ಮಂಗಳವಾರ, ನವೆಂಬರ್ 19, 2019
23 °C

`ಗ್ರಾಮೀಣ ಸೇವೆಯೇ ಲಯನ್ಸ್ ಗುರಿ'

Published:
Updated:
`ಗ್ರಾಮೀಣ ಸೇವೆಯೇ ಲಯನ್ಸ್ ಗುರಿ'

ಹೆಬ್ರಿ: ಲಯನ್ಸ್ ಕ್ಲಬ್‌ಗಳು ಈ ವರ್ಷದ ಕೃಷಿಯಾಧರಿತ ಕಾರ್ಯಕ್ರಮ ಮತ್ತು ಆರೋಗ್ಯ, ಶಿಕ್ಷಣ ಕಣ್ಣಿನ ಆರೋಗ್ಯದ ಕುರಿತು ಮಹತ್ವದ ಸೇವೆಯನ್ನು ಮಾಡುತ್ತಿವೆ ಎಂದು ಲಯನ್ಸ್ ಗವರ್ನರ್ ಡಾ.ಮಧುಸೂದನ್ ಹೆಗ್ಡೆ  ಹೇಳಿದರು.ಅವರು ಬುಧವಾರ ಹಿರಿಯಡ್ಕ ಲಯನ್ಸ್ ಕ್ಲಬ್ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಪ್ರತಿಷ್ಠಿತವಾದ ಹಿರಿಯಡ್ಕ ಕ್ಲಬ್ ಮಕ್ಕಳ ಮತ್ತು ಗ್ರಾಮೀಣ ಪ್ರದೇಶದ ಜನರ ಆರೋಗ್ಯದ ಕುರಿತು ವಿಶೇಷ ಸೇವೆಯನ್ನು ಕಳೆದ ಹಲವು ವರ್ಷಗಳಿಂದ ನೀಡುತ್ತ ಬಂದಿದೆ.ಲಯನ್ಸ್ ಸಂಸ್ಥೆಯು ನಾಯಕತ್ವವನ್ನು ಬೆಳೆಸಲು 18 ಮಂದಿಗೆ ಯಶಸ್ವಿ ನಾಯಕತ್ವ ಶಿಬಿರ, ದಾರಿ ತಪ್ಪುವ ಹದಿಹರೆಯದ ಮಕ್ಕಳಿಗೆ ಹದಿಹರೆಯದ ಆರೋಗ್ಯ ಶಿಕ್ಷಣ, ಆರೋಗ್ಯದ ವಸ್ತುಗಳ ಉಚಿತ ವಿತರಣೆ ಮಾಡಿ ಶಾಲೆಗಳಲ್ಲಿ ಮಕ್ಕಳಿಗೆ ನಿರಂತರವಾಗಿ ಮಾಹಿತಿ, ಅಂಟುರೋಗದ ನಿರ್ಮೂಲನೆಗೆ ಮಕ್ಕಳಿಗೆ ಮತ್ತು ಜನತೆಗೆ ನಿರಂತರ ಕಾರ್ಯಕ್ರಮ, ಹಳ್ಳಿಯ ಜನತೆಗೆ ಅನುಕೂಲವಾಗಲು 7 ಕಡೆಯಲ್ಲಿ ಹೃದಯ ಖಾಯಿಲೆ ಕಂಡು ಹಿಡಿಯಲು ಟೆಲಿ ಮೆಡಿಷನ್ ಸೌಕರ್ಯ, ಹಳ್ಳಿಯ ಸರ್ಕಾರಿ ಆಸ್ಪತ್ರೆಯಲ್ಲಿ ಕಣ್ಣಿನ ಸ್ಕ್ರೀನಿಂಗ್ ಯಂತ್ರ ಅಳವಡಿಸಿ ಜನತೆಗೆ ಕಣ್ಣಿನ ಆರೋಗ್ಯ ಸೇವೆ, ಕಣ್ಣುದಾನ, ನೇತ್ರಾ ಚಿಕಿತ್ಸೆ ಹೀಗೆ ಆರೋಗ್ಯ, ಶಿಕ್ಷಣ,ಸಾಮಾಜಿಕ ಸೇವೆಯನ್ನು ಎಲ್ಲಾ ಲಯನ್ಸ್ ಕ್ಲಬ್ ಮತ್ತು ಸದಸ್ಯರು ನೀಡುತ್ತಿದ್ದಾರೆ ಎಂದರು.ರಾಷ್ಟ್ರೀಯ ಲಯನ್ಸ್ ತುರ್ತುನಿಧಿಗೆ ದೇಣಿಗೆ :ರಾಷ್ಟ್ರೀಯ ಲಯನ್ಸ್ ತುರ್ತುನಿಧಿಗೆ ದೇಣಿಗೆ ಲಯನ್ಸ್ 317ಸಿ ಜಿಲ್ಲೆಯ 50 ಸದಸ್ಯರು 55 ಸಾವಿರದಂತೆ ದೇಣಿಗೆ ನೀಡಿ ದಾಖಲೆ ಮಾಡಿದ್ದಾರೆ ಎಂದ ಗವರ್ನರ್ ಡಾ.ಮಧುಸೂದನ್ ಹೆಗ್ಡೆ ಹೊಸ ಕ್ಲಬ್ ಸ್ಥಾಪನೆ ಮತ್ತು ಸದಸ್ಯರ ಸೇರ್ಪಡೆಯಲ್ಲೂ ಸಾಧನೆ ಮಾಡಲಾಗಿದೆ ಎಂದರು.ಹಿರಿಯಡ್ಕ ಲಯನ್ಸ್ ಕ್ಲಬ್ ವಿಶೇಷ ಸಾಧನೆ : 1997ರಲ್ಲಿ ಆರಂಭಗೊಂಡ ಹಿರಿಯಡ್ಕ ಲಯನ್ಸ್ ಕ್ಲಬ್ ಆರೋಗ್ಯ, ಶಿಕ್ಷಣ, ಜನಸೇವೆಯಲ್ಲಿ ವಿಶೇಷ ಸೇವೆ ಸಲ್ಲಿಸಿ ಜಿಲ್ಲೆಯಲ್ಲೇ ದಾಖಲೆ ಮಾಡಿದೆ ಎಂದು ಹಿರಿಯಡ್ಕದ ಶ್ಯಾಮಸುಂದರ್ ಶೆಟ್ಟಿ ಹೇಳಿದರು.ಸಭೆಯಲ್ಲಿ ಶೋಭಾ ಮಧುಸೂದನ್ ಹೆಗ್ಡೆ, ಹಿರಿಯಡ್ಕ ಲಯನ್ಸ್ ಕ್ಲಬ್ ಅಧ್ಯಕ್ಷ  ಸುಂದರ ಕಾಂಚನ್, ಕಾರ್ಯದರ್ಶಿ ಹರೀಶ ಹೆಗ್ಡೆ, ಕೋಶಾಧಿಕಾರಿ ಮೋಹನದಾಸ್ ಆಚಾರ್ಯ ಮುಖಂಡರಾದ ಶ್ಯಾಮಸುಂದರ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ನಾಗರಾಜ ರೆಡ್ಡಿ, ಪ್ರಾಂತೀಯ ಅಧ್ಯಕ್ಷ ಸತ್ಯಾನಂದ ನಾಯಕ್, ಶ್ರಿಧರ ಸೇಣವ ಮುಂತಾದವರು ಹಾಜರಿದ್ದರು.

ಪ್ರತಿಕ್ರಿಯಿಸಿ (+)