7, 2021
27 °C

ಗ್ರಾಮೀಣ ಕ್ರೀಡೆ ಕಣ್ಮರೆ: ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ತಾಲ್ಲೂಕಿನ ವೀರಾಪುರ ಗ್ರಾಮ ದೇವತೆ ದ್ಯಾಮವ್ವ ದೇವಿಯ ಉಡಿ ತುಂಬುವ ಕಾರ್ಯಕ್ರಮದ ಅಂಗವಾಗಿ ಇದೇ ಪ್ರಥಮ ಬಾರಿಗೆ ರೈತರನ್ನು ಪ್ರೋತ್ಸಾಹಿಸಲು ಹಾಗೂ ರೈತರಲ್ಲಿ ಗ್ರಾಮೀಣ ಕ್ರೀಡೆ ಬಗ್ಗೆ ಜಾಗೃತಿ ಮೂಡಿಸಲು  ಜೋಡು ಎತ್ತಿನ ಕುಂಟಿ ದಿಂಡಿನ ಓಡಿಸುವ ಸ್ಪರ್ಧೆ ಶನಿವಾರ ಗ್ರಾಮದ ಹೊಲವಲಯದಲ್ಲಿ  ನಡೆಯಿತು.ಗುತ್ತಿಗೆದಾರ ಶಿವಪುತ್ರಪ್ಪ ಕಣಗಿ ಹಾಗೂ ಯಲ್ಲಪ್ಪ ಕ್ಯಾದಿಗೇರಿ ಪಾರಿವಾಳ ಹಾರಿಬಿಡುವ ಮೂಲಕ  ಜೋಡು ಎತ್ತಿನ ಕುಂಟಿ ದಿಂಡಿನ ಓಡಿಸುವ ಸ್ಪರ್ಧೆಗೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ಗ್ರಾಮದಲ್ಲಿ ಸಹಬಾಳ್ವೆಯಿಂದ ಬಾಳಲು ಗ್ರಾಮೀಣ ಕ್ರೀಡೆಗಳನ್ನು ಏರ್ಪಡಿಸುವುದು ಅಗತ್ಯವಿದೆ. ಕ್ರಿಕೆಟ್ ನಂತಹ ಕ್ರೀಡೆಯಿಂದ ನಮ್ಮ ಗ್ರಾಮೀಣ ಕ್ರೀಡೆಗಳು ಕಣ್ಮರೆಯಾಗುತ್ತಿದ್ದು, ಅವುಗಳನ್ನುಉಳಿಸಿ ಬೆಳೆಸಿಕೊಂಡು ಹೋಗಬೇಕಾದ ಅಗತ್ಯವಿದೆ ಎಂದರು.ಫಲಿತಾಂಶ: ಹೊಳೆ ಹಂಗರಗಿಯ ಸಂಗಪ್ಪ ಮುದ್ದಾಪುರ ಅವರ ಎತ್ತುಗಳು ಪ್ರಥಮ ಬಹುಮಾನ (ರೂ 10,001), ಜಾಲಿಕಟ್ಟಿಯ ಗೋಪಾಲಗೌಡ ಪಾಟೀಲ ದ್ವಿತೀಯ (ರೂ 7001) ಮತ್ತು ಲೋಕಾಪುರದ ಸಂತೋಷ ಪಾಟೀಲ ತೃತೀಯ (ರೂ 5001) ಬಹುಮಾನ ಪಡೆದುಕೊಂಡವು.ಮಾಚಕನೂರ, ಹೊಳೆ ಹಂಗರಗಿ, ನಕ್ಕರಗುಂದಿ, ವೀರಾಪುರ, ಜಾಲಿಕಟ್ಟಿ, ಅರ್ಜುನಗಿ, ಎಸ್.ಕೆ.ಕೊಪ್ಪ, ಲೋಕಾಪುರ ಗ್ರಾಮಗಳಿಂದ ರೈತರು ತಮ್ಮ ಎತ್ತುಗಳನ್ನು ಸ್ಪರ್ಧೆಯಲ್ಲಿ ಭಾಗವಹಿಸಲು ತಂದಿದ್ದರು.ಗ್ರಾಮ ಪಂಚಾಯಿತಿ ಅಧ್ಯಕ್ಷ ಅಶೋಕ ಸೂಳಿಕೇರಿ, ಈರಪ್ಪ ಚವಡಿ, ನಾಗಪ್ಪ ಚವಡಿ, ಶಿವಲಿಂಗಪ್ಪ ಕದಾಂಪುರ, ದೀಪಕ ಕಣಗಿ, ಕಾಶೀನಾಥ ಕದಾಂಪುರ, ಯಲ್ಲಪ್ಪ ಸಾಳಗೊಂದಿ, ಪರಶುರಾಮ ಕದಾಂಪುರ, ಆನಂದ ನಾಯ್ಕರ ರಮೇಶ ಚವಡಿ, ಮಹಾಂತೇಶ ಗೌಡರ, ಶೇಖಪ್ಪ ಬೆಣ್ಣೂರ, ಮಳಿಯಪ್ಪ ಸೂಳಿಕೇರಿ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.