ಗ್ರಾಹಕರ ಬವಣೆಗೆ ಕೆಎಂಎಫ್‌ ಹೊಣೆಯಲ್ಲ!

7

ಗ್ರಾಹಕರ ಬವಣೆಗೆ ಕೆಎಂಎಫ್‌ ಹೊಣೆಯಲ್ಲ!

Published:
Updated:

ಗ್ರಾಹಕರಿಂದ ಹಣ ಹಿಂಡುವ ಸಂಸ್ಥೆ ಕೆಎಂಎಫ್‌. ಇದು ಮತ್ತೆ ಹಾಲಿನ ದರ ಏರಿಸಿದೆ. ಏರಿಕೆಗೆ ಕಾರಣಗಳನ್ನು ನೀಡುವಲ್ಲಿ ಇದಕ್ಕೆ ಏನೂ ಮುಜುಗರ­ವಿಲ್ಲ. ಏರಿಕೆಗಳನ್ನು ತಡೆದುಕೊಳ್ಳುವ ತ್ರಾಣ ಗ್ರಾಹಕರ ಆದಾಯದಿಂದ ದೊರಕುತ್ತದೆಯೆಂಬ ನಂಬಿಕೆ ಇಲ್ಲ.ಕೆಎಂಎಫ್‌ ಸ್ಥಾಪನೆಯಾಗಿ ಅದೆಷ್ಟೋ ವರ್ಷಗಳಾಗಿವೆ. ಹಾಲು ಹೆಚ್ಚುವರಿ­ಯಾಗಿ ಶೇಖರಣೆ ಆಗುತ್ತಿರುವ ಸ್ಥಿತಿ ಕೂಡ ಅನೇಕ ವರ್ಷ­ಗಳಿಂದ ಇದೆ. ಹಾಲಿನ ಪುಡಿಯನ್ನು ಉತ್ಪಾದಿಸುವ ತನ್ನದೇ ಘಟಕಗಳನ್ನು ಹೊಂದುವ ಮುಂದಾಲೋಚನೆಯೇ ಈ ಸಂಸ್ಥೆಯನ್ನು ನಿರ್ವಹಿಸಿದ  ಜಾಣರಿಗೆ ಹೊಳೆದಿಲ್ಲ! ಹೊರರಾಜ್ಯಗಳ   ಹಾಲು ಪರಿವರ್ತನಾ ಘಟಕಕ್ಕೆ ಪ್ರತಿದಿನ ಲಕ್ಷಾಂತರ ಲೀಟರ್‌ ಹೆಚ್ಚುವರಿ ಹಾಲು ಕಳಿಸಿ, ಹಾಲಿನ ಪುಡಿ ಮಾಡಿಸಿ, ತರಿಸಿಕೊಂಡು ವಿಲೇವಾರಿ ಮಾಡುವ ‘ಶಾಣ್ಯಾತನ’ ಕೆಎಂಎಫ್‌ದು! ತನ್ನದೇ ಘಟಕದ ಬಗ್ಗೆ ಈಗ ವಿಚಾರ ಮಾಡುತ್ತಿದೆ! ಇಲ್ಲೂ ಸುಮಾರು 10 ಲಕ್ಷ ಲೀಟರ್‌ ಹಾಲಿನ ಪುಡಿ ಮಾಡುವ ನಾಲ್ಕು ಘಟಕಗಳನ್ನಷ್ಟೇ ಸ್ಥಾಪಿಸುವ ವಿಚಾರ. ಮಿಕ್ಕುದನ್ನು ಯಥಾಪ್ರಕಾರ ಹೊರ ರಾಜ್ಯಗಳಿಗೆ ಕಳುಹಿಸಬೇಕು ಪುಡಿಗಾಗಿ. ಕೆಎಂಎಫ್‌ ಕ್ಷೀರಸಾಗರದ ಆಗರ. ಆದರೆ, ಗ್ರಾಹಕರ ಪಾಲಿಗೆ?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry