ಭಾನುವಾರ, ಮೇ 22, 2022
27 °C

ಗ್ರಾಮೀಣ ಮಹಿಳೆಯರಿಗೆ ಆರೋಗ್ಯ ಜಾಗೃತಿ ಮೂಡಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ‘ಮಹಿಳೆಯರು ಸಂಘಟನೆ ಹಾಗೂ ಸೇವೆಯನ್ನು ನಗರಕ್ಕೆ ಸೀಮಿತಗೊಳಿಸದೆ, ಗ್ರಾಮೀಣ ಪ್ರದೇಶಕ್ಕೂ ವಿಸ್ತರಿಸುವ ಅಗತ್ಯವಿದೆ’ ಎಂದು ಶಾಸಕ ಎಚ್.ಎಸ್. ಪ್ರಕಾಶ್ ನುಡಿದರು. ವಿಶ್ವ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ನಗರದ ಮಾನವೀಯ ಮಹಿಳಾ ಅಧ್ಯಯನ ಕೇಂದ್ರದವರು ಗುರುವಾರ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಏರ್ಪಡಿಸಿದ್ದ ‘ಸಾಧಕಿಯರಿಗೆ ಸನ್ಮಾನ’ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.‘ಉಳ್ಳವರು ಹಾಗೂ ವಿದ್ಯಾವಂತರು ಇರುವ ಪ್ರದೇ ಶದಲ್ಲಿ ಸೇವೆ ಮಾಡುವ ಬದಲು ಗ್ರಾಮೀಣ ಬಡ ಮಹಿಳೆಯರಲ್ಲಿ ಆರೋಗ್ಯ ಹಾಗೂ ಸರ್ಕಾರದ ಸವಲತ್ತುಗಳ ಬಗ್ಗೆ ಅರಿವು ಮೂಡಿಸಬೇಕು. ಮಹಿಳಾ ಸಂಘ ಗಳು ತಯಾರಿಸುವ ಉತ್ಪನ್ನಗಳನ್ನು ಪ್ರೋತ್ಸಾಹಿಸಿ ಅವರಿಗೆ ಬೆಂಬಲ ನೀಡುವ ಕೆಲಸ ನಡೆಯಬೇಕಿದೆ. ಸ್ತ್ರೀ ಶಕ್ತಿ ಸಂಘಗಳಿಗೆ ಹತ್ತು ಹಲವು ಸೌಲಭ್ಯಗಳನ್ನು ಸರ್ಕಾರಿ ಒದಗಿಸಿದ್ದು ಮಹಿಳಾ-ಮಕ್ಕಳ ಇಲಾಖೆ ಅಧಿಕಾರಿಗಳು ಅವು ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು ಎಂದರು.ಆಶಯ ನುಡಿಗಳನ್ನಾಡಿದ ಮಾನವೀಯ ಮಹಿಳಾ ಅಧ್ಯಯನ ಕೇಂದ್ರದ ಜಿಲ್ಲಾ ಘಟಕದ ಅಧ್ಯಕ್ಷೆ ಕೆ.ಟಿ. ಜಯಶ್ರೀ ‘ಜಿಲ್ಲೆಯಲ್ಲಿ ಸಂಘ ಆರಂಭವಾಗಿ 5 ವರ್ಷಗಳಾಗಿವೆ. ಈ ಅವಧಿಯಲ್ಲಿ ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಸಂಸ್ಥೆ ಕಾರ್ಯಕ್ರಮಗಳನ್ನು ಆಯೋಜಿಸಿ ಬಡ ಹೆಣ್ಣು ಮಕ್ಕಳಲ್ಲಿ  ಆರೋಗ್ಯ, ಮೂಢನಂಬಿಕೆ ಮುಂತಾದ ವಿಚಾರಗಳಲ್ಲಿ ಜಾಗೃತಿ ಮೂಡಿಸಲಾಗಿದೆ. ಮಹಿಳೆಯರ ಬಗ್ಗೆ ಮಹಿಳೆಯರೇ ಕಾಳಜಿ ತೆಗೆದುಕೊಳ್ಳಬೇಕಾದ ಅಗತ್ಯ ಇದೆ’ ಎಂದರು.

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಶಾಸಕ ಎಚ್.ಎಸ್. ಪ್ರಕಾಶ್ ಸನ್ಮಾನಿಸಿದರು. ಬಳಿಕ ‘ಹೆಣ್ಣಿನ ಆರೋಗ್ಯ - ನಾಡಿನ ಸೌಭಾಗ್ಯ’ ವಿಷಯ ಕುರಿತು ಸ್ತ್ರೀ ರೋಗ ತಜ್ಞರಾದ ಡಾ. ಸಾವಿತ್ರಿ ಅವರು ಸಂವಾದ ನಡೆಸಿಕೊಟ್ಟರು.ಜಿಲ್ಲಾಧಿಕಾರಿ ನವೀನ್ ರಾಜ್ ಸಿಂಗ್ ಅವರ ಪತ್ನಿ ತುಲಿಕಾ ರಾಜ್ ಸಿಂಗ್ ಕಾರ್ಯಕ್ರಮ ಉದ್ಘಾಟಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಾಯಕ ಉಪ ನಿರ್ದೇಶಕಿ ವಿ. ಗೀತಾ, ಉಪ ತಹಶೀಲ್ದಾರ್ ಎನ್.ಕೆ. ಶಾರದಾಂಬಾ, ವಾತ್ಸಲ್ಯ ನರ್ಸಿಂಗ್ ಹೋಂನ ನಿರ್ದೇಶಕಿ ಡಾ. ಭಾರತಿ ರಾಜಶೇಖರ್, ಮಾನವೀಯ ಮಹಿಳಾ ಅಧ್ಯಯನ ಕೇಂದ್ರದ ರಾಜ್ಯ ಘಟಕದ ಅಧ್ಯಕ್ಷ ಬಿ.ಸಿ. ಶೈಲಾ ನಾಗರಾಜ್, ಮಲ್ನಾಡ್ ನರ್ಸಿಂಗ್ ಹೋಂನ ಸ್ತ್ರೀ ರೋಗ ತಜ್ಞರಾದ ಡಾ. ಸಾವಿತ್ರಿ, ಕವಯಿತ್ರಿ ಆರ್. ರೂಪಾ, ವಕೀಲರಾದ ಪುಷ್ಪಾ ಕೆಂಚಪ್ಪ, ಮಮತಾ ಪ್ರಸಾದ್ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.