ಗ್ರಾಮ ನೈರ್ಮಲ್ಯಕ್ಕೆ ಒತ್ತು

ಬುಧವಾರ, ಜೂಲೈ 17, 2019
23 °C

ಗ್ರಾಮ ನೈರ್ಮಲ್ಯಕ್ಕೆ ಒತ್ತು

Published:
Updated:

ಯಮಕನಮರಡಿ : ಗ್ರಾಮ ನೈರ್ಮಲ್ಯ ಕಾಪಾಡಲು ಕಾಕತಿ, ಕಡೋಲಿ, ಪಾಶ್ಚಾಪುರ, ಯಮಕನಮರಡಿ  ಗ್ರಾಮಗಳಲ್ಲಿ ಕಸ ವಿಲೇವಾರಿ ವಾಹನ ವನ್ನು ನೀಡಲಾಗಿದೆ~  ಎಂದು ಶಾಸಕ ಸತೀಶ ಜಾರಕಿಹೊಳಿ ಹೇಳಿದರು.ಸ್ಥಳೀಯ ಹತ್ತರಗಿ ಕಾರೀಮಠದ  ಆವರಣದಲ್ಲಿ ಭಾನುವಾರ ನಡೆದ ಹೆಬ್ಬಾಳ ಮತ್ತು ದಡ್ಡಿ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರರ ಸಮಾವೇಶ ವನ್ನು ಅವರು ಮಾತನಾಡಿದರು.`ಗ್ರಾಮೀಣ ಪ್ರದೇಶದ ಜನರಿಗೆ ಶೇ. 60ರಷ್ಟು ರೋಗವು ಮೊದಲು ನೀರಿನಿಂದ ಬರುತ್ತೇದೆ ಆದ್ದರಿಂದ ನಮ್ಮ ಜನರು ಆರೋಗ್ಯವಾಗಿ ಇರಬೇಕಾದರೆ ಶುದ್ದ ಕುಡಿಯುವ ನೀರು ಅವಶ್ಯ ಆ ನಿಟ್ಟಿನಲ್ಲಿ ಇನ್ನು ಬರುವ ದಿನಗಳಲ್ಲಿ ಕಾಕತಿ, ಯಮಕನಮರಡಿ, ಪಾಶ್ಚಾಪುರ ಗ್ರಾಮಗಳಿಗೆ ಶುದ್ದ ಕುಡಿಯುವ ನೀರಿನ ಪೀಪ್ಟರ್ ಟ್ಯಾಂಕನ್ನು ಅಳವಡಿಕೆ ಮಾಡುವ ಯೋಜನೆಯಿದೆ~ ಮತ್ತು ಅಧಿಕಾರ ಅವಧಿಯಲ್ಲಿ 2 ಮತಕ್ಷೇತ್ರದಲ್ಲಿ 80 ಕೊಳವೆ ಬಾವಿ ಕೊರೆಯಿಸಲಾಗಿದೆ ಎಂದು  ತಿಳಿಸಿದರು.ಬಾಪುಗೌಡ ಪಾಟೀಲ, ಶಿವಪ್ಪ ಗುಂಡಾಳಿ, ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕ ರಾಜೇಂದ್ರ  ತುಬಚಿ, ರಾಮಣ್ಣಾ ಗುಳ್ಳಿ, ಹತ್ತರಗಿ ತಾ.ಪಂ ಸದಸ್ಯೆ ರೇಣುಕಾ  ಕಡಗಾಂವಿ, ಶೈನಾಜ್ ಗಡೆಕಾಯಿ, ಪಿ.ಎಚ್. ಪಾಟೀಲ, ಮಲ್ಲಪ್ಪ ಮುಗಳಿ, ವಿಷ್ಠು ರೇಡೆಕರ, ತಾನಾಜಿ ಸುಂಠಕರ, ರವೀಂದ್ರ ಜಿಂಡ್ರಾಳಿ, ಭರಮಾ ಮೇಕಲಿ, ಈರಣ್ಣ ಕುಡಚಿ, ಶಂಕರ ಕುಡಚಿ, ಬಾಳಾರಾಮ ರಜಪೂತ, ಮೀರಾಸಾಹೇಬ್ ನದಾಫ, ನಾಗರಾಜ ದುಂದೂರೆ, ಶಶಿಕಾಂತ ಹಟ್ಟಿ, ಹತ್ತರಗಿ ಗ್ರಾ.ಪಂ ಅಧ್ಯಕ್ಷ ಮಹಾದೇವ ಪಟೋಳಿ, ಗಜಾನನ ರಜಪೂತ, ಹಣಮಂತ ಗಾಡಿವಡ್ಡರ, ಅರುಣ ರಾವುಳ ಮತ್ತು ಮಾರುತಿ ಕುಂದಿ ಹಾಜರಿದ್ದರು.

ಕಿರಣ ರಜಪೂತ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry