ಸೋಮವಾರ, ಮೇ 17, 2021
22 °C

ಗ್ರಾಮೀಣ ಭಾಗದಲ್ಲಿ ಮದ್ಯ ಮಾರಾಟ ತಡೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಾಮಕ್ಕಿ (ಸಿದ್ದಾಪುರ): ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದ್ದು ಇದನ್ನು ತಡೆಯಲು ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಇತ್ತೀಚೆಗೆ ನಡೆದ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಆಗ್ರಹಿಸಿದರು.



ಮದ್ಯಮುಕ್ತ ಸಮಾಜವೇ ನಮ್ಮ ಗುರಿಯಾಗಿದೆ. ಇದರ ಹೋರಾಟಕ್ಕೆ ಗ್ರಾಮಸ್ಥರು ಪಕ್ಷಭೇದ ಮರೆತು ಸಹಕಾರ ನೀಡಬೇಕು ಎಂದು ಪಂಚಾಯಿತಿ ಉಪಾಧ್ಯಕ್ಷೆ ಬೆಪ್ಡೆ ರತಿ ಶೆಡ್ತಿ ಹೇಳಿದರು. ಮಹಿಳಾ ಸಂಘಟನೆಗಳ ಪರವಾಗಿ ಅವರು ಮಾತನಾಡಿದರು.



ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷ ಉದಯ್ ಶೆಟ್ಟಿ, `ಜನರು ಅಕ್ರಮ ಮದ್ಯ, ಕಳ್ಳಬಟ್ಟಿ ಸೇವಿಸಿ ಪ್ರಾಣಕ್ಕೆ ಅಪಾಯವಾದರೆ ಗ್ರಾಮ ಪಂಚಾಯಿತಿಯನ್ನು ಹೊಣೆ ಮಾಡಬಾರದು~ ಎಂದರು.ಪ್ರತಿಕ್ರಿಯಿಸಿದ ಅಬಕಾರಿ ನಿರೀಕ್ಷಕಿ ಶುಭದಾ ಸಿ.ನಾಯಕ್, `ಪ್ರತಿಯೊಬ್ಬರಿಗೂ ನಿಯಮಿತ ಲೀಟರ್‌ನಷ್ಟು ಮದ್ಯ ಇರಿಸಿಕೊಳ್ಳಲು ಕಾನೂನಿನಲ್ಲಿ ಅವಕಾಶವಿದೆ.



ಕುಂದಾಪುರದಿಂದ ನಾವು ಆಗಮಿಸುವಾಗ ಮಾರಾಟಗಾರಿಗೆ ನಮ್ಮ ಕಾರ್ಯಾಚರಣೆ ಮಾಹಿತಿ ಸೋರಿ ಹೋಗಿ ಹಿನ್ನಡೆ ಉಂಟಾಗುತ್ತಿದೆ. ಸಾರ್ವಜನಿಕರು ಅಕ್ರಮ ಮದ್ಯ ಮಾರಾಟ ಬಗ್ಗೆ ಗುಪ್ತವಾಗಿ ಮಾಹಿತಿ ನೀಡಬೇಕು ಎಂದರು.



ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜೇಶ್ ಶೆಣೈ, ಅಬಕಾರಿ ಸಬ್ ಇನ್‌ಸ್ಪೆಕ್ಟರ್ ಶಂಕರ್, ನಮ್ಮ ಭೂಮಿ ಸಂಸ್ಥೆಯ ಅರುಣಾಚಲ ಇದ್ದರು. ಬೆಪ್ಡೆ ಶ್ಯಾಮರಾಜ್ ಶೆಟ್ಟಿ, ಹಂಜ ವಿಶ್ವಾಸ್ ಕುಮಾರ್ ಶೆಟ್ಟಿ, ಗಣೇಶ್, ದಯಾನಂದ ಪೂಜಾರಿ, ರಾಜೀವ ಹಾಂಡ, ಮದನ್ ಮೋಹನ ಉಳ್ಳೂರು, ಕಾರ್ಯದರ್ಶಿ ಬಾಸ್ಕರ್ ಶೆಟ್ಟಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸದಸ್ಯರು, ಸ್ತ್ರೀಶಕ್ತಿ ಸಂಘಟನೆ ಸದಸ್ಯರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.