ಗ್ರಾಮೀಣ ಸಂಸ್ಕೃತಿ ಭಾರತೀಯ ಪರಂಪರೆ

7

ಗ್ರಾಮೀಣ ಸಂಸ್ಕೃತಿ ಭಾರತೀಯ ಪರಂಪರೆ

Published:
Updated:

ಕಲ್ಲೋಳಿ (ಗೋಕಾಕ): `ಗ್ರಾಮೀಣ ಜನತೆ ಭಾರತೀಯ ಸಂಸ್ಕೃತಿಯನ್ನು ಉಳಿಸಿ ಬೆಳಿಸಿಕೊಂಡು ಹೋಗುವುದು ಮಹತ್ವದ್ದಾಗಿದೆ~ ಎಂದು ಜಿ.ಪಂ. ಅಧ್ಯಕ್ಷ ಈರಣ್ಣ ಕಡಾಡಿ ಹೇಳಿದರು.ಗುರುವಾರ ಇಲ್ಲಿಗೆ ಮುಸಗುಪ್ಪಿ ಗ್ರಾಮ ಶ್ರೀ ಲಕ್ಷ್ಮಿ ಮತ್ತು ಬಸವೇಶ್ವರ ಜಾತ್ರಾ ಮಹೋತ್ಸವದಲ್ಲಿ ಅವರು ಮಾತನಾಡಿದರು. ಜಾತ್ರೆ ಹಬ್ಬಗಳಲ್ಲಿ ಗ್ರಾಮೀಣ ಕ್ರೀಡೆಗಳಿಗೆ ಹಾಗೂ ಮನರಂಜನೆ ಕಾರ್ಯಕ್ರಮಗಳನ್ನು ಮಾಡುವ ಮೂಲಕ ವಿಜೃಂಭಣೆಯಿಂದ ಆಚರಿಸುವಂತೆ ಮನವಿ ಮಾಡಿದರು.`ಗ್ರಾಮದ ಎಲ್ಲಮ್ಮೋ ದೇವಿಯ ಮಂದಿರಕ್ಕೆ ಸಂಸದ ಸುರೇಶ ಅಂಗಡಿ ಅವರ  ಅನುದಾನದಲ್ಲಿ ರೂ.3 ಲಕ್ಷ ಅನುದಾನ ಮಂಜೂರಾಗಿದ್ದು, ಗ್ರಾಮಸ್ಥರು ಸದುಪಯೋಗಪಡಿಸಿಕೊಳ್ಳಬೇಕು~ ಎಂದರು.ಈ ಸಂದರ್ಭದಲ್ಲಿ ಬಾಳಪ್ಪ ಕೊಳವಿ, ಸಾತಪ್ಪ ಕೊಳದುರ್ಗಿ, ಶಂಕರೆಪ್ಪ ಗಾಡವಿ, ದುಂಡಪ್ಪ ಪಂತೋಜಿ, ಉಮೇಶ ಆಸಿರೊಟ್ಟಿ, ಮಹಾಂತೇಶ ಕಲಪಡೆ, ಸುರೇಶ ಗೊಂದಿ, ಮುರಗೇಶ ಗಾಡವಿ, ಈಶ್ವರ ಗಾಡವಿ, ರಮೇಶ ಗಡಗಿ, ಬಸವರಾಜ ಗಾಡವಿ, ರಾಘವೇಂದ್ರ ಸೂರನ್ನವರ ಮುಂತಾದವರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry