ಶನಿವಾರ, ಮೇ 15, 2021
29 °C

`ಗ್ರಾಮ ಅಭಿವೃದ್ಧಿಯಲ್ಲಿ ಶಾಲೆ ಕೇಂದ್ರಬಿಂದು'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬ್ರಹ್ಮಾವರ: ಇಂದಿನ ಆಧುನಿಕ ಪ್ರಪಂಚದಲ್ಲಿ ಗ್ರಾಮಗಳ ಅಭಿವೃದ್ಧಿಯಲ್ಲಿ ಊರಿನ ಶಾಲೆಯು ಕೇಂದ್ರ ಬಿಂದುವಾಗಿರುತ್ತದೆ. ಶಾಲಾಭಿವೃದ್ಧಿಯ ಮಹತ್ತರ ಕಾರ್ಯದಲ್ಲಿ ಕೈಜೋಡಿಸಿದ ದಾನಿಗಳು ಅಭಿನಂದನಾರ್ಹರು ಎಂದು ರೋಟರಿ ಜಿಲ್ಲಾ ಮಾಜಿ ಗವರ್ನರ್ ಸದಾನಂದ ಛಾತ್ರ ಹೇಳಿದರು.ಕೋಟ ಸಮೀಪದ ಬನ್ನಾಡಿ ಪರಮಹಂಸ ಶಾಲೆಯಲ್ಲಿ ಇತ್ತೀಚೆಗೆ ರೋಟರಿ ಕ್ಲಬ್ ಕೋಟ ಸಾಲಿಗ್ರಾಮದ ಸಹಯೋಗದೊಂದಿಗೆ ಪದ್ದು ಆಚಾರ್ ಸ್ಮರಣಾರ್ಥ ಅವರ ಮಕ್ಕಳಿಂದ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಮತ್ತು ಲೇಖನಿ ಸಾಮಾಗ್ರಿಗಳ ವಿತರಣಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.ಈ ನಿಟ್ಟಿನಲ್ಲಿ ಸೀತಾರಾಮ ಆಚಾರ್ಯ ಮತ್ತು ಸಹೋದರರ ವಿದ್ಯಾಭಿಮಾನದ ಈ ಕೊಡುಗೆಯು ಊರಿನ ಇತರ ಶಾಲೆಯ ಹಳೆ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿರುತ್ತದೆ. ತನ್ನ ತಾಯಿಯ ಸವಿನೆನಪಿಗಾಗಿ ಪ್ರತಿವರ್ಷವೂ ವಿದ್ಯಾರ್ಜನೆಗೆ ಸಹಾಯ ಮತ್ತು ಜನೋಪಯೋಗಿ ಕಾರ್ಯಕ್ರಮವು ತನ್ನ ಊರಿಗೆ ಕೊಡುತ್ತಿರುವುದು ಶ್ಲಾಘನೀಯ ಎಂದು ಅವರು ಹೇಳಿದರು.

ರೋಟರಿ ಕೋಟ ಸಾಲಿಗ್ರಾಮದ ಅಧ್ಯಕ್ಷ ಕೆ.ನರಸಿಂಹ ಪ್ರಭು ಅಧ್ಯಕ್ಷತೆ ವಹಿಸಿದ್ದರು.ವಡ್ಡರ್ಸೆ ಗ್ರಾ.ಪಂ.ಅಧ್ಯಕ್ಷೆ ಸುಕನ್ಯಾ ಎಸ್.ಶೆಟ್ಟಿ, ವಿಶ್ವನಾಥ ಶೆಟ್ಟಿ, ರೋಟರಿಯ ನಾಗರಾಜ ನಾರಿ, ಕೆ.ಎಸ್. ಮಂಜುನಾಥ್, ರಾಜೇಂದ್ರ ಸುವರ್ಣ, ಶಾಲಾ ಸಂಚಾಲಕ ಅಮೃತ್ ಹೆಗ್ಡೆ, ಬಿ.ಆರ್.ಸಿ. ಸೂರಪ್ಪ ಹೆಗ್ಡೆ  ಉಪಸ್ಥಿತರಿದ್ದರು.

ಶಾಲಾ ಮುಖ್ಯೋಪಾಧ್ಯಾಯ ಭಾಸ್ಕರ್ ಶೆಟ್ಟಿ ಸ್ವಾಗತಿಸಿ ವಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.