ಗ್ರಾಮೀಣ ವಿದ್ಯಾರ್ಥಿಗಳಿಗೆ ಬಿಲ್ವಿದ್ಯೆ ಅರಿವು

ಗುರುವಾರ , ಜೂಲೈ 18, 2019
26 °C

ಗ್ರಾಮೀಣ ವಿದ್ಯಾರ್ಥಿಗಳಿಗೆ ಬಿಲ್ವಿದ್ಯೆ ಅರಿವು

Published:
Updated:

ಮಂಡ್ಯ: ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಕ್ರೀಡೆಯ ಬಗೆಗಿನ ಆಸಕ್ತಿ ಕೆರಳಿಸಲು ಮತ್ತು ಉತ್ತೇಜನ ನೀಡುವ ಮನೆ ಅಂಗಳದಲ್ಲಿ ಕ್ರೀಡೆ ಕಾರ್ಯಕ್ರಮದನವ್ವಯ ಅರ್ಚರಿ ಕ್ರೀಡೆಯನ್ನು ಶುಕ್ರವಾರ ನಗರದ ಭಿನ್ನ ಕಾರ್ಯಕ್ರಮಗಳಲ್ಲಿ ಮಕ್ಕಳಿಗೆ ಪರಿಚಯಿಸಲಾಯಿತು.ಮಂಡ್ಯ ತಾಲ್ಲೂಕಿನ ಕೀಲಾರ ಮತ್ತು ಹನಕೆರೆಯಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಅರ್ಚರಿ ಕ್ರೀಡೆಯ ಬಗೆಗೆ ಬೆಂಗಳೂರಿನಿಂದ ಆಗಮಿಸಿರುವ ತರಬೇತುದಾರ ಬ್ರೀಜೇಶ್‌ಕುಮಾರ್ ಮಕ್ಕಳಿಗೆ ಮಾಹಿತಿ ನೀಡಿದರು.

ಮನೆಯಂಗಳದಲ್ಲಿ ಕ್ರೀಡೆ ಕಾರ್ಯಕ್ರಮವನ್ನು ಜಿಲ್ಲೆಯ್ಲ್ಲಲಿ ಪ್ರಾಯೋಗಿಕವಾಗಿ ಜಾರಿಗೆ ತಂದಿದ್ದು, ಆರಂಭಿಕವಾಗಿ ಜಿಲ್ಲೆಗೆ ಹೊಸದಾಗಿರುವ ಅರ್ಚರಿ (ಬಿಲ್ವಿದ್ಯೆ) ಕ್ರೀಡೆಯನ್ನು ಪರಿಚಯಿಸಲಾಗುತ್ತಿದೆ.`ಜಿಲ್ಲೆಗೆ ಒಟ್ಟಾರೆ ತಲಾ ಸುಮಾರು 15 ಸಾವಿರ ರೂಪಾಯಿ ಮೌಲ್ಯದ ಆರು ಕಿಟ್‌ಗಳನ್ನು ನೀಡಲಾಗಿದೆ. ಇವುಗಳನ್ನು ವಿವಿಧ ಗ್ರಾಮಗಳಲ್ಲಿ ಯುವಜನ ಸಂಘಗಳ ನೆರವಿನಲ್ಲಿ ಆಯಾ ಗ್ರಾಮ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಬಳಸಲಾಗುವುದು~ ಎಂದು ಯುವಜನ ಸೇವಾ ಇಲಾಖೆ ಸಹಾಯಕ ನಿರ್ದೇಶಕಿ ಡಾ. ಮಂಜುಳಾ ಅವರು ಕೀಲಾರದಲ್ಲಿ ಮಾಹಿತಿ ನೀಡಿದರು.ಗ್ರಾಮೀಣ ಕ್ರೀಡೆಗಳ ಬಗೆಗೆ ಮಕ್ಕಳಲ್ಲಿ ಆಸಕ್ತಿ ಕೆರಳಿಸುವುದು ಇದರ ಉದ್ದೇಶ. ನಂತರದ ದಿನಗಳಲ್ಲಿ ಇತರ ಕ್ರೀಡೆಗಳನ್ನು ಪರಿಚಯಿಸಲಾಗುವುದು ಎಂದರು.ಮಕ್ಕಳಿಗೆ ಕ್ರೀಡೆ ಪರಿಚಯಿಸಲು ಬೆಂಗಳೂರಿನ ಅರ್ಚರಿ ಅಸೋಸಿಯೇಷನ್‌ನ ಕೋಚ್ ಬ್ರಿಜೇಜ್ ಕುಮಾರ್ ಅವರನ್ನು ಕೋರಿದ್ದು, ಅವರು ಕೆಲ ಯುವಕರಿಗೆ ತರಬೇತಿ ನೀಡುವರು. ಆ ಯುವಕರು ವಿದ್ಯಾರ್ಥಿಗಳಿಗೆ ಆಟದ ಮಾಹಿತಿ, ತರಬೇತಿ ನೀಡುವ ಕಾರ್ಯ ನೆರವೇರಿಸುವರು ಎಂದು ತಿಳಿಸಿದರು.ಕೀಲಾರದಲ್ಲಿ ನಡೆದ ಸಮಾರಂಭದಲ್ಲಿ ಜಿಪಂ ಸದಸ್ಯ ಕೆ.ಎಸ್.ವಿಜಯಾನಂದ್, ಶಿಕ್ಷಕರಾದ ಉಪೇಂದ್ರ, ರಾಮಶೆಟ್ಟಿ, ಕ್ಷೀರಸಾಗರ ಮಿತ್ರಕೂಟದ ಕೃಷ್ಣೇಗೌಡ ಇದ್ದರು. ಹನಕೆರೆಯಲ್ಲಿ ವಿವೇಕ ಪ್ರೌಢಶಾಲೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಶಿವರಾಂ, ಸಂಸ್ಥೆ ಪ್ರಧಾನ ಕಾರ್ಯದರ್ಶಿ ನಾಗಪ್ಪ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry