ಗ್ರಾಹಕರ ಬೆಳವಣಿಗೆಯೇ ಬ್ಯಾಂಕ್‌ನ ಶ್ರೇಯಸ್ಸು

7

ಗ್ರಾಹಕರ ಬೆಳವಣಿಗೆಯೇ ಬ್ಯಾಂಕ್‌ನ ಶ್ರೇಯಸ್ಸು

Published:
Updated:

ಸಾಗರ: ಗ್ರಾಹಕರ ಬೆಳವಣಿಗೆಯೇ ಬ್ಯಾಂಕ್‌ನ ಬೆಳವಣಿಗೆ ಎಂಬ ತತ್ವದಲ್ಲಿ ನಮ್ಮ ಸಂಸ್ಥೆಗೆ ಸಂಪೂರ್ಣ ನಂಬಿಕೆ ಇದೆ ಎಂದು ಕರ್ನಾಟಕ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಜಯರಾಮ ಭಟ್ ಹೇಳಿದರು.ಬುಧವಾರ ನಡೆದ ಕರ್ನಾಟಕ ಬ್ಯಾಂಕ್‌ನ ನವೀಕರಣಗೊಂಡ ಶಾಖೆಯ ಸಮರ್ಪಣಾ ಸಮಾರಂಭ ಹಾಗೂ ಗ್ರಾಹಕರ ಸಮಾವೇಶದ ಅಧ್ಯಕ್ಷತೆ ವಹಿಸಿ  ಅವರು ಮಾತನಾಡಿದರು.ಇತರ ಬ್ಯಾಂಕ್‌ಗಳಿಗೆ ಹೋಲಿಸಿದರೆ ಗ್ರಾಹಕರ ಠೇವಣಿಗೆ ನಮ್ಮ ಬ್ಯಾಂಕ್ ಹೆಚ್ಚಿನ ದರದ ಬಡ್ಡಿ ನೀಡುತ್ತಿದೆ. ಇದರ ಅರ್ಥ ಬ್ಯಾಂಕ್ ಸಂಕಷ್ಟದಲ್ಲಿದೆ ಎಂದಲ್ಲ. ನಮ್ಮ ಗ್ರಾಹಕರು ಬೇರೆ ಬ್ಯಾಂಕ್‌ನತ್ತ ಆಕರ್ಷಿತರಾಗಬಾರದು ಎನ್ನುವ ಕಾರಣಕ್ಕೆ ಎಂದು ಅವರು ಹೇಳಿದರು.ಉನ್ನತ ತಂತ್ರಜ್ಞಾನ ಅಳವಡಿಸಿಕೊಳ್ಳುವಲ್ಲಿ ನಮ್ಮ ಬ್ಯಾಂಕ್ ಯಾವತ್ತೂ ಹಿಂದೆ ಬಿದ್ದಿಲ್ಲ. ಮಕ್ಕಳಿಗಾಗಿ ಕೆಬಿಎಲ್ ಕಿಶೋರ್, ಯುವಜನರಿಗಾಗಿ ಕೆಬಿಎಲ್ ತರುಣ್, ಮಹಿಳೆಯರಿಗಾಗಿ ಕೆಬಿಎಲ್ ವನಿತಾ ಎಂಬ ಯೋಜನೆ ಸೇರಿದಂತೆ ಅನೇಕ ನೂತನ ಯೋಜನೆಗಳನ್ನು ಗ್ರಾಹಕರ ಅನುಕೂಲಕ್ಕಾಗಿ ರೂಪಿಸಲಾಗಿದೆ ಎಂದು ತಿಳಿಸಿದರು.ಕರ್ನಾಟಕ ಬ್ಯಾಂಕ್ ಆರ್ಥಿಕವಾಗಿ ವರ್ಷದಿಂದ ವರ್ಷಕ್ಕೆ ಹೆಚ್ಚೆಚ್ಚು ಸದೃಢವಾಗುತ್ತಿದೆ. ್ಙ 2,300ಕೋಟಿ  ಸ್ವಂತ ನಿಧಿಯನ್ನೇ ಸಂಸ್ಥೆ ಹೊಂದಿದೆ. ಇಲ್ಲಿನ ಶಾಖೆ ವಾರ್ಷಿಕ ್ಙ 88ಕೋಟಿ  ವಹಿವಾಟು ನಡೆಸುತ್ತಿದ್ದು, ್ಙ 100 ಕೋಟಿ ತಲುಪಲು ಗ್ರಾಹಕರ ಸಹಕಾರ ಅಗತ್ಯ ಎಂದರು.ರಂಗಕರ್ಮಿ ಕೆ.ವಿ. ಅಕ್ಷರ ಮಾತನಾಡಿ, ಈ ಹಿಂದೆ ಶ್ರೀಮಂತರು ಹಾಗೂ ವ್ಯಾಪಾರಸ್ಥರಿಗೆ ಮಾತ್ರ ಬ್ಯಾಂಕ್‌ಗಳ ಆವಶ್ಯಕತೆ ಇತ್ತು. ಬದಲಾದ ಸಾಮಾಜಿಕ, ಆರ್ಥಿಕ ಸನ್ನಿವೇಶದಲ್ಲಿ ಸಮಾಜದ ಎಲ್ಲಾ ವರ್ಗಗಳಿಗೂ ಬ್ಯಾಂಕ್‌ಗಳ ಅಗತ್ಯವಿದೆ. ಬ್ಯಾಂಕ್‌ಗಳು ಇಲ್ಲದ ವ್ಯವಸ್ಥೆಯನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ ಎಂದು ಹೇಳಿದರು.

ಬ್ಯಾಂಕ್‌ನ ಪ್ರಾದೇಶಿಕ ಕಚೇರಿ ಸಹಾಯಕ ಮಹಾಪ್ರಬಂಧಕ ಎಚ್.ಪಿ.ಆರ್. ಹಂದೆ ಸ್ವಾಗತಿಸಿದರು. ಶಾಖಾ ಪ್ರಬಂಧಕ ಬಿ.ವಿ. ಸುರೇಂದ್ರ ವಂದಿಸಿದರು. ಕೆ.ಎಂ. ಶ್ರೀಕಾಂತ್ ಕಾರ್ಯಕ್ರಮ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry