ಗ್ರಾಮ ಪಂಚಾಯಿತಿವರೆಗೂ ಸಕಾಲ ವಿಸ್ತರಣೆ

7

ಗ್ರಾಮ ಪಂಚಾಯಿತಿವರೆಗೂ ಸಕಾಲ ವಿಸ್ತರಣೆ

Published:
Updated:
ಗ್ರಾಮ ಪಂಚಾಯಿತಿವರೆಗೂ ಸಕಾಲ ವಿಸ್ತರಣೆ

ಮಡಿಕೇರಿ: ಪಾರದರ್ಶಕ ಹಾಗೂ ಭ್ರಷ್ಟಾಚಾರ ರಹಿತ ಆಡಳಿತ ನಡೆಸುವ ದಿಸೆಯಲ್ಲಿ ಕರ್ನಾಟಕ ನಾಗರಿಕ ಸೇವಾ ಕಾಯ್ದೆಯನ್ನು (ಸಕಾಲ) ಶೀಘ್ರದಲ್ಲಿಯೇ ಗ್ರಾಮ ಪಂಚಾಯಿತಿವರೆಗೂ ವಿಸ್ತರಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಹೇಳಿದರು.

ಕುಶಾಲನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕಲಾಭವನಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಈಗಾಗಲೇ 11 ಇಲಾಖೆಗಳ 151 ಸೇವೆಗಳನ್ನು `ಸಕಾಲ~ ಕಾಯ್ದೆಯಡಿ ತರಲಾಗಿದೆ. ಸರ್ಕಾರದ ಕಾರ್ಯದರ್ಶಿಯಿಂದ ಗ್ರಾಮ ಪಂಚಾಯಿತಿ ವರೆಗೂ ಇನ್ನೂ 100 ಸೇವೆಗಳನ್ನು ಈ ಯೋಜನೆಗೆ ಸೇರಿಸಲು ಚಿಂತನೆ ನಡೆದಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಸಕಾಲ ಯೋಜನೆಯು ಜಾರಿಯಾದ ಏಪ್ರಿಲ್ ತಿಂಗಳಿನಿಂದ ಈವರೆಗೆ ಬಂದ 43 ಲಕ್ಷ ಅರ್ಜಿಗಳ ಪೈಕಿ ಸುಮಾರು 41 ಲಕ್ಷ ಅರ್ಜಿಗಳು ವಿಲೇವಾರಿಯಾಗಿವೆ. ಈ ಕಾಯ್ದೆಯನ್ನು ಇತರೆ ರಾಜ್ಯಗಳು ಸಹ ಜಾರಿಗೆ ತರಲು ಚಿಂತನೆ ನಡೆಸಿವೆ ಎಂದು ಅವರು ತಿಳಿಸಿದರು.

ವಿಧಾನ ಸಭಾಧ್ಯಕ್ಷರಾದ ಕೆ.ಜಿ.ಬೋಪಯ್ಯ, ಅರಣ್ಯ ಸಚಿವರಾದ ಸಿ.ಪಿ.ಯೋಗೀಶ್ವರ್, ಶಾಸಕ ಅಪ್ಪಚ್ಚು ರಂಜನ್, ಗೃಹ ಮಂಡಳಿ ಅಧ್ಯಕ್ಷ ಜಿ.ಟಿ.ದೇವೇಗೌಡ, ಜ್ಲ್ಲಿಲಾ ಪಂಚಾಯಿತಿ ಅಧ್ಯಕ್ಷ ಶಾಂತೆಯಂಡ ರವಿಕುಶಾಲಪ್ಪ, ಕುಶಾಲನಗರ ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಸರಿತಾ ಪ್ರಕಾಶ್, ಜಿಲ್ಲಾಧಿಕಾರಿ ಕೆ.ಎಂ.ಚಂದ್ರೇಗೌಡ, ದಕ್ಷಿಣ ವಲಯ ಐ.ಜಿ.ಪಿ. ಮೂರ್ತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ ಅಣ್ಣಿಗೇರಿ ಮತ್ತಿತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry