ಮಂಗಳವಾರ, ಮೇ 11, 2021
21 °C

ಗ್ರಾಮ ಸಹಾಯಕರ ಸಂಘದಲ್ಲಿ ಒಡಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರಿ ಕಂದಾಯ ಇಲಾಖಾ ಗ್ರಾಮ ಸಹಾಯಕರ ಸಂಘದಲ್ಲಿ ಒಡಕು ಉಂಟಾಗಿದ್ದು, ಎರಡು ಗುಂಪುಗಳು ತಮ್ಮದೇ ಮೂಲ ಸಂಘವೆಂದು ಪ್ರತಿಪಾದಿಸುತ್ತಿವೆ.ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಮುದ್ದುಕೃಷ್ಣ ಅವರು, `ಗ್ರಾಮ ಸಹಾಯಕರ ಎಲ್ಲ ಬೇಡಿಕೆಗಳು ಈಡೇರುವ ಸಂದರ್ಭದಲ್ಲಿ ಬಿ.ಎಸ್.ಚಂದ್ರಪ್ಪ ಅವರು ಗ್ರಾಮ ಸಹಾಯಕರ ಸಂಘದ ಅಧ್ಯಕ್ಷ ಎಂದು ಅನಧಿಕೃತವಾಗಿ ಘೋಷಣೆ ಮಾಡಿಕೊಂಡು ಗ್ರಾಮ ಸಹಾಯಕರಲ್ಲಿ ಒಡಕು ಮೂಡಿಸುವ ಹುನ್ನಾರ ಮಾಡಿದ್ದಾರೆ~ ಎಂದು ಆರೋಪಿಸಿದರು.`ಚಂದ್ರಪ್ಪ ಸರ್ಕಾರದ ವಿರುದ್ಧ ಕೆಲವು ಖಾಸಗಿ ವ್ಯಕ್ತಿಗಳನ್ನು ಸೇರಿಸಿಕೊಂಡು ಮುಷ್ಕರವನ್ನು ನಡೆಸುತ್ತಿದ್ದಾರೆ. ಆದರೆ, ಈ ಮುಷ್ಕರವನ್ನು ಸರ್ಕಾರ ಗಣನೆಗೆ ತೆಗೆದುಕೊಳ್ಳಬಾರದು. ಈ ಎಲ್ಲ ಮುಷ್ಕರಗಳನ್ನು ತಿರಸ್ಕರಿಸಬೇಕು~ ಎಂದು ಒತ್ತಾಯಿಸಿದರು.`ಗ್ರಾಮ ಸಹಾಯಕರಿಗೆ ಡಿ ದರ್ಜೆ ನೌಕರರೆಂದು ಪರಿಗಣಿಸಿ ಬೇಡಿಕೆಗಳನ್ನು ಈಡೇರಿಸಬೇಕು~ ಎಂದು ಆಗ್ರಹಿಸಿದರು.`ರಾಜ್ಯದಲ್ಲಿ ಸುಮಾರು 10,000 ಗ್ರಾಮ ಸಹಾಯಕರಿದ್ದಾರೆ. ಅದರಲ್ಲಿ ಎಲ್ಲರ ಬೆಂಬಲ ನಮಗೆ ಇದೆ. ಕೆಲವೇ ಕೆಲವು ವ್ಯಕ್ತಿಗಳನ್ನು ಬಳಸಿಕೊಂಡು ನಮ್ಮಲ್ಲಿಯೇ ಒಡಕು ಮೂಡಿಸುವ ತಂತ್ರ ನಡೆಯುತ್ತಿದೆ~ ಎಂದು ಆರೋಪಿಸಿದರು. ಗೋಷ್ಠಿಯಲ್ಲಿ ಉಪಾಧ್ಯಕ್ಷ ಬಿ.ಪುಟ್ಟಮಾದಯ್ಯ, ಪ್ರಧಾನ ಕಾರ್ಯದರ್ಶಿ ವೆಂಕಟಾಚಲಪ್ಪ ಇದ್ದರು.ಮುಷ್ಕರ ಮುಂದಕ್ಕೆ: `ಗ್ರಾಮ ಸಹಾಯಕರ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಮುಂದಾಗಿರುವ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ಉದ್ಯಾನದಲ್ಲಿ ಕೈಗೊಂಡಿರುವ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ~ ಎಂದು ಕರ್ನಾಟಕ ರಾಜ್ಯ ಕಂದಾಯ ಇಲಾಖೆ ಗ್ರಾಮ ಸಹಾಯಕರ ಸಂಘದ ಅಧ್ಯಕ್ಷ ಬಿ.ಎಸ್.ಚಂದ್ರು ತಿಳಿಸಿದರು.ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಇನ್ನು ಒಂದು ತಿಂಗಳೊಳಗೆ ಜಂಟಿ ಸಭೆ ನಡೆಸಿ ಡಿ ದರ್ಜೆ ನೌಕರರೆಂದು ಪರಿಗಣಿಸದಿದ್ದರೆ, ಮತ್ತೆ ಉಪವಾಸ ಸತ್ಯಾಗ್ರಹವನ್ನು ಆರಂಭಿಸಲಾಗುವುದು~ ಎಂದರು.`ನಮ್ಮ  ಸಂಘವೇ ನೋಂದಾಯಿತ ಸಂಘವಾಗಿದೆ. ಇಲ್ಲಿ ಬೇರೆ ಯಾವುದೇ ಅಪಪ್ರಚಾರಕ್ಕೆ ಆಸ್ಪದವಿಲ್ಲ. ಸಂಘದ ಹೆಸರಿನಲ್ಲಿ ಯಾವುದೇ ದೂರು ಬಂದರೆ, ಹಣ ದುರುಪಯೋಗ ಆಗಿದ್ದಲ್ಲಿ ಅಂತಹವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು ಮಾಡಲಾಗುವುದು~ ಎಂದು ಹೇಳಿದರು.ಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಚಿಕ್ಕರಂಗಯ್ಯ, ಎಸ್.ಎಂ.ಗಣಪತಿ, ತಿಪ್ಪಣ್ಣ ನಾಟೇಕರ್ ಮತ್ತಿತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.