ಗ್ರಾಮ ಸಾಮರಸ್ಯದ ಕೇಂದ್ರ

7

ಗ್ರಾಮ ಸಾಮರಸ್ಯದ ಕೇಂದ್ರ

Published:
Updated:

ನಾಗೇನಹಳ್ಳಿ(ಕಡೂರು): ದೇಶದ ಗ್ರಾಮಗಳು ಸಾಮರಸ್ಯದ ಕೇಂದ್ರಗಳಾಗಿದ್ದು, ರಾಜಕಾರಣದಿಂದ ಜೀವಂತಿಕೆ ನಾಶವಾಗುತ್ತಿದೆ ಎಂದು ಶಾಸಕ ಸಿ.ಟಿ.ರವಿ ವಿಷಾದ ವ್ಯಕ್ತಪಡಿಸಿದರು. ಕಡೂರು ತಾಲ್ಲೂಕು ಸಖರಾಯಪಟ್ಟಣ ಹೋಬಳಿ ನಾಗೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಚು ಗಾರನಹಳ್ಳಿಯಲ್ಲಿ ಭಾನುವಾರ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿಅವರು ಮಾತನಾಡಿದರು. ನಾಗೇನಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ 2.34ಕೋಟಿ ರೂ ಹಣ ಬಿಡುಗಡೆ ಮಾಡಿದ್ದು, ಕುಡಿಯುವ ನೀರು ಮತ್ತು ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಿದೆ. ಗ್ರಾ.ಪಂ. ವ್ಯಾಪ್ತಿಯ ಚಟ್ನಪಾಳ್ಯ, ಅಗ್ರಹಾರ, ತಾಂಡ್ಯ, ಹೊಸಹಳ್ಳಿ, ಕಂಚುಗಾರನಹಳ್ಳಿ ಮತ್ತು ನಾಗೇನಹಳ್ಳಿಗೆ ತಲಾ ರೂ.20ಲಕ್ಷ ಟಾರ್ ರಸ್ತೆ ನಿರ್ಮಾಣಕ್ಕೆ ನೀಡಲಾಗಿದೆ ಎಂದರು.  ಗ್ರಾ.ಪಂ ವ್ಯಾಪ್ತಿಗಳಲ್ಲಿ ಈ ಮುನ್ನ ಮೂವತ್ತರಿಂದ ನಲವತ್ತು ಮನೆಗಳನ್ನು ಆಶ್ರಯ ಯೋಜನೆ ಅಡಿ ನಿರ್ಮಿಸಲಾಗುತ್ತಿತ್ತು. ಆದರೆ ಈ ಬಾರಿ ಬಸವ ವಸತಿ ಯೋಜನೆ ಯಡಿ 200 ಮನೆಗಳಿಗೆ ಮಂಜೂರಾತಿ ನೀಡಲಾಗಿದೆ ಎಂದು ತಿಳಿಸಿದರು. ಶಿಕ್ಷಣ, ಕೃಷಿ, ಜಲ, ಪರಿಸರ, ಕುಟುಂಬ ವ್ಯವಸ್ಥೆ, ಸಾಮರಸ್ಯ ಮುಂತಾದ ಎಂಟು ವಿಷಯಗಳನ್ನು ಇಟ್ಟುಕೊಂಡು ಹಳ್ಳಿಗಳಲ್ಲಿ ಆರೋಗ್ಯಕರ ಚರ್ಚೆ ನಡೆಸಿ ಗ್ರಾಮಗಳ ಸಮಸ್ಯೆ ಅರಿವು ಪಡೆದುಕೊಳ್ಳುವುದು ಗ್ರಾಮ ವಾಸ್ತವ್ಯದ ಧ್ಯೇಯ ಎಂದು ಅವರು ವಿಶ್ಲೇಷಿಸಿದರು. ಭೂಮಿ ಅಕ್ಷಯ ಪಾತ್ರೆಯಲ್ಲ. ಭೂಮಿಯಲ್ಲಿ ಸಾವಿರಾರು ವರ್ಷಗಳಿಗೆ ಆಗಬಹುದಾಗಿದ್ದ ಅಂತರ್ಜ ಲವನ್ನು ನಾವು ನಮ್ಮ ಬೆಳೆಗಳಲ್ಲಾದ ಬದಲಾವಣೆಗೆ ಪೂರಕವಾಗಿ ದುರ್ಬಳಕೆ ಮಾಡಿಕೊಂಡು ಭೂಮಿಯನ್ನು ಬರಡಾಗಿಸಿದ್ದೇವೆ.ಪುನಃ ನಾವು ಭೂಮಿಯ ಹೊಟ್ಟೆ ತಣಿಸುವುದು ಕಷ್ಟ. ಇದನ್ನು ಅರಿತು ಹನಿ ನೀರನ್ನೂ ಗೌರವಿಸಿದಾಗ ಮಾತ್ರ ನೀರಿನ ಮಹತ್ವ ಅರಿವಾಗುತ್ತದೆ. ಆದ್ದರಿಂದ ನೀರಿನ ಸದ್ಬಳಕೆ ಕುರಿತು ಜಾಗೃತಿ ಮೂಡಿಸುವಂತಾಗಲಿ ಎಂದು ಆಶಿಸಿದರು.ಗ್ರಾಮೀಣರು ಕಾಯಕದ ಮೇಲೆ ನಂಬಿಕೆ ಇಟ್ಟುಕೊಂಡು ಕೆಲಸಗಳನ್ನು ಮಾಡಬೇಕು. ಹಳ್ಳಿಗಳಲ್ಲಿ ಜೀವಂತಿಕೆ ತುಂಬುವ ಕಾರಣಕ್ಕಾಗಿ ಈವರೆಗೆ 13 ಗ್ರಾಮ ವಾಸ್ತವ್ಯ ಮಾಡಿದ್ದು ಅನೇಕ ಸಮಸ್ಯೆಗಳ ಪರಿಹಾರಕ್ಕೆ ಯತ್ನಿಸಿ ಸಾಕಷ್ಟು ಪರಿಹಾರವನ್ನೂ ಕಂಡುಕೊಂಡಿದ್ದೇನೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.ಜಿ.ಪಂ.ಸದಸ್ಯ ಎಚ್.ಸಿ.ಕಲ್ಮರುಡಪ್ಪ, ತಾ.ಪಂ.ಸದಸ್ಯೆ ಸುನೀತಾ, ಗ್ರಾ.ಪಂ.ಅಧ್ಯಕ್ಷ ಪರಮೇಶ್ವರಪ್ಪ, ಉಪಾಧ್ಯಕ್ಷೆ ನಯನಾ ಕಲ್ಮರುಡಪ್ಪ, ಸದಸ್ಯರಾದ ನಾಗೇಗೌಡ, ಚಿದಾನಂದ, ರಾಜು, ಮಲ್ಲಿಕಾರ್ಜುನಪ್ಪ, ಶಶಿಧರ್, ಮರುಳಸಿದ್ದಪ್ಪ ಮತ್ತು ಚಂದ್ರಪ್ಪ, ಬಿಜೆಪಿ ಜಿಲ್ಲಾ ಎಸ್‌ಸಿ ಎಸ್‌ಟಿ ಮೋರ್ಚಾ ಅಧ್ಯಕ್ಷ ಲಕ್ಷ್ಮಣ ನಾಯ್ಕ, ಗ್ರಾ.ಪಂ.ಕಾರ್ಯದರ್ಶಿ ಬಸವರಾಜ್ ಮತ್ತು ವಿವಧ ಇಲಾಖೆ ಅಧಿಕಾರಿಗಳು ಇದ್ದರು.   

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry