ಶುಕ್ರವಾರ, ಜೂನ್ 5, 2020
27 °C

ಗ್ರಾಹಕ ಸ್ನೇಹಿ ಎಂಎನ್‌ಪಿ ಜಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಸೇವಾ ಸಂಸ್ಥೆ ಬದಲಿಸಿಯೂ ಮೊಬೈಲ್ ಸಂಖ್ಯೆ ಉಳಿಸಿಕೊಳ್ಳಲು ಅವಕಾಶ ಮಾಡಿಕೊಡುವ ಗ್ರಾಹಕ ಸ್ನೇಹಿ (ಮೊಬೈಲ್ ನಂಬರ್ ಪೋರ್ಟೆಬಿಲಿಟಿ- ಎಂಎನ್‌ಪಿ) ಸೌಲಭ್ಯವು ದೇಶದಾದ್ಯಂತ ಜಾರಿಗೆ ಬರುವುದಕ್ಕೆ ಪ್ರಧಾನಿ ಮನಮೋಹನ್ ಸಿಂಗ್ ಗುರುವಾರ ಇಲ್ಲಿ ಚಾಲನೆ ನೀಡಿದರು.ಈ ಸೌಲಭ್ಯವು ಮೊಬೈಲ್ ಸೇವಾ ರಂಗದಲ್ಲಿ ಪೈಪೋಟಿಗೆ ಕಾರಣವಾಗಿ ಗುಣಮಟ್ಟದ ಸೇವೆ ನೀಡಲು ನೆರವಾಗಲಿದೆ. ದೇಶಿ ದೂರಸಂಪರ್ಕ ರಂಗದ ಇನ್ನಷ್ಟು ಬೆಳವಣಿಗೆಗೂ ಕಾರಣವಾಗಲಿದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟರು.ಸಂಪರ್ಕಜಾಲದ ವ್ಯಾಪ್ತಿ ಮತ್ತು ಸಂಸ್ಥೆ ನೀಡುವ ಗ್ರಾಹಕರ ಸೇವೆ ಬಗ್ಗೆ ಅತೃಪ್ತಿ ಹೊಂದಿದ್ದರೆ ಚಂದಾದಾರರು ಮೊಬೈಲ್ ಸೇವಾ ಸಂಸ್ಥೆ ಬದಲಿಸುವ ಸೌಲಭ್ಯವನ್ನು ‘ಎಂಎನ್‌ಪಿ’ ಒದಗಿಸಿಕೊಡಲಿದೆ. ದೇಶದ 70 ಕೋಟಿ ಜಿಎಸ್‌ಎಂ ಮತ್ತು ಸಿಡಿಎಂಎ ತಂತ್ರಜ್ಞಾನದ ಮೊಬೈಲ್ ಬಳಕೆದಾರರು ಇದರ ಪ್ರಯೋಜನ ಪಡೆದುಕೊಳ್ಳಬಹುದು.ಸೇವಾ ಸಂಸ್ಥೆಗಳ ಸ್ವಾಗತ: ದೇಶದಾದ್ಯಂತ ಜಾರಿಗೆ ಬಂದಿರುವ ಮೊಬೈಲ್ ಸ್ಥಿರ ಸಂಖ್ಯೆ (ಎಂಎನ್‌ಪಿ) ಸೇವೆಯನ್ನು ದೂರಸಂಪರ್ಕ ಸೇವಾ  ಸಂಸ್ಥೆಗಳು ಸ್ವಾಗತಿಸಿವೆ. ಇದರಿಂದ ಕಳಪೆ ಗುಣಮಟ್ಟದ ಸೇವೆ ಒದಗಿಸುವ ಮೊಬೈಲ್ ಸಂಸ್ಥೆಗಳಿಂದ ಹೊರ ಬರುವ ಸ್ವಾತಂತ್ರ್ಯವು ಗ್ರಾಹಕರಿಗೆ ದೊರೆಯಲಿದೆ ಎಂದು ಅಭಿಪ್ರಾಯಪಟ್ಟಿವೆ.ಮೊಬೈಲ್ ಸೇವಾ ಸಂಸ್ಥೆ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ಗ್ರಾಹಕರಿಗೆ ದೊರೆಯಬೇಕೆಂದು ನಾವು ಮೊದಲಿನಿಂದಲೂ ಪ್ರತಿಪಾದಿಸುತ್ತ ಬಂದಿದ್ದೇವೆ.‘ಎಂಎನ್‌ಪಿ’ಯು ಬಳಕೆದಾರರಿಗೆ ಸೇವಾ ಸಂಸ್ಥೆ ಆಯ್ದುಕೊಳ್ಳುವ ಸ್ವಾತಂತ್ರ್ಯ ಒದಗಿಸಲಿದೆ ಎಂದು ಟಾಟಾ ಟೆಲಿಸರ್ವಿಸಸ್ ಲಿಮಿಟೆಡ್‌ನ ಕಾರ್ಯನಿರ್ವಾಹಕ ಅಧ್ಯಕ್ಷ ದೀಪಕ್  ಗುಲಾಟಿ ಪ್ರತಿಕ್ರಿಯಿಸಿದ್ದಾರೆ.*ಮೊಬೈಲ್ ತಂತ್ರಜ್ಞಾನ (ಜಿಎಸ್‌ಎಂ ಅಥವಾ ಸಿಡಿಎಂಎ)  ಯಾವುದೇ ಇರಲಿ ಮತ್ತು ಮೊಬೈಲ್ ವೃತ್ತದೊಳಗಿನ ಒಂದೇ ಸೇವಾ ಸಂಸ್ಥೆಯ ಬೇರೆ ಬೇರೆ ತಂತ್ರಜ್ಞಾನಕ್ಕೂ ಗ್ರಾಹಕರು ಬದಲಾಗಬಹುದು.*ಇಂತಹ ಸೇವೆ ಪಡೆಯಲು ಗ್ರಾಹಕರು ಮೊದಲು 1900 ಸಂಖ್ಯೆಗೆ   PORT<SPACE>MOBILE NUMBER)  ‘ಎಸ್‌ಎಂಎಸ್’ ಕಳಿಸಬೇಕು. ಇದಕ್ಕೆ ಪ್ರತಿಯಾಗಿ ಗ್ರಾಹಕರು ತಮ್ಮ ಮೊಬೈಲ್ ಸೇವಾ ಸಂಸ್ಥೆಯಿಂದ  ವಿಶಿಷ್ಟ ಬದಲಾಗುವ ಸಂಕೇತ (Unique Porting Code - UPC) ಪಡೆಯುತ್ತಾರೆ.ಆನಂತರ ಗ್ರಾಹಕರು ತಾವು ಆಯ್ಕೆ ಮಾಡಿಕೊಳ್ಳುವ ಹೊಸ ಮೊಬೈಲ್ ಸೇವಾ ಸಂಸ್ಥೆಗೆ ನಿರ್ದಿಷ್ಟ ಅರ್ಜಿ ನಮೂನೆಯಲ್ಲಿ ಮನವಿ ಮಾಡಿಕೊಳ್ಳಬೇಕಾಗುತ್ತದೆ. ಅದರಲ್ಲಿ  ‘ಯುಪಿಸಿ’ಯನ್ನು ಕಡ್ಡಾಯವಾಗಿ ನಮೂದಿಸಬೇಕಾಗುತ್ತದೆ.*ಏಳು ದಿನಗಳಲ್ಲಿ ಈ ಬದಲಾವಣೆ ಕಾರ್ಯರೂಪಕ್ಕೆ ಬರುತ್ತದೆ.*ಈ ಬದಲಾವಣೆಗೆ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು (ಟ್ರಾಯ್) ್ಙ 19 ನಿಗದಿ ಪಡಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.