ಗ್ರಾಮೀಣ ದಸರಾ ಇಂದಿನಿಂದ

7

ಗ್ರಾಮೀಣ ದಸರಾ ಇಂದಿನಿಂದ

Published:
Updated:

ಮೈಸೂರು: ದಸರಾ ಮಹೋತ್ಸವ ಅಂಗವಾಗಿ ಗ್ರಾಮೀಣ ದಸರಾ ಸೆ. 25ರಂದು ನಂಜನಗೂಡಿನಲ್ಲಿ ಆರಂಭಗೊಳ್ಳಲಿದೆ. ಜತೆಗೆ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲೂ ದಸರಾ ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.ನಂಜನಗೂಡಿನ ಶ್ರೀ ಕಂಠೇಶ್ವರ ಕಲಾಭವನದಲ್ಲಿ ಸೆ. 25ರಂದು ಬೆಳಿಗ್ಗೆ 10 ಗಂಟೆಗೆ ಗಾ್ರಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಎಚ್‌.ಕೆ. ಪಾಟೀಲ ಅವರು ಗ್ರಾಮೀಣ ದಸರಾ ಉದ್ಘಾಘಟಿಸುವರು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಜರಿರುತ್ತಾರೆ. ಮುಖ್ಯ ಅತಿಥಿ ಗಳಾಗಿ ಡಾ.ಎಚ್‌.ಸಿ. ಮಹದೇವಪ್ಪ, ಜಿ.ಪಂ. ಅಧ್ಯಕ್ಷ ಎಂ. ಮಹದೇವ್‌, ಸಂಸದರಾದ ಆರ್‌. ಧು್ರವ ನಾರಾಯಣ, ಎಚ್‌. ವಿಶ್ವನಾಥ್‌ ಹಾಗೂ ರಮಾ್ಯ ಭಾಗವಹಿಸುವರು. ಜಿಲ್ಲಾ ಉಸು್ತವಾರಿ ಸಚಿವ ವಿ. ಶ್ರೀನಿವಾಸ ಪ್ರಸಾದ್‌ ಅಧ್ಯಕ್ಷತೆ ವಹಿಸುವರು.ಸೆ. 25ರಿಂದ ಅಕ್ಟೋಬರ್‌ 1ರವರೆಗೆ ಜಿಲ್ಲೆಯ 7 ತಾಲ್ಲೂಕುಗಳಲ್ಲಿ ನಡೆಯುವ ಗ್ರಾಮೀಣ ದಸರಾದಲ್ಲಿ ಪುರುಷರಿಗಾಗಿ ಕೆಸರು ಗದ್ದೆ ಓಟ (50 ಮೀಟರ್), ಗುಂಡು ಎತ್ತುವ ಸ್ಪರ್ಧೆ, ಮೂಟೆ ಹೊತ್ತು ಓಡುವ ಸ್ಪರ್ಧೆಗಳಿರುತ್ತವೆ. ಮಹಿಳೆಯರಿಗೆ ರಂಗೋಲಿ ಬಿಡಿಸುವುದು, ನೀರಿನ ಬಿಂದಿಗೆ ಹೊತ್ತು ಓಡುವುದು, ಬುಟ್ಟಿಯಲ್ಲಿ ರಾಗಿ ಹೊತ್ತು ಓಡುವುದು, ಹಗ್ಗ ಜಗ್ಗಾಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.ಕಂಸಾಳೆ, ಕೀಲು ಕುಣಿತ, ನಂದಿಕೋಲು, ಭಜನೆ, ಕೋಲಾಟ, ವೀರಗಾಸೆ, ತಮಟೆ/ನಗಾರಿ, ಸೋಬಾನೆ ಪದ, ಡೊಳ್ಳು ಕುಣಿತ, ಗೀಗಿ ಪದ, ವೀರ ಮಕ್ಕಳ ಕುಣಿತ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.‘ಸೆ. 26ರಂದು ಬೆಳಿಗ್ಗೆ 10 ಗಂಟೆಗೆ ಪಿರಿಯಾಪಟ್ಟಣದ ಗೋಣಿಕೊಪ್ಪ ರಸ್ತೆಯಲ್ಲಿ ಬಾಲಕರ ಪದವಿಪೂರ್ವ ಕಾಲೇಜಿನಲ್ಲಿ ಗ್ರಾಮೀಣ ಕ್ರೀಡೆಗಳು ನಡೆಯಲಿವೆ. ಸೆ. 26ರಂದು ಮೈಸೂರು ತಾಲ್ಲೂಕಿನ ಉದ್ಬೂರು ಗ್ರಾಮದ ಸಮುದಾಯ ಭವನ ಹತ್ತಿರ ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸೆ. 27ರಂದು ಬೆಳಿಗೆ್ಗ 10 ಗಂಟೆಗೆ ಉದ್ಬೂರು ಗ್ರಾಮದ ಮುಖ್ಯರಸ್ತೆಯಲ್ಲಿ ಗ್ರಾಮೀಣ ದಸರಾ ಉದ್ಘಾಟನೆಗೊಳ್ಳಲಿದೆ.ಸೆ. 25 ಹಾಗೂ 26ರಂದು ಕೆ.ಆರ್‌. ನಗರದ ಬಯಲು ರಂಗಮಂದಿರ ಹಾಗೂ ಆರ್ಕೇಶ್ವರ ದೇವಸ್ಥಾನ ಮುಂಭಾಗದಲ್ಲಿ ಕ್ರೀಡೆಗಳು, 28ರಂದು ಬಯಲು ರಂಗಮಂದಿರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ’ ಎಂದು ಗಾ್ರಮೀಣ ದಸರಾ ಸಮಿತಿ ಅಧ್ಯಕ್ಷ ಸಿ. ಮಹದೇವು ಕೋಟೆಹುಂಡಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.‘ಸೆ. 26ರಂದು ಬೆಳಿಗ್ಗೆ 10 ಗಂಟೆಗೆ

ತಿ. ನರಸೀಪುರದ ಅಗ್ನಿಶಾಮಕ ಠಾಣೆಯ ಬಳಿ ಕ್ರೀಡೆಗಳು, ಸೆ. 29ರಂದು ಬೆಳಿಗ್ಗೆ 10 ಗಂಟೆಗೆ ವಿದ್ಯೋದಯ ಕಾಲೇಜಿನಲ್ಲಿ ದಸರಾ ಉದ್ಘಾಟನೆ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಹುಣಸೂರಲ್ಲಿ ಸೆ. 27ರಂದು ಬೆಳಿಗ್ಗೆ 10 ಗಂಟೆಗೆ ಕ್ರೀಡೆ, 28ರಂದು ಬೆಳಿಗ್ಗೆ 10 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ, 30ರಂದು ಬೆಳಿಗೆ್ಗ 10 ಗಂಟೆಗೆ ದಸರಾ ಉದಾ್ಘಟನೆಯಾಗಲಿದೆ.ಈ ಎಲ್ಲ ಕಾರ್ಯಕ್ರಮಗಳನ್ನು ಪುರಸಭಾ ಮೈದಾನದಲ್ಲಿ ಆಯೋಜಿಸಲಾಗಿದೆ. ಸೆ. 26ರಂದು ಬೆಳಿಗೆ್ಗ 10 ಗಂಟೆಗೆ ಎಚ್‌.ಡಿ. ಕೋಟೆಯ ತಾಲ್ಲೂಕಿನ ಕ್ರೀಡಾಂಗಣದಲ್ಲಿ ಕ್ರೀಡೆ, ಸೆ. 27ರಂದು ಬೆಳಿಗೆ್ಗ 10 ಗಂಟೆಗೆ ಡಾ.ಬಿ.ಆರ್‌. ಅಂಬೇಡ್ಕರ್‌ ಭವನ ಮತು್ತ ಗುರುಭವನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಅಕ್ಟೋಬರ್‌ 1ರಂದು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಗಾ್ರಮೀಣ ದಸರಾ ಉದಾ್ಘಟನೆಗೊಳ್ಳಲಿದೆ’ ಎಂದು ವಿವರಿಸಿದರು.‘ಗಾ್ರಮೀಣ ದಸರಾ ನಡೆಯುವ ಸ್ಥಳಗಳಲ್ಲಿ ವಸು್ತಪ್ರದರ್ಶನದ ಮಳಿಗೆಗಳಿರುತ್ತವೆ. ಇದರಲ್ಲಿ ಸರ್ಕಾರದ ವಿವಿಧ ಇಲಾಖೆಗಳ ಯೋಜನೆಗಳ ಕುರಿತು ಪರಿಚಯದ ಮಳಿಗೆಗಳೂ ಇರುತ್ತವೆ’ ಎಂದರು.ಪತ್ರಿಕಾಗೋಷಿ್ಠಯಲ್ಲಿ ಸಮಿತಿ ಉಪಾಧ್ಯಕ್ಷ ಟಿ.ಎಸ್‌. ಸತಾ್ಯನಂದ, ಸದಸ್ಯ ಕಾರ್ಯದರ್ಶಿ ಎಚ್‌.ಆರ್‌. ತಿಪ್ಪೇಶ್‌ ಹಾಗೂ ಗಾ್ರಮೀಣ ಉಪ ಸಮಿತಿ ಸದಸ್ಯರು ಹಾಜರಿದ್ದರು.ಮೈಸೂರು ತಾಲ್ಲೂಕು ಗ್ರಾಮೀಣ ದಸರಾ

  ತಾಲ್ಲೂಕಿನಲ್ಲಿ ಈ ಬಾರಿ ಜಯಪುರ ಹೋಬಳಿ ಉದ್ಬೂರು ಗ್ರಾಮದಲ್ಲಿ ತಾಲ್ಲೂಕು ಗ್ರಾಮೀಣ ದಸರಾವನ್ನು ಆಯೋಜಿಸಲಾಗಿದೆ. ಗ್ರಾಮೀಣ ದಸರಾದ ಕಾರ್ಯಕ್ರಮಗಳು ಸೆ. 25 ರಂದು ವರಣಾ ಗ್ರಾಮದಲ್ಲಿ ಕೆಸರು ಗದ್ದೆ ಓಟದ ಮೂಲಕ ಪ್ರಾರಂಭವಾಗಲಿದೆ.  26 ರಂದು ಉದ್ಬೂರು ಗ್ರಾಮದ ಪ್ರೌಢಶಾಲಾ ಮೈದಾನದಲ್ಲಿ ಗ್ರಾಮೀಣ ಕ್ರೀಡಾಕೂಟ ಜರುಗಲಿದೆ. ಕ್ರೀಡಾಕೂಟದಲ್ಲಿ ಪುರುಷರಿಗಾಗಿ ಗುಂಡು ಎತ್ತುವ ಸ್ಪರ್ಧೆ, ಗೊಬ್ಬರದ ಮೂಟೆ ಹೊತ್ತು ಓಡುವ ಸ್ಪರ್ಧೆ, ಕುಸ್ತಿ ಮತ್ತು ಸೈಕಲ್ ರೇಸ್‌ಗಳನ್ನು ನಡೆಸಲಾಗುತ್ತದೆ. ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ, ಬಿಂದಿಗೆಯಲ್ಲಿ ನೀರು ಹೊತ್ತು ಓಡುವುದು ಮತ್ತು ಬುಟ್ಟಿಯಲ್ಲಿ ರಾಗಿ ತುಂಬಿ ಓಡುವ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಸ್ಪರ್ಧೆಗಳಲ್ಲಿ  ವಿಜೇತರಾದ ಇಬ್ಬರನ್ನು ಜಿಲ್ಲಾ ಮಟ್ಟದ ರೈತ ದಸರಾಕ್ಕೆ ಕಳುಹಿಸಲಾಗುವುದು.   ಸೆ. 27 ರಂದು ಉದ್ಬೂರಿನಲ್ಲಿ ವೈಭವ ಯುತವಾದ ಜನಪರ ಕಲಾ ತಂಡಗಳನ್ನು ಒಳಗೊಂಡ ಮೆರವಣಿಗೆಯಲ್ಲಿ ಚಾಮುಂಡೇಶ್ವರಿ ದೇವಿಯನ್ನು ಆನೆಯ ಮೇಲೆ ಊರಿನ ಪ್ರಮುಖ ಬೀದಿಯಲ್ಲಿ ಉತ್ಸವ ಮಾಡಲಾಗುವುದು. ನಂತರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಸಭಾ ಕಾರ್ಯಕ್ರಮ ಮತ್ತು ಸಾಂಸ್ಸೃತಿಕ ಕಲಾ ತಂಡಗಳ ಪ್ರದರ್ಶನವನ್ನು ಏರ್ಪಡಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry