ಗ್ರಾಮೀಣ ರಸ್ತೆ ಅಭಿವೃದ್ಧಿಗೆ 9.5 ಕೋಟಿ
ಕಡೂರು: ಕಡೂರು ವಿಧಾನಸಭಾ ಕ್ಷೇತ್ರದ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ವಿಶೇಷ ಅನುದಾನದಲ್ಲಿ ರೂ. 9.50 ಕೋಟಿ ಮಂಜೂರಾಗಿದೆ ಎಂದು ಶಾಸಕ ಡಾ.ವೈ.ಸಿ.ವಿಶ್ವನಾಥ್ ತಿಳಿಸಿದರು.
ಪಟ್ಟಣದ ಶಾಸಕರ ಕಚೇರಿಯಲ್ಲಿ ಡಿ.ದೇವರಾಜ ಅರಸ್ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ 24 ಫಲಾನುಭವಿಗಳಿಗೆ ಕೊಳವೆ ಬಾವಿ ಉಪಕರಣಗಳನ್ನು ಮಂಗಳವಾರ ವಿತರಿಸಿ ಅವರು ಮಾತ ನಾಡಿದರು.
ಮುಖ್ಯಮಂತ್ರಿ ಬಳಿ ಕಡೂರು ಕ್ಷೇತ್ರದ ರಸ್ತೆಗಳ ಸ್ಥಿತಿಗತಿ ವಿವರಿಸಿದ ಹಿನ್ನೆಲೆಯಲ್ಲಿ ಡಿ.ವಿ. ಸದಾನಂದಗೌಡ ತಮ್ಮ ವಿಶೇಷ ಅನುದಾನದಲ್ಲಿ ಕ್ಷೇತ್ರಕ್ಕೆ ರೂ.9.50 ಕೋಟಿ ಮಂಜೂರು ಮಾಡಿ ಆದೇಶ ನೀಡಿದ್ದಾರೆ.
ಇದರಿಂದ ಗ್ರಾಮೀಣ ರಸ್ತೆ ಅಭಿವೃದ್ಧಿಯಾಗಿ ರೈತರು ತಾವು ಬೆಳೆದ ಕೃಷಿ ಉತ್ಪನ್ನಗಳನ್ನು ಸಕಾಲಕ್ಕೆ ಮಾರುಕಟ್ಟೆಗೆ ತಲುಪಿಸಿ ಬೆಳೆಗೆ ತಕ್ಕ ಬೆಲೆ ಪಡೆಯಲು ಅನುಕೂಲವಾಗಲಿದೆ. ಅಲ್ಲದೆ ಸಾರಿಗೆ ವ್ಯವಸ್ಥೆ ಉತ್ತಮವಾಗಿ ವಿದ್ಯಾರ್ಥಿಗಳು ಮತ್ತು ಜನರಿಗೆ ಸಂಪರ್ಕದ ವ್ಯವಸ್ಥೆ ಸುಧಾ ರಿಸಲಿದೆ ಎಂದರು.
ನಬಾರ್ಡ್ ಯೋಜನೆಯಡಿಯಲ್ಲಿ ರಸ್ತೆ ಡಾಂಬರಿಕರಣ, ದುರಸ್ತಿ ಸೇರಿದಂತೆ ರಸ್ತೆಗಳ ಅಭಿವೃದ್ಧಿಗಾಗಿ 1.10 ಕೋಟಿ ಮಂಜೂ ರಾಗಿದ್ದು, ಕ್ಷೇತ್ರದಲ್ಲಿ ತುರ್ತಾಗಿ ಆಗಬೇಕಾ ಗಿರುವ ರಸ್ತೆ ಕಾಮಗಾರಿಗೆ ಈ ಯೋಜನೆಯಲ್ಲಿ ಅದ್ಯತೆ ನೀಡಿ ರಸ್ತೆ ನಿರ್ಮಾಣ ಕೈಗೊಳ್ಳ ಲಾಗುವುದು ಎಂದರು.
ದೇವರಾಜ ಆರಸ್ ನಿಗಮದಿಂದ ಕೊಳಗೆ ಬಾವಿ ಪರಿಕರಗಳನ್ನು ವಿತರಿಸಲಾ ಗುತ್ತಿದೆ. ರೈತರು ಸರ್ಕಾರದ ಸದುಪಯೋಗಿ ಯೋಜನೆಯನ್ನು ಉಪಯೋಗಿಸಿಕೊಳ್ಳುವ ಮೂಲಕ ಆರ್ಥಿಕ ಸ್ವಾವಲಂಬನೆ ಹೊಂದ ಬೇಕೆಂದು ಎಂದು ಹೇಳಿದರು. ದೇವರಾಜು ಅರಸ್ ಜಿಲ್ಲಾ ನಿಗಮದ ವ್ಯವಸ್ಥಾಪಕ ಕೃಷ್ಣೆಗೌಡ, ಕ್ಷೇತ್ರಾಧಿ ಕಾರಿ ಕೆ.ಮಂಜುನಾಥ್, ಬಿಜೆಪಿ ಎಸ್ಸಿ.ಎಸ್ಟಿ ಘಟಕದ ಕಾರ್ಯದರ್ಶಿ ನಾಗರಾಜು ಮತ್ತು ಫಲಾನುಭವಿಗಳು ಇದ್ದರು.
ಬರಹ ಇಷ್ಟವಾಯಿತೆ?
0
0
0
0
0