ಗ್ರಾಮೀಣ ನಿರುದ್ಯೋಗಿಗಳಿಗೆ ಉದ್ಯೋಗ ದಾರಿದೀಪ

7

ಗ್ರಾಮೀಣ ನಿರುದ್ಯೋಗಿಗಳಿಗೆ ಉದ್ಯೋಗ ದಾರಿದೀಪ

Published:
Updated:

ಕೋಲಾರ: ನಗರ ಹೊರವಲಯದ ಹೊನ್ನೇನಹಳ್ಳಿಯಲ್ಲಿರುವ ಕೆನರಾ ಬ್ಯಾಂಕ್ ಗ್ರಾಮೀಣ ಕೈಗಾರಿಕಾ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ ಹೆಸರು ಕೇಳಿದರೆ ಜಿಲ್ಲೆಯ ಗ್ರಾಮೀಣ ಪ್ರದೇಶದ ಸಾವಿರಾರು ವಿದ್ಯಾವಂತ ನಿರುದ್ಯೋಗಿ ಯುವಕ- ಯುವತಿಯರ ಕಣ್ಣು ಆತ್ಮವಿಶ್ವಾಸದಿಂದ ಮಿನುಗುತ್ತದೆ.ಎರಡು ದಶಕಕ್ಕೂ ಮೀರಿದ ಅವಧಿಯಿಂದ ಈ ಸಂಸ್ಥೆಯು ಜಿಲ್ಲೆಯ ನಿರುದ್ಯೋಗಿಗಳ ಪಾಲಿಗೆ ಬದುಕಿನ ಸ್ವಾವಲಂಬನೆ ಪಾಠವನ್ನು ಕಲಿಸಿದೆ.18ರಿಂದ 35ರ ವಯಸ್ಸಿನ ಯುವಕ- ಯುವತಿಯರಿಗೆ ಊಟ ವಸತಿ ಸಹಿತ, ಸಂಪೂರ್ಣ ಉಚಿತವಾಗಿ ಹತ್ತಾರು ಬಗೆಯ ಉದ್ಯೋಗ ತರಬೇತಿ ನೀಡುವ ಸಂಸ್ಥೆಯ ಸಂಪರ್ಕಕ್ಕೆ ಬಂದ ಹಲವರು ಸ್ವಂತ ಉದ್ಯೋ ವನ್ನು ಕೈಗೊಂಡು ಬದುಕಿನಲ್ಲಿ ಯಶಸ್ವಿಯಾಗಿ ್ದದಾರೆ.ಕೇಂದ್ರ ಮತ್ತು ರಾಜ್ಯ ಸರ್ಕಾರ ಉದ್ಯೋಗ ಸಂಬಂಧಿ ತರಬೇತಿ ಕಾರ್ಯಕ್ರಮ ಗಳನ್ನೂ ಅನುಷ್ಠಾನಗೊಳಿಸು ವುದರ ಜೊತೆಗೆ ಈ ಸಂಸ್ಥೆಯು 1992ರಲ್ಲಿ ಸ್ಥಾಪನೆಯಾದ ಬಳಿಕ ತನ್ನದೇ ವಿಶಿಷ್ಟ ತರಬೇತಿಗಳನ್ನೂ ನೀಡುತ್ತಿರುವುದು ವಿಶೇಷ.ರೇಡಿಯೋ, ಟಿವಿ ರಿಪೇರಿ, ಬುಕ್ ಬೈಂಡಿಂಗ್, ಪಂಪ್‌ಸೆಟ್ ರಿಪೇರಿ, ಯಂತ್ರಶಕ್ತಿ ಸಹಿತ ಮರದ ಕೆಲಸ, ಎರೆಹುಳು ಗೊಬ್ಬರ ತಯಾರಿಕೆ, ಸೆಲ್‌ಫೋನ್ ಸರ್ವಿಸಿಂಗ್, ಕಂಪ್ಯೂಟರ್ ಹಾರ್ಡ್‌ವೇರ್,  ಗೃಹೋಪಯೋಗಿ ವಸ್ತುಗಳ ರಿಪೇರಿ, ಫೋಟೋಗ್ರಫಿ  ಮತ್ತು ವಿಡಿಯೋಗ್ರಫಿ, ಬಿಲ್ಡಿಂಗ್ ಪ್ಲಂಬಿಂಗ್, ವೆಲ್ಡಿಂಗ್ ಮತ್ತು ಫ್ಯಾಬ್ರಿಕೇಶನ್, ಬೇಕರಿ, ಟೈಲರಿಂಗ್, ಬ್ಯೂಟಿಪಾರ್ಲರ್, ಕೃತಕ ಆಭರಣ ತಯಾರಿಕೆ, ಕಂಪ್ಯೂಟರ್ ಕಚೇರಿ ನಿರ್ವಹಣೆ ಮತ್ತು ಅಕೌಂಟಿಂಗ್, ಜೇನು ಸಾಕಾಣಿಕೆ, ಮನೆ ವೈರಿಂಗ್ ಸೇರಿದಂತೆ ಹತ್ತು ಹಲವು ತರಬೇತಿಗಳನ್ನು ವರ್ಷವಿಡೀ ನೀಡುವುದು ಇಲ್ಲಿನ ವಿಶೇಷ. ಮತ್ತೊಂದು ವಿಶೇಷವೆಂದರೆ ಯಾವುದೇ ತರಬೇತಿಯನ್ನು ವರ್ಷಕ್ಕೆ ಒಮ್ಮೆ ಮಾತ್ರ ನೀಡುವುದು. ಅಂದರೆ ಯಾವುದೇ ತರಬೇತಿ ಪುನರಾವರ್ತನೆಯಾಗುವುದಿಲ್ಲ.1654 ಮಂದಿ: ಕೇಂದ್ರ ಮತ್ತು ರಾಜ್ಯ ಸರ್ಕಾರದ ತರಬೇತಿ ಕಾರ್ಯಕ್ರಮಗಳೂ ಸೇರಿ ದಂತೆ ಸಂಸ್ಥೆಯಲ್ಲಿ 2011- 12ನೇ ಸಾಲಿನಲ್ಲಿ 1654 ಮಂದಿಗೆ ಸ್ವ ಉದ್ಯೋಗ ತರಬೇತಿ ಗಳನ್ನು ನೀಡಲಾಗಿದೆ. ಅದಲ್ಲದೆ ಹಲವು ವಿಷಯಗಳಲ್ಲಿ 21 ಎರಡು ದಿನದ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, 638 ಮಂದಿ ಪಾಲ್ಗೊಂಡಿದ್ದಾರೆ.2010- 11ನೇ ಸಾಲಿನಲ್ಲಿ 3513 ಮಂದಿಗೆ ತರಬೇತಿ ನೀಡಿದ್ದು, 1896 ಮಂದಿ (ಶೇ 72) ಸ್ವ ಉದ್ಯೋಗದಲ್ಲಿ ನಿರತರಾಗಿದ್ದಾರೆ. ಅವರಿಗೆ 4.84 ಕೋಟಿ ಸಾಲವನ್ನು ನೀಡಲಾಗಿದೆ. ರೈತ ತರಬೇತಿ ಘಟಕದಿಂದ ಕೃಷಿ ಸಂಬಂಧಿಯಾದ ತರಬೇತಿಯನ್ನೂ ನೀಡಲಾಗಿದ್ದು, 77 ರೈತರಿಗೆ 7.70 ಲಕ್ಷ ಸಾಲ ಸೌಲಭ್ಯವನ್ನೂ ನೀಡಿರು ವುದು ವಿಶೇಷ.ಗ್ರಾಮೀಣ ಪ್ರದೇಶದ ಯುವಕ ಯುವತಿ ಯರಲ್ಲಿ ಉದ್ಯೋಗ ಸಂಬಂಧಿ ಕೌಶಲ ಮೂಡಿಸುವುದು, ಸ್ಥಳೀಯ ಸಂಪನ್ಮೂಲಗಳನ್ನು ಆಧರಿಸಿದ ಉದ್ಯೋಗ ತರಬೇತಿ ನೀಡುವುದು, ಸಣ್ಣ ಮಟ್ಟದ ಕೈಗಾರಿಕೆ ಮತ್ತು ಉದ್ಯೋಗ ಸಂಸ್ಥೆಗಳನ್ನು ಸ್ಥಾಪಿಸುವಲ್ಲಿ ಮಾರ್ಗದರ್ಶನ ನೀಡುವುದು ಸಂಸ್ಥೆ ಪ್ರಮುಖ ಧ್ಯೇಯ ಎಂದು ಸಂಸ್ಥೆಯ ನಿರ್ದೇಶಕ ಆರ್.ಬಾಲಸುಬ್ರಹ್ಮಣ್ಯಂ `ಪ್ರಜಾವಾಣಿ~ಗೆ ತಿಳಿಸಿದರು.ಸಾಲ ಸೌಲಭ್ಯ: ನಮ್ಮಲ್ಲಿ ತರಬೇತಿ ಪಡೆದವರಿಗೆ ನಮ್ಮ ಬ್ಯಾಂಕ್‌ನಿಂದಲೇ ಸಾಲ ಸೌಲಭ್ಯ ನೀಡಲು ಶಿಫಾರಸು ಮಾಡಲಾಗುವುದು. ಅಲ್ಲದೆ, ವೃತ್ತಿ ಕೌಶಲಗಳ ಜೊತೆಗೆ ವ್ಯಕ್ತಿತ್ವ ವಿಕಸನ, ಸಂವಹನ ಕೌಶಲ, ನಾಯಕತ್ವದ ಗುಣಗಳು, ಬ್ಯಾಂಕಿಂಗ್ ಕುರಿತೂ ಮಾಹಿತಿ ನೀಡಲಾಗುವುದು ಎಂದರು.ಅನುಕೂಲ: ಸಂಸ್ಥೆಯಿಂದ ತರಬೇತಿ ಪಡೆದ ಬಳಿಕ ಆರ್ಥಿಕ ಸ್ವಾವಲಂಬನೆ ಸಾಧ್ಯವಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉದ್ಯೋಗಿ ಯೋಜನೆಯಡಿ ಸಬ್ಸಿಡಿ ದರದಲ್ಲಿ ಸಾಲ ಪಡೆದು ಮನೆಯಲ್ಲಿ ಬ್ಯೂಟಿಪಾರ್ಲರ್ ನಡೆಸುತ್ತಿರುವೆ. ಬದುಕು ಈಗ ಹೆಚ್ಚು ಸಂತಸ ದಾಯಕವಾಗಿದೆ ಎಂಬುದು ನಗರದ ಕನಕನ ಪಾಳ್ಯ ಗೃಹಿಣಿ ಭವ್ಯ ಅವರ ನುಡಿ.ಸಂಸ್ಥೆಯಲ್ಲಿ ತರಬೇತಿ ಪಡೆಯದೆ ಹೋಗಿದ್ದರೆ ಸ್ವಂತ ಉದ್ಯೋಗ ಎಂಬುದು ಕನಸಿನ ಮಾತಾಗು ತ್ತಿತ್ತು ಎಂಬುದು ನಗರದ ಹೊಸ ಬಸ್ ನಿಲ್ದಾಣದ ಸಮೀಪ ಮೊಬೈಲ್ ಸರ್ವಿಸ್ ಅಂಗಡಿ ತೆರೆದಿರುವ ಸತೀಶ್ ನುಡಿ. ಆಸಕ್ತ ಗ್ರಾಮೀಣ ಪ್ರದೇಶದ ಯುವಕ ಯುವತಿಯರು ಆರ್. ಬಾಲಸುಬ್ರಹ್ಮಣ್ಯಂ ಅವರನ್ನು 9449631418ರಲ್ಲಿ ಸಂಪರ್ಕಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry