ಗ್ರಾಮೀಣ ಮಕ್ಕಳತ್ತ ಕಾಳಜಿಯ ಪಕ್ಷ

7

ಗ್ರಾಮೀಣ ಮಕ್ಕಳತ್ತ ಕಾಳಜಿಯ ಪಕ್ಷ

Published:
Updated:

ಎಲ್ಲ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಸಾರ್ವಜನಿಕರಿಗೆ ಹಣಕಾಸು ನೆರವು ನೀಡುವ ಆಕರ್ಷಕ ಭರವಸೆಗಳನ್ನು ನೀಡಿ, ಜನರನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ ಎಂದು ಅನಿಸುತ್ತಿದೆ.ಆದರೆ ಒಂದು ರಾಜಕೀಯ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿರುವ ಎಲ್ಲ ಕನ್ನಡ ಶಾಲೆಯಲ್ಲಿ 5ನೇ ತರಗತಿಯಿಂದ ಇಂಗ್ಲಿಷ್ ಮಾಧ್ಯಮದ ವಿಭಾಗ ತೆರೆಯುವ ಅಂಶವನ್ನು ಪ್ರಣಾಳಿಕೆಯಲ್ಲಿ ಸೂಚಿಸಿರುವುದು ಸುಸ್ವಾಗತ.

ಗ್ರಾಮೀಣ ಮಕ್ಕಳು ಒಂದಿಷ್ಟು ಇಂಗ್ಲಿಷ್ ಓದಿ ಮುಂದೆ ಬರಬೇಕೆಂಬುದೇ ಆ ಪಕ್ಷ ದ ಅಂತರಾಳದ ಅನಿಸಿಕೆ ಇರಬಹುದು. ಆದರೆ  ಸಾಹಿತಿಗಳು ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮದಲ್ಲಿ ಓದಿಸುತ್ತಾ ಬೇರೆಯವರಿಗೆ ಕನ್ನಡ ಭಾಷೆಯ ಬಗ್ಗೆ ಬಿಟ್ಟಿ ಉಪದೇಶ ಮಾಡುತ್ತಿರುವುದು ನಾಚಿಕೆಗೇಡಿತನದ ವಿಷಯ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry