ಗ್ರಾಮೀಣ ರಸ್ತೆಗೆ ಅನುದಾನ ನೀಡಲು ಆಗ್ರಹ

7
ಆನಗೋಡು: ಹುತಾತ್ಮ ರೈತರಿಗೆ ವಿವಿಧ ಸಂಘಟನೆಗಳ ಶ್ರದ್ಧಾಂಜಲಿ

ಗ್ರಾಮೀಣ ರಸ್ತೆಗೆ ಅನುದಾನ ನೀಡಲು ಆಗ್ರಹ

Published:
Updated:

ಮಾಯಕೊಂಡ: ಪೊಲೀಸ್‌ ದೌಜರ್ನ್ಯಕ್ಕೆ ಬಲಿಯಾದ ಅಮಾಯಕ ರೈತರ ಆತ್ಮಕ್ಕೆ ಶಾಂತಿಕೋರಿ ಶುಕ್ರವಾರ ಆನಗೋಡಿನಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಈ ಸಂದಭರ್ದಲ್ಲಿ ಮಾತನಾಡಿದ ಎಪಿಎಂಸಿ ನಿದೇರ್ಶಕ ಎನ್.ಜಿ. ಪುಟ್ಟಸ್ವಾಮಿ, ಎಪಿಎಂಸಿಗಳಿಗೆ ಅನುದಾನ ಕಡಿಮೆ ಇದ್ದು, ಕೃಷಿ ಮಾರುಕಟ್ಟೆ ಸಚಿವರು ಗ್ರಾಮೀಣ ಭಾಗದ ರಸ್ತೆಗಳ ನಿರ್ಮಾಣಕ್ಕೆ  ಅನುದಾನ ನೀಡಬೇಕು. ಯಾವುದೇ ರೈತ ಸಂಘಟನೆಗಳ ಹೋರಾಟವನ್ನು ಎಲ್ಲಾ ರೈತ ಸಂಘಗಳು ಗೌರವಿಸುವ ಪ್ರವೃತ್ತಿ ಬೆಳಸಿಕೊಳ್ಳಬೇಕು ಎಂದರು. ರೈತ ಮುಖಂಡ ತೇಜಸ್ವಿ ಪಟೇಲ್ ಮಾತನಾಡಿ, ರೈತ ಸಂಘಟನೆಗಳು ಒಗ್ಗೂಡಿ, ಪ್ರಾಮಾಣಿಕವಾಗಿ  ಕೆಲಸ ಮಾಡಿದರೆ ಮಾತ್ರ ರೈತರ ಹಿತಕಾಯಲು ಸಾಧ್ಯ. ರೈತ ಸಂಘಟನೆಗಳ ಬಣಗಳಿಗಿಂತ  ಅವುಗಳ ಬದ್ಧತೆ ಮುಖ್ಯ. ಜನಪರ ಕಾಳಜಿಯಿಂದ ಹೋರಾಟ ಮಾಡಿ  ರೈತರ ಹಿತಕಾಯುವ ಜವಬ್ದಾರಿ ಎಲ್ಲಾ ಸಂಘಟನೆಗಳ ಮೇಲೆ ಇದೆ. ಅಹಿಂಸಾತ್ಮಕ ಹೋರಾಟಗಳಿಗೆ ಪ್ರಚಾರ ಸಿಗದಿದ್ದರೂ ಫಲ ಸಿಗುತ್ತದೆ ಎಂದರು.ಮುಖಂಡ ಎಸ್‌.ಎನ್‌. ಬಾಲಾಜಿ ಮಾತನಾಡಿ, ರಸ ಗೊಬ್ಬರದ ಸಹಾಯ ಧನ ರದ್ದು ಮಾಡಿದ್ದ  ಸರ್ಕಾರದ ವಿರುದ್ಧ  ಈ ಸ್ಥಳದಲ್ಲಿ ಭಾರೀ ಹೋರಾಟ ನಡೆದಿತ್ತು.  ಮಾಜಿ ಪ್ರಧಾನಿ ದೇವೇಗೌಡರು ಅಂದಿನ ಈ ಜಿಲ್ಲೆಯ ಹೋರಾಟವನ್ನು ಬೆಂಬಲಿಸಿ ಲೋಕಸಭೆಯಲ್ಲಿಯೂ  ಚರ್ಚಿಸಿದ್ದರು ಎಂದು ಸ್ಮರಿಸಿದರು.ಕಾಂಗ್ರೆಸ್‌ ಮುಖಂಡ ಡಿ.ಬಸವರಾಜು ಮಾತನಾಡಿ, ಸೈನಿಕರಷ್ಟೇ ರೈತರೂ ಮುಖ್ಯ. ರೈತರ ಮೇಲೆ ಗೋಲಿಬಾರ್‌ ಮಾಡದಂತೆ ಶಾಸನ ರಚಿಸಬೇಕು ಎಂದರು.ಶಾಮನೂರು ಲಿಂಗರಾಜು ಮಾತನಾಡಿ, ಕಮೀಷನ್‌ಗಾಗಿ ಸರ್ಕಾರ ಛತ್ತೀಸ್‌ಗಡದಿಂದ ಅಕ್ಕಿ ಖರೀದಿಸುವ ಬದಲು  ರಾಜ್ಯದ ರೈತರಿಂದ ಖರೀದಿಸಿ ಅವರ ಹಿತರಕ್ಷಣೆ ಮಾಡಬೇಕಿತ್ತು. ಕೃಷಿಗೆ ಕೈಗಾರಿಕೆಯ ಸ್ಥಾನಮಾನ ಸಿಗುವವರೆಗೆ ರೈತರ ಉದ್ದಾರವಾಗುವುದಿಲ್ಲ ಎಂದರು.ಎಂಎಸ್‌ಕೆ ಶಾಸ್ತ್ರಿ, ಆವರಗೆರೆ ರುದ್ರಮುನಿ, ಆವರಗೊಳ್ಳ ಷಣ್ಮುಖಯ್ಯ, ಎಪಿಎಂಸಿ ಅಧ್ಯಕ್ಷೆ ಕೊಟ್ರಮ್ಮ, ಸಿದ್ದನೂರು ರವಿ, ನಲಕುಂದ ಹಾಲೇಶ್‌, ಆಲೂರು ಪ್ರಕಾಶ್‌ ಉಪಸ್ಥಿತರಿದ್ದರು. ಕಲ್ಲಿಂಗಪ್ಪ ನಿರೂಪಿಸಿದರು. ಸಿದ್ದೇಶ್‌ ವಂದಿಸಿದರು.ರೈತ ಮುಖಂಡರ ಬಗ್ಗೆ ಆಕ್ರೋಶ

ರೈತ ಹುತಾತ್ಮರ ಕುಟುಂಬಗಳಿಗೆ ಬೆಂಬಲ  ನೀಡದೆ ರೈತ ಸಂಘಟನೆಗಳ ಮುಖಂಡರು ನಿಲರ್ಕ್ಷಿಸಿದ್ದಾರೆ, ಬರೀ ಭಾಷಣ ಮಾಡಿದರೆ ರೈತರು ನಂಬುವುದಿಲ್ಲ ಎಂದು   ಸಿದ್ದನೂರು ರವಿ ಆರೋಪಿಸಿದರು.ಶ್ರದ್ದಾಂಜಲಿ ಸಭೆಯಲ್ಲಿ ಮಾತನಾಡಿದ ಅವರು,  ಜಿಲ್ಲೆಯಲ್ಲಿ ಖಾಲಿ ಇದ್ದ ಗ್ರಾಮ ಲೆಕ್ಕಿಗರ ಹುದ್ದೆ ಭರ್ತಿಗೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದರು.  ಇದೇ ಜಿಲ್ಲೆಯಲ್ಲಿ ರೈತ ಹೋರಾಟದಲ್ಲಿ ಹುತಾತ್ಮರಾದ  ಸಿದ್ದನೂರಿನ ನಾಗರಾಜ ಚಾರ್‌ರವರ ಪುತ್ರಿಗೆ  ಈ ಹುದೆ್ದಯನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ನೀಡಲು ಒತ್ತಾಯಿಸಲಾಯಿತು.  ಹಲವು ರೈತ ಮುಖಂಡರ ಮನೆ ಬಾಗಿಲಿಗೆ ಎಡತಾಕಿ ಬೆಂಬಲಕ್ಕಾಗಿ ಗೋಗರೆದರೂ ಈ ವೇದಿಕೆಯ ಮೇಲಿರುವ ಯಾರೂ ಮುಂದೆ ಬರಲಿಲ್ಲ. ಕೆ.ಎಸ್‌. ಪುಟ್ಟಣ್ಣಯ್ಯ, ಕೋಡಿಹಳ್ಳಿ ಚಂದ್ರಶೇಖರ್‌ ಎನ್‌.ಜಿ. ಪುಟ್ಟಸ್ವಾಮಿ ಸೇರಿದಂತೆ ಯಾರೂ ಬೆಂಬಲಿಸಲಿಲ್ಲ, ಜಿಲ್ಲಾಧಿಕಾರಿಗಳಿಗೆ ಮನವರಿಕೆ ಮಾಡಲಿಲ್ಲ. ಇವರೆಲ್ಲಾ ಮನಸ್ಸು ಮಾಡಿದ್ದರೇ, ಸರ್ಕಾರದಿಂದ ಆದೇಶ ತರಬಹುದಿತ್ತು ಎಂದು ಆರೋಪಿಸಿದರು.ಹೋರಾಡಿದ ಹುತಾತ್ಮರಾದ ರೈತ ಕುಟುಂಬಗಳು  ಬೀದಿ ಪಾಲಾದಾಗ ನೆರವಿಗೆ ಬಾರದ ಇಂಥ ಸಂಘಟನೆಗಳಿಂದ ಏನು ನಿರೀಕ್ಷಿಸಲು ಸಾಧ್ಯ? ರೈತರು ಇಂತ ಸಂಘಟನೆಗಳನ್ನು ನಂಬುವುದಾದರೂ ಹೇಗೆ? ಅದಕ್ಕಾಗಿಯೇ ಈ ಕಾರ್ಯಕ್ರಮಕ್ಕೆ ರೈತರು ಹೆಚ್ಚಾಗಿ ಬಂದಿಲ್ಲ ಎಂದು ಛೇಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry