ಗ್ರಾಮೀಣ ಸೊಗಡು

7

ಗ್ರಾಮೀಣ ಸೊಗಡು

Published:
Updated:ಗ್ರಾಮೀಣ ಭಾಗದಲ್ಲಿ ಮರೆಯಾಗುತ್ತಿರುವ ಸಂಗೀತ ವಾದ್ಯ, ದನಗಾಹಿಗಳು, ಗ್ರಾಮೀಣ ಮಹಿಳೆಯರು ಮತ್ತು ಪ್ರಕೃತಿ ಸೌಂದರ್ಯ... ನಗರದಲ್ಲಿ ಈಗ ನಡೆಯುತ್ತಿರುವ ‘ಆರ್ಟ್ ಮಿರಾಕಲ್’ ಚಿತ್ರಕಲಾ ಪ್ರದರ್ಶನದಲ್ಲಿ ಕಂಡು ಬಂದ ಕಲಾಕೃತಿಗಳಿವು.ಗದಗದ ವಿಜಯ ಕಲಾ ಮಂದಿರದಲ್ಲಿ ಉಪನ್ಯಾಸಕರಾಗಿರುವ ಜಮಖಂಡಿಯ ಗೋಳಭಾವಿ ಗ್ರಾಮದ ಕೆ.ಎಂ. ಕೃಷ್ಣ ಈ ಕಲಾಕೃತಿಗಳ ಸೃಷ್ಟಿಕರ್ತ. ಪ್ರಕೃತಿ ಸೌಂದರ್ಯದ ದೃಶ್ಯಗಳನ್ನು ಜಲವರ್ಣದಲ್ಲಿ ಸೆರೆಹಿಡಿದರೆ, ಗ್ರಾಮೀಣ ಸೊಗಡನ್ನು ಅಕ್ರಿಲಿಕ್ ಮತ್ತು ತೈಲವರ್ಣದಲ್ಲಿ ಚಿತ್ರಿಸಿದ್ದಾರೆ.  ಹಲವು ಸಮೂಹ ಪ್ರದರ್ಶನ, ಕಲಾ ಶಿಬಿರದಲ್ಲಿ ಪಾಲ್ಗೊಂಡಿದ್ದ ಅವರ ಕಲಾಕೃತಿಗಳನ್ನು ಕರ್ನಾಟಕ ಲಲಿತ ಕಲಾ ಅಕಾಡೆಮಿ ಸಂಗ್ರಹಿಸಿಟ್ಟಿದೆ. ಪ್ರದರ್ಶನ ಶುಕ್ರವಾರ ಮುಕ್ತಾಯ. ಸ್ಥಳ: ಚಿತ್ರಕಲಾ ಪರಿಷತ್ತು, ಕುಮಾರಕೃಪಾ ರಸ್ತೆ. ಬೆಳಿಗ್ಗೆ 10ರಿಂದ 7.                                                       

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry