ಗ್ರಾಮೀಣ ರಸ್ತೆ ಅಭಿವೃದ್ಧಿಗೆ 10 ಕೋಟಿ

7

ಗ್ರಾಮೀಣ ರಸ್ತೆ ಅಭಿವೃದ್ಧಿಗೆ 10 ಕೋಟಿ

Published:
Updated:

ಬ್ರಹ್ಮಾವರ: ಉಡುಪಿ ವಿಧಾನ ಸಭಾ ಕ್ಷೇತ್ರಕ್ಕೆ ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆಯಡಿ 10 ಕೋಟಿ ರೂ. ಅನುದಾನ ಮಂಜೂರಾಗಿದೆ ಎಂದು ಶಾಸಕ ಕೆ.ರಘುಪತಿ ಭಟ್ ತಿಳಿಸಿದರು.ಹಾವಂಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 1.21 ಕೋಟಿ ರೂ.ಗೂ ಅಧಿಕ ವೆಚ್ಚದ ವಿವಿಧ ಕಾಮಗಾರಿಗಳಿಗೆ ಮಂಗಳವಾರ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.`ರಾಜ್ಯ ಸರ್ಕಾರದ `ನಮ್ಮ ಗ್ರಾಮ ನಮ್ಮ ರಸ್ತೆ~ ಯೋಜನೆಯಡಿ ಈ ವರ್ಷ ಉಡುಪಿ ವಿಧಾನ ಸಭಾ ಕ್ಷೇತ್ರದಲ್ಲಿ 30 ಕಿ.ಮೀ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯಲಿದೆ. ಕ್ಷೇತ್ರದ ಪರಿಶಿಷ್ಟ ಪಂಗಡದ ಕಾಲೋನಿ ಅಭಿವೃದ್ಧಿಗೆ 1.25 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಇದರಲ್ಲಿ 25 ಲಕ್ಷ ರೂ.ಗಳನ್ನು ಹಾವಂಜೆ ಗ್ರಾಮ ಪಂಚಾಯಿತಿಗೆ ನೀಡಲಾಗುವುದು. ನಬಾರ್ಡ್ ಯೋಜನೆಯಡಿ ಮಂಜೂರಾದ 1.10 ಕೋಟಿ ರೂ.ಗಳ ಕಾಮಗಾರಿಯಲ್ಲಿ ಸುಮಾರು 50 ಲಕ್ಷ ರೂ. ನಂತೆ ಹಾವಂಜೆ ಗ್ರಾ.ಪಂ. ವ್ಯಾಪ್ತಿಯ ಅಭಿವೃದ್ಧಿ ಕಾಮಗಾರಿಗಳಿಗೆ ಸಾಕಷ್ಟು ಅನುದಾನ ಮೀಸಲಿಡಲಾಗಿದೆ~ ಎಂದರು.ಶಿಲಾನ್ಯಾಸ: ಪಂಚಾಯಿತಿ ವ್ಯಾಪ್ತಿಯ 7 ಕಾಮಗಾರಿಗಳಿಗೆ ಶಿಲಾನ್ಯಾಸ ಮಾಡಲಾಯಿತು. ಸುಮಾರು 35 ಲಕ್ಷ ರೂ. ಅಂದಾಜಿನಲ್ಲಿ ಸಿದ್ದೇಶ್ವರ ಮಠದ ರಸ್ತೆ ಅಭಿವೃದ್ಧಿ, 15 ಲಕ್ಷ ರೂ.ಗಳ ಅಂದಾಜಿನಲ್ಲಿ ಕೀಳಂಜೆ ಶಾಲೆಯಿಂದ ಮಹಾವಿಷ್ಣು ಮಹಾಲಿಂಗೇಶ್ವರ ದೇವಸ್ಥಾನ ರಸ್ತೆ ಅಭಿವೃದ್ಧಿ, 8 ಲಕ್ಷ ರೂ. ಅಂದಾಜಿನಲ್ಲಿ ಕೀಳಿಂಜೆ ನೆರೆ ಕಾಲೋನಿ ರಸ್ತೆ ಅಭಿವೃದ್ಧಿ, 15 ಲಕ್ಷ ರೂ. ನಲ್ಲಿ ಹಾವಂಜೆ ಶಾಲೆಯಿಂದ ಕಂಬಳಿಬೆಟ್ಟು ರಸ್ತೆ ಅಭಿವೃದ್ಧಿ, 25 ಲಕ್ಷ ರೂ.ನಲ್ಲಿ ಮುಗ್ಗೇರಿ ಸಾಲ್ಮರ ಪರಿಶಿಷ್ಟ ಜಾತಿ ಕಾಲೋನಿ ರಸ್ತೆ ಕಾಂಕ್ರೀಟಿಕರಣ, 36 ಲಕ್ಷ ರೂ. ಅಂದಾಜಿನಲ್ಲಿ ಮಲೆನಾಡು ಅಭಿವೃದ್ಧಿ ಯೋಜನೆಯಡಿ ದಾಸಬೆಟ್ಟು ಮುಂಡ್ಕಿನಜೆಡ್ಡು ಸಂಪರ್ಕಕ್ಕೆ ತೂಗು ಸೇತುವೆ ನಿರ್ಮಾಣದ ಕಾಮಗಾರಿ, 10 ಲಕ್ಷ ರೂ.ಗಳ ಅಂದಾಜಿನಲ್ಲಿ ದಾಸಬೆಟ್ಟು ಪರಿಶಿಷ್ಟ ಪಂಗಡದ ಕಾಲೋನಿ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ಮಾಡಲಾಯಿತು.ಗ್ರಾಮ ಪಂಚಾಯಿತಿ ಅಧ್ಯಕ್ಷ ಉಮೇಶ್ ಕೋಟ್ಯಾನ್, ಉಪಾಧ್ಯಕ್ಷ ಸತೀಶ್ ಶೆಟ್ಟಿ, ಜಿ.ಪಂ. ಇಂಜಿನಿಯರ್ ಸೋಮನಾಥ್, ಗುತ್ತಿಗೆದಾರರಾದ ಜೀವನ್ ಶೆಟ್ಟಿ ಬೈಕಾಡಿ, ವಾದಿರಾಜ್ ಮತ್ತು ಪ್ರವೀಣ್ ಆಚಾರಿ ಮತ್ತಿತರರು ಇದ್ದರು. ವೃತ್ತಕ್ಕೆ ಮುಕ್ತಿ

ಹಾವಂಜೆ ಬಸ್ಸುನಿಲ್ದಾಣದ ಬಳಿ ಕೊಳಲಗಿರಿ ಕುಕ್ಕೆಹಳ್ಳಿ ದಾರಿಯ ವೃತ್ತ ರಸ್ತೆ ವಿಸ್ತರಣೆ ಕಾಮಗಾರಿಯ ವೇಳೆ ತೆಗೆಯಲಾಗುವುದು. ಈಗಾಗಲೇ ಲೋಕೋಪಯೋಗಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸುಮಾರು 25 ಲಕ್ಷ ರೂ. ಗಳ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಸಲು ನಿರ್ಧರಿಸಲಾಗಿದೆ ಎಂದು ಶಾಸಕ ರಘುಪತಿ ಭಟ್ ತಿಳಿಸಿದರು. ಕಳೆದ ಜುಲೈಯಲ್ಲಿ ಈ ವೃತ್ತ ಅಪಘಾತಕ್ಕೆ ಎಡೆಮಾಡಿಕೊಡುತ್ತಿದೆ ಎಂದು ಸ್ಥಳೀಯ ನಿವಾಸಿಗಳು ಪ್ರತಿಭಟನೆ ನಡೆಸಿದ್ದರು. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry