ಗ್ರಾಮೀಣ ಮಹಿಳೆಯರ ಕಲ್ಯಾಣಕ್ಕೆ ಜಾಗೃತಿ ಅಗತ್ಯ

7

ಗ್ರಾಮೀಣ ಮಹಿಳೆಯರ ಕಲ್ಯಾಣಕ್ಕೆ ಜಾಗೃತಿ ಅಗತ್ಯ

Published:
Updated:

ಚಿಕ್ಕಬಳ್ಳಾಪುರ: ನಗರದ ಮಹಿಳಾ ಸಾಮಖ್ಯಾ ಕೇಂದ್ರದ ಕಚೇರಿ ಆವರಣದಲ್ಲಿ ಮಂಗಳವಾರ ವಿವಿಧ ಇಲಾಖೆಗಳ ಮತ್ತು ಸ್ವಯಂ-ಸೇವಾ ಸಂಸ್ಥೆಗಳ ಸಂಪರ್ಕ ಸಭೆ ನಡೆಯಿತು. ಕಾರ್ಯಕ್ರಮದ ಉದ್ಘಾಟಿಸಿದ ನ್ಯಾಯಾಧೀಶರಾದ ರಾಜೇಶ್ವರಿ ಹೆಗಡೆ ಮಾತನಾಡಿ, `ಸರ್ಕಾರದ ಯೋಜನೆಯಡಿ ಮಹಿಳಾ ಸಾಮಖ್ಯಾ ಕೇಂದ್ರ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಗ್ರಾಮೀಣ ಮಹಿಳೆಯರ ಕಲ್ಯಾಣಕ್ಕೆ ಶ್ರಮಿಸುತ್ತಿದೆ~ ಎಂದು ತಿಳಿಸಿದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಸುರೇಖಾ ವಿಜಯಪ್ರಕಾಶ್ ಮಾತನಾಡಿ, `ಉತ್ತಮ ಜೀವನ ರೂಪಿಸಿಕೊಳ್ಳಲು ಗ್ರಾಮೀಣ ಮಹಿಳೆಯರಿಗೆ ಸೂಕ್ತ ಮಾಹಿತಿ ಮತ್ತು ಮಾರ್ಗದರ್ಶನ ಅಗತ್ಯವಿದೆ. ಅದಕ್ಕೆ ಜನರಲ್ಲಿ ಜಾಗೃತಿ ಮೂಡಿಸಿ~ ಎಂದು ಹೇಳಿದರು.ಮೈರಾಡ ಸಂಸ್ಥೆ ಘಟಕದ ಸಂಯೋಜಕ ಎಸ್.ವೆಂಕಟರೆಡ್ಡಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ವಿಜಯಕುಮಾರ್, ಕೃಷಿ ಇಲಾಖೆಯ ಅಧಿಕಾರಿ ಶಶಿಧರ್, ಸೌಖ್ಯ ಸಂಜೀವಿನಿ ಸಂಸ್ಥೆಯ ವ್ಯವಸ್ಥಾಪಕ ಇಮ್ರಾನ್ ಖಾನ್, ಮಹಿಳಾ ಸಾಮಖ್ಯಾ ಸಂಸ್ಥೆ ಘಟಕದ ಸಂಯೋಜಕಿ ಸವಿತಾ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry