ಗ್ರಾಮ ಪಂಚಾಯ್ತಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

7

ಗ್ರಾಮ ಪಂಚಾಯ್ತಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

Published:
Updated:

ಕುರುಗೋಡು: 18 ಜನ ಸದಸ್ಯ ಬಲ ಹೊಂದಿದ ಇಲ್ಲಿಗೆ ಸಮೀಪದ ಶಾನವಾಸಪುರ ಗ್ರಾಮ ಪಂಚಾಯ್ತಿ ಎರಡನೇ ಅವಧಿಗೆ ಅಧ್ಯಕ್ಷರಾಗಿ ಈರಮ್ಮ ಮತ್ತು ಉಪಾಧ್ಯಕ್ಷರಾಗಿ ರಜಿಯಾ ಬೇಗಂ ಇವರು ಗುರುವಾರ ಅವಿರೋಧ ಆಯ್ಕೆಯಾಗಿದ್ದಾರೆ.ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಮತ್ತು ಉಪಾಧಕ್ಷಸ್ಥಾನ ಹಿಂದುಳಿದ ವರ್ಗ ಎ ಗೆ ಮೀಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಈರಮ್ಮ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ರಜಿಯಾ ಬೇಗಂ ಹೊರತು ಪಡಿಸಿ ಯಾರು ನಾಮಪತ್ರಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಜಿಲ್ಲಾ ಪಂಚಾಯ್ತಿ ಎಇಇ ಶ್ರೀರಾಮುಲು ಅವಿರೋಧ ಆಯ್ಕೆಯಾದ ಬಗ್ಗೆ ಘೋಷಿಸಿದರು.ಅಫೆಕ್ಸ್ ಬ್ಯಾಂಕ್ ನಿರ್ದೇಶಕ ಚೊಕ್ಕಬಸವನ ಗೌಡ, ಎಚ್.ಶಾಂತನಗೌಡ, ಎಸ್.ತಿಮ್ಮಪ್ಪ, ಎಪಿಎಂಸಿ ನಿರ್ದೇಶಕ ಲಕ್ಷ್ಮಿಕಾಂತ ರೆಡ್ಡಿ, ವೆಂಕಟಪ್ಪ, ದರೂರು ಮಲ್ಲಿಕಾರ್ಜುನಗೌಡ, ಪಿಎಲ್‌ಡಿ ಬ್ಯಾಂಕ್ ಉಪಾಧ್ಯಕ್ಷ ಟಿ.ತಿಮ್ಮಪ್ಪ, ದರೂರು ಲಕ್ಷ್ಮಿದೇವಿ, ಕರೂರು ಮಾಧವರೆಡ್ಡಿ, ತಾಳೂರು ಲಕ್ಷ್ಮಣ್ ಉಪಸ್ಥಿತರಿದ್ದರು.ವೀರಾಪುರ ಗ್ರಾಮ ಪಂಚಾಯ್ತಿ

ಕುರುಗೋಡು:
19 ಸದಸ್ಯ ಬಲ ಹೊಂದಿರುವ ಇಲ್ಲಿಗೆ ಸಮೀಪದ ಎಚ್. ವೀರಾಪುರ ಗ್ರಾಮ ಪಂಚಾಯ್ತಿಗೆ ಎರಡನೇ ಅವಧಿಗೆ ಅಧ್ಯಕ್ಷರಾಗಿ ಬಿ.ಲಕ್ಷ್ಮಿ ಮತ್ತು ಉಪಾಧ್ಯಕ್ಷರಾಗಿ ಎನ್. ವೆಂಕಟೇಶ್ ಅವಿರೋಧ ಆಯ್ಕೆಯಾಗಿದ್ದಾರೆ.ಅಧ್ಯಕ್ಷಸ್ಥಾನ ಸಾಮಾನ್ಯ ಮಹಿಳೆ ಮತ್ತು ಉಪಾಧ್ಯಕ್ಷಸ್ಥಾನ ಎಸ್.ಟಿ. ಮೀಸಲಾಗಿತ್ತು.  ಅಧ್ಯಕ್ಷ ಸ್ಥಾನಕ್ಕೆ ಲಕ್ಷ್ಮಿ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಎನ್. ವೆಂಕಟೇಶ್ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ಎಲ್.ಮಧುನಾಯಕ್ ಅವರು ಅವಿರೋಧ ಆಯ್ಕೆಯಾದ ಬಗ್ಗೆ ಘೋಷಿಸಿದರು.ಮುಖಂಡರಾದ ಸಿಂಗನಾಳ್ ಜಡೆಪ್ಪ, ಜೆ.ಡಿ.ಎಸ್.ಯುವ ಅಧ್ಯಕ್ಷ ಎಂ.ನಾಗಲಿಂಗ ಸ್ವಾಮಿ ಎಚ್.ವೀರಾಪುರ, ವಿ.ಗೋಪಾಲಪ್ಪ, ಉಡೇದ್ ಸಣ್ಣ ಮಲ್ಲಪ್ಪ, ಎನ್.ಮಲ್ಲಪ್ಪ, ಬಿ.ಜಡೆಪ್ಪ, ಉಡೇದ್ ಶಿವರಾಜ, ಗ್ರಾ.ಪಂ. ಮಾಜಿ ಅಧ್ಯಕ್ಷ ಕೆ.ಮಲ್ಲೇಶಪ್ಪ, ಸಿ.ಬಸವರಾಜಪ್ಪ, ಕೆ.ನಾರಾಯಣಪ್ಪ, ಎಸ್.ಹನುಮಂತಪ್ಪ, ಹೆಚ್. ಯರ‌್ರೆಪ್ಪಗೌಡ, ಇಪ್ಪರದ ಮಲ್ಲಪ್ಪ ಉಪಸ್ಥಿತರಿದ್ದರು.ಸುಗ್ಗೇನಹಳ್ಳಿ ಗ್ರಾಮ ಪಂಚಾಯ್ತಿ

ಸುಗ್ಗೇನಹಳ್ಳಿ(ಕಂಪ್ಲಿ):
ಇಲ್ಲಿಗೆ ಸಮೀಪದ ಸುಗ್ಗೇನಹಳ್ಳಿ ಗ್ರಾಮ ಪಂಚಾಯ್ತಿ ಎರಡನೇ ಅವಧಿ ಅಧ್ಯಕ್ಷ ಸ್ಥಾನಕ್ಕೆ  ಗುರುವಾರ ಚುನಾವಣೆ ನಡೆಯಿತು.ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಪಾರ್ವತಮ್ಮ ಮೋಹನ್ ಮತ್ತು ಸಿ. ಹನುಮಕ್ಕ ನಾಮಪತ್ರ ಸಲ್ಲಿಸಿದ್ದರು. ನಂತರ ನಡೆದ ಚುನಾವಣೆಯಲ್ಲಿ 12ಮತಗಳನ್ನು ಪಡೆದು ಪಾರ್ವತಮ್ಮ ಮೋಹನ್ ಜಯಗಳಿಸಿ ದರೆ ಪ್ರತಿಸ್ಪರ್ಧಿ ಹನುಮಕ್ಕ 5 ಮತಗಳನ್ನು ಪಡೆದು ಪರಾಭವಗೊಂಡರು.ಎಸ್‌ಟಿ ಮಹಿಳೆಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಸರೋಜಮ್ಮ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆ ಯಾದರು. ಬಾಲಸ್ವಾಮಿ ದೇಶಪ್ಪ ಚುನಾವಣಾ ಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.

ಸದಸ್ಯರಾದ ಬಿ. ವೀರೇಶ್, ವಿ. ಗೋವಿಂದಪ್ಪ, ಎಂ. ಶ್ರೀನಿವಾಸಲು, ಬಿ. ಕರಿಯಪ್ಪನಾಯಕ, ಪಿ. ಪಾತಿಮಾ, ಕೆ. ಸಿದ್ಧರಾಮಪ್ಪ, ಅಕ್ಬರ್, ಸಿ. ಹನುಮಕ್ಕ, ಶ್ರೀರಾಮುಲು, ಬಾಲರಾಜು, ವಿಜಯಲಕ್ಷ್ಮಿ, ಚಿದಾನಂದಪ್ಪ, ಲಿಂಗಪ್ಪ, ಆದಿಲಕ್ಷ್ಮಿ, ಜ್ಯೋತಿ, ಪಿಡಿಒ ಜಿ. ಆಂಜನೇಯಲು, ಕಾರ್ಯದರ್ಶಿ ನಾಗರಾಜ ಹಾಜರಿದ್ದರು.ನೂತನ ಅಧ್ಯಕ್ಷೆ ಮತ್ತು ಉಪಾಧ್ಯಕ್ಷೆ ಪಂಚಾಯ್ತಿ ವ್ಯಾಪ್ತಿಯ ಹಳ್ಳಿಗಳ ಅಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು. ನಂತರ ಗ್ರಾಮದ ಮುಖಂಡರು ಅಭಿನಂದಿಸಿ ಪಟಾಕಿ ಸಿಡಿಸಿ ಹರ್ಷಪಟ್ಟರು. ಚೌಡಾಪುರ ಗ್ರಾಮ ಪಂಚಾಯ್ತಿ 

ಕೂಡ್ಲಿಗಿ:
ತಾಲ್ಲೂಕಿನ ಚೌಡಾಪುರ ಗ್ರಾಮ ಪಂಚಾಯ್ತಿಯ ಎರಡನೇ ಅವಧಿಗೆ ಅಧ್ಯಕ್ಷೆ ಮತ್ತು ಉಪಾಧ್ಯಾಕ್ಷರಾಗಿ ಆಯ್ಕೆಯಾದ ಟಿ.ಹನುಮಕ್ಕ ಹಾಗೂ ಬೆಳಡ್ಡಿ ಚಂದ್ರಪ್ಪ ಅವರು  ಗ್ರಾಮ ಪಂಚಾಯ್ತಿ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.ಈ ಸಂದರ್ಭದಲ್ಲಿ ಅಧ್ಯಕ್ಷೆ ಹನುಮಕ್ಕ, ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿನ ಗ್ರಾಮಗಳಿಗೆ ಮುಂಬರುವ ಬೇಸಿಗೆಯಲ್ಲಿ ಕುಡಿಯುವ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಹೇಳಿದರು.ಮುಖ್ಯವಾಗಿ ಗ್ರಾಮಗಳ ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಹೆಚ್ಚಿನ ಆದ್ಯತೆ ನೀಡುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಪ್ರಮೀಳಾ ಚಿದಾನಂದಗೌಡ, ಮಾಜಿ ಉಪಾಧ್ಯಕ್ಷ ಜೆ.ಸಿ,ಶಶಿಧರ, ಗ್ರಾ.ಪಂ.ಸದಸ್ಯರಾದ ಚಿದಾನಂದಗೌಡ, ಎ.ಓಬಳೇಶ್, ಎಸ್.ಬಸವರಾಜ್, ಮುದೆ ರಂಗಪ್ಪ, ಸಿರಿಯಪ್ಪ, ನಾಗರತ್ನಮ್ಮ, ಮಂಜಮ್ಮ ಕುಮಾರಸ್ವಾಮಿ, ಮಡಿವಾಳ ರೇಣುಕಮ್ಮ, ಬಡಿಗೇರ್ ಶಶಿಧರ, ಎಚ್.ಭೀಮಪ್ಪ, ಏಕಾಂತಮ್ಮ, ಮುಖಂಡರಾದ ಆರ್.ಮರುಳಸಿದ್ದಪ್ಪ, ಈರಬಸಪ್ಪ, ಸಣ್ಣರಾಜಪ್ಪ, ಡಿ.ವೆಂಕಟೇಶ್, ಡಿ.ರುದ್ರೇಶ್, ಬಿ.ಸಿದ್ದಪ್ಪ, ಡಿ.ನಾಗರಾಜ, ಎ.ಮಾರಪ್ಪ, ಮಾಜಿ ಅಧ್ಯಕ್ಷ ಹೆಚ್.ನಾಗೇಂದ್ರಪ್ಪ, ಆರ್.ರೇವಣ್ಣ ಮುಂತಾದವರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry