`ಗ್ರಾಹಕರ ನೆರವಿಗೆ ಆನ್‌ಲೈನ್ ಸೌಲಭ್ಯ'

7

`ಗ್ರಾಹಕರ ನೆರವಿಗೆ ಆನ್‌ಲೈನ್ ಸೌಲಭ್ಯ'

Published:
Updated:

ಹಾಸನ: ನ್ಯಾಷನಲ್ ಇನ್ಶೂರೆನ್ಸ್ ಕಂಪನಿಯು ಇಂದು ದೇಶದಲ್ಲಿ 1340 ಶಾಖೆಗಳನ್ನು ಹೊಂದಿದೆ ಎಂದು ಕಂಪನಿಯ ಹಾಸನ ವಿಭಾಗೀಯ ವ್ಯವ ಸ್ಥಾಪಕ ಪ್ರಭಾಕರ್ ಶೆಟ್ಟಿ ನುಡಿದರು.ಇಲ್ಲಿನ ವಿಭಾಗೀಯ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ 107 ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಂಪನಿಯು ದೇಶದಲ್ಲಿ 36 ಪ್ರಾದೇಶಿಕ, 339 ವಿಭಾಗೀಯ, 602 ಶಾಖೆ, ಹಾಗೂ 373 ಸೇವಾಕೇಂದ್ರಗಳನ್ನು ಹೊಂದಿದೆ ಎಂದು ಮಾಹಿತಿ ನೀಡಿದರು. ಗ್ರಾಹಕರಿಗೆ ಕ್ಲೈಮುಗಳನ್ನು ಆನ್‌ಲೈನ್ ಮೂಲಕ ಅವರ ಖಾತೆಗೆ ನೇರವಾಗಿ ವರ್ಗಾಯಿ ಸುವ ಸೌಲಭ್ಯವನ್ನೂ ಅಳವಡಿಸಿ ಕೊಂಡು ತುರ್ತು ಪರಿಹಾರ ನೀಡುತ್ತಿದೆ ಎಂದರು.ಕಂಪನಿಯ ಅಧಿಕಾರಿಗಳಾದ ಗೋಪಾಲಕೃಷ್ಣ, ವೆಂಕಟರಾಮ್, ಪ್ರವೀಣ್‌ಪಾಲ್, ಗಣಪತಿ,, ಅಭಿವೃದ್ದಿ ಅಧಿಕಾರಿಗಳಾದ ಚಂದ್ರಶೇಖರ್, ರಾಮಚಂದ್ರ, ಸಿಬ್ಬಂದಿಗಳಾದ ಮಂಜುನಾಥ್, ಗೋಪಿನಾಥ್, ಹಿರಣ್ಣಯ್ಯ, ಕ್ರಾಮರ್, ಅಣ್ಣಾಜಿ, ವೀರಭದ್ರಶೆಟ್ಟಿ, ಕಮಲಮ್ಮ ಪ್ರತಿನಿಧಿಗಳಾದ ಸುರೇಶ್‌ಕುಮಾರ್, ನಾಗರಾಜು, ದಾರೇಶ್, ನಾಗರಾಜು, ವಿಶ್ವನಾಥ್, ಕುಮಾರ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry