ಗ್ರಾವಿಟಾಸ್: ಕೇಂದ್ರೀಯ ವಿವಿ ವಿಜಯ ಪತಾಕೆ

ಭಾನುವಾರ, ಮೇ 19, 2019
33 °C

ಗ್ರಾವಿಟಾಸ್: ಕೇಂದ್ರೀಯ ವಿವಿ ವಿಜಯ ಪತಾಕೆ

Published:
Updated:

ಗುಲ್ಬರ್ಗ: ತಮಿಳುನಾಡಿನ ವೆಲ್ಲೂರು ವಿಐಟಿ ವಿಶ್ವವಿದ್ಯಾಲಯವು ಸೆ. 16ರಿಂದ 18ರವರೆಗೆ ಆಯೋಜಿಸಿದ್ದ `ಇಂಟರ್‌ನ್ಯಾಷನಲ್ ಕಾರ್ನಿವಲ್- ಗ್ರಾವಿಟಾಸ್ 2011~ ಸ್ಪರ್ಧೆಯಲ್ಲಿ ಮೊದಲ ಬಾರಿಗೆ ಪಾಲ್ಗೊಳ್ಳುವ ಅವಕಾಶ ಪಡೆದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪ್ರಥಮ ಬಹುಮಾನ ಗಳಿಸಿದ್ದಾರೆ. ಈ ಸ್ಪರ್ಧೆಯಲ್ಲಿ ಭಾರತದ ಸುಮಾರು 300ಕ್ಕೂ ಹೆಚ್ಚು ಮ್ಯಾನೇಜ್‌ಮೆಂಟ್, ಎಂಜಿನಿಯರಿಂಗ್ ಕಾಲೇಜುಗಳಿಂದ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಕರ್ನಾಟಕ ಕೇಂದ್ರೀಯ ವಿವಿ ಮ್ಯಾನೇಜ್‌ಮೆಂಟ್ ವಿಭಾಗದ ವಿದ್ಯಾರ್ಥಿಗಳು `ಗ್ರಾವಿಟಾಸ್ 2011~ರ `ಪ್ರಾಡಕ್ಟ್ ಲಾಂಚ್~ ಎಂಬ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ರೂ. 5000 ಮೊತ್ತದ ಪ್ರಥಮ ಬಹುಮಾನ ತಮ್ಮದಾಗಿಸಿಕೊಂಡಿದ್ದಾರೆ. ವಿದೇಶಗಳಲ್ಲಿ ಯಶಸ್ವಿಯಾಗಿ ಮಾರಾಟವಾಗುತ್ತಿರುವ, ಆದರೆ ಭಾರತದಲ್ಲಿ ಇನ್ನೂ ಮಾರುಕಟ್ಟೆಗೆ ಬಾರದ ವಿದೇಶಿ ಉತ್ಪನ್ನವೊಂದನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡುವ ಯೋಜನೆಯ ನೀಲಿನಕ್ಷೆಯ ಪ್ರಾತ್ಯಕ್ಷಿಕೆ ಮಾಡುವ ಸ್ಪರ್ಧೆ ಇದಾಗಿತ್ತು. ಮಕ್ಕಳ ಕೆನ್ನೆಗೆ ಬಳಸುವ ಕ್ರೀಮ್- `ಬ್ಲೇರೆಕ್ಸ್ ಬೇಬಿ ಕಿಸಸ್~ ಎಂಬ ಉತ್ಪನ್ನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಪ್ರಾತ್ಯಕ್ಷಿಕೆ ಮಂಡಿಸಲಾಯಿತು. ಇದನ್ನು ವಾಸಿಮ್ ಅಕ್ರಮ್, ರವಿ ಸೇನ್, ಶಿರಿಷಾ ಮತ್ತು ರಜತ್ ಸಿದ್ಧಪಡಿಸಿದ್ದರು.ಅಲ್ಲದೇ ಮತ್ತೊಂದು ಸ್ಪರ್ಧೆ `ಬೆಸ್ಟ್ ಮ್ಯಾನೇಜರ್~ ಎಂಬುದರಲ್ಲಿ ವಿವಿ ವಿದ್ಯಾರ್ಥಿನಿ ರಂಜಿತ ಫೈನಲ್‌ಗೆ ಆಯ್ಕೆಯಾದರು. `ಆ್ಯಡ್ ವಾರ್ಸ್‌~ ಎಂಬ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಸೆಮಿಫೈನಲ್ ತಲುಪಿದರು.ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಮ್ಯಾನೇಜ್‌ಮೆಂಟ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಮೊಹಮ್ಮದ್ ಜೊಹೇರ್ ಮಾರ್ಗದರ್ಶನ ಮಾಡಿದರು. ವಿದ್ಯಾರ್ಥಿಗಳಾದ ರಾಜಶೇಖರ್, ಅದ್ನಾನ್, ಆಶಿಶ್, ಉದಯ್ ಮತ್ತು ಹರ್ಷಿತಾ ತಂಡದ ಸದಸ್ಯರಾಗಿದ್ದರು.ಅಭಿನಂದನೆ: ವಿವಿಗೆ ಹಿಂದಿರುಗಿದ ವಿದ್ಯಾರ್ಥಿಗಳು ಹಾಗೂ ಸ್ಕೂಲ್ ಆಫ್ ಬಿಸಿನೆಸ್ ಸ್ಟಡೀಸ್‌ನ ಡೀನ್ ಪ್ರೊ. ರಾಜನಾಳ್ಕರ್ ಲಕ್ಷ್ಮಣ್ ಮತ್ತು ವಿಭಾಗದ ಮುಖ್ಯಸ್ಥ ಪ್ರೊ. ಎಂ.ವಿ. ಅಳಗವಾಡಿ, ಡಾ. ಜೊಹೇರ್ ಅವರನ್ನು ಕುಲಪತಿ ಪ್ರೊ. ಎ.ಎಂ.ಪಠಾಣ್ ಅಭಿನಂದಿಸಿದರು. ಸಮ-ಕುಲಪತಿ ಪ್ರೊ. ಎಸ್. ಚಂದ್ರಶೇಖರ್, ಕುಲಸಚಿವ ಎ.ಕೆ. ಪೂಜಾರಿ ಅವರೂ ಅಭಿನಂದಿಸಿದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry