ಗ್ರೀಟಿಂಗ್ಸ್ ಕೇಳೋರಿಲ್ಲ... ಟ್ರೀ, ಬೆಲ್‌ಗೆ ಬೇಡಿಕೆ!

7

ಗ್ರೀಟಿಂಗ್ಸ್ ಕೇಳೋರಿಲ್ಲ... ಟ್ರೀ, ಬೆಲ್‌ಗೆ ಬೇಡಿಕೆ!

Published:
Updated:

ರಾಯಚೂರು: ಈ ವರ್ಷದ ಕ್ರಿಸ್‌ಮಸ್ ಹಬ್ಬದ ಸಂಭ್ರಮಕ್ಕೆ ಇನ್ನೊಂದೇ ದಿನ! ಕ್ರೈಸ್ತ ಬಾಂಧವರು ಹಬ್ಬದ ಸಿದ್ಧತೆಯಲ್ಲಿ ತೊಡಗಿದ್ದಾರೆ. ಚರ್ಚ್‌ಗಳಲ್ಲಿ ಕ್ರಿಸ್‌ಮಸ್ ಹಬ್ಬದ ವಿಶೇಷ ಸಿದ್ಧತೆಯೂ ನಡೆಯುತ್ತಿದೆ.ಹಬ್ಬದ ಸಂಭ್ರಮ ಇಮ್ಮಡಿಗೊಳಿಸಲು ಮಾರುಕಟ್ಟೆಗೆ ಅಲಂಕಾರಿಕ ವಸ್ತುಗಳ ಲಗ್ಗೆ ಇಟ್ಟಿವೆ. ಕ್ರಿಸ್‌ಮಸ್ ಹಬ್ಬ ಇನ್ನೂ ಹತ್ತು ದಿನ, ಒಂದು ವಾರ ಮುಂದೆ ಇರುವಾಗಲೇ ಮಾರುಕಟ್ಟೆ ಕ್ರಿಸ್ ಮಸ್ ಹಬ್ಬದ ಅಲಂಕಾರಿಕ ವಸ್ತುಗಳು ಮಾರುಕಟ್ಟೆ ಧಾವಿಸುತ್ತವೆ. ಈ ವರ್ಷವೂ ಅದೇ ರೀತಿ ಮಾರುಕಟ್ಟೆ ಈ ಅಲಂಕಾರಿಕ ವಸ್ತುಗಳು ಬಂದಿವೆ. ಆದರೆ, ಕಳೆದ 20 ಹಾಗು 22ರಂದು ರಾಯಚೂರು ನಗರ ಬಂದ್ ಆಗಿದ್ದರಿಂದ ಈ ಹಬ್ಬದ ಸಾಮಗ್ರಿ ಮಾರಾಟದಲ್ಲಿ ಏರುಪೇರಾಗಿದೆ. ಲಕ್ಷಾಂತರ ರೂಪಾಯಿ ಕೊಟ್ಟು ಅಲಂಕಾರಿಕ ವಸ್ತು ಖರೀದಿಸಿ ತಂದ ಮಾಲೀಕರು ಸ್ವಲ್ಪ ತೊಂದರೆ ಆಗಿದೆ.ಆದರೆ, ಈಗ ಈ ಅಲಂಕಾರಿಕ ವಸ್ತುಗಳು ಮಾರಾಟ ಜೋರಾಗಿದೆ. ಕ್ರಿಸ್‌ಮಸ್ ಹಬ್ಬ ನಾಳೆಯೇ ಇರುವುದರಿಂದ ಕ್ರೈಸ್ತ ಬಾಂಧಬರು, ಸಂಸ್ಥೆಗಳು ಖರೀದಿಸುತ್ತಿವೆ. ಆದರೆ ಕಳೆದ ವರ್ಷಕ್ಕಿಂತ ಈ ವರ್ಷ ಬೆಲೆ ಮಾತ್ರ ಜಾಸ್ತಿ ಎಂಬುದು ಮಾರಾಟಗಾರರು ಮತ್ತು ಗ್ರಾಹಕರು ಹೇಳುವ ಮಾತು!ಕ್ರಿಸ್‌ಮಸ್ ಹಬ್ಬದ ವಿಶೇಷ ಆಕರ್ಷಣೆಯಾದ ಕ್ರಿಸ್‌ಮಸ್ ಟ್ರೀ, ಬೆಲ್, ಸ್ಟಾರ್, ಸ್ಟಿಕರ್‌ಗಳನ್ನು ಗ್ರಾಹಕರು ಹೆಚ್ಚು ಖರೀದಿಸುತ್ತಿದ್ದಾರೆ. ಆದರೆ ಕ್ರಿಸ್‌ಮಸ್ ಶುಭಾಶಯ ಪತ್ರ( ಗ್ರಿಟಿಂಗ್ಸ್) ಮಾರಾಟ ಪಾತಾಳಕ್ಕೆ ಕುಸಿದಿದೆ! ಕಾರಣ ಇ-ಮೇಲ್,  ಮೊಬೈಲ್ ಮೆಸ್ಸೇಜ್ ಹಾವಳಿ! ಗ್ರಿಟಿಂಗ್ಸ್ ಮಾರಾಟ ಪ್ರತಿ ವರ್ಷಕ್ಕಿಂತ ಅತ್ಯಂತ ಕನಿಷ್ಠ ಮಟ್ಟಕ್ಕೆ ಮಾರಾಟ ಆಗುತ್ತಿದೆ ಎಂದು ವ್ಯಾಪಾರಸ್ಥರು ಹೇಳುತ್ತಾರೆ.ಕ್ರಿಸ್‌ಮಸ್ ತಾತಾನ ಉಡುಪ ಮಾಸ್ಕ್ ಸಹಿತ ( ಸಾಂತಾಕ್ಲಾಸ್) ಒಂದು ಸೆಟ್‌ಗೆ ಚಿಕ್ಕದ್ದಕ್ಕೆ ಕಡಿಮೆ ಬೆಲೆ ಇದೆ. ದೊಡ್ಡ ಸೆಟ್‌ಗೆ 500 ರೂಪಾಯಿ ಬೆಲೆ ನಿಗದಿಪಡಿಸಲಾಗಿದೆ. ಅದೇ ರೀತಿ ಗ್ರಿಟಿಂಗ್ಸ್ ಮಾರಾಟ ಕಡಿಮೆ ಇದ್ದರೂ ಬೆಲೆ ಕಡಿಮೆ ಆಗಿಲ್ಲ. 15ರೂಪಾಯಿಯಿಂದ 50,100 ರೂಪಾಯಿ ಇದೆ.  ಕ್ರಿಸ್‌ಮಸ್ ಟ್ರೀ- (6 ಅಡಿ ಎತ್ತರದ್ದು) 650 ರೂಪಾಯಿ, ಸ್ಟಾರ್ಸ್‌ ಗೆ 10ರೂಪಾಯಿಯಿಂದ 200 ರೂಪಾಯಿ, ಬೆಲ್- 5ರಿಂದ 30ರೂಪಾಯಿ, ಪಾರ್ಟಿ ಪಾಪರ್, ಸೊನೊ ಸ್ಪ್ರೆ ಬೆಲೆ 25ರಿಂದ 50ರೂಪಾಯಿ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ರೈಲ್ವೆ ಸ್ಟೇಶನ್ ರಸ್ತೆ, ಮಾರುಕಟ್ಟೆ ಪ್ರದೇಶದಲ್ಲಿ ಕ್ರಿಸ್‌ಮಸ್ ಸಾಮಗ್ರಿ, ಅಲಂಕಾರಿಕ ವಸ್ತು ಮಾರಾಟ ನಡೆದಿದೆ. ಪ್ರತಿ ವರ್ಷದಂತೆಯೇ ಈ ವರ್ಷವೂ ವ್ಯಾಪಾರ ಆಗುತ್ತಿದೆ. ಆದರೆ ಬೆಲೆ ಜಾಸ್ತಿ ಇದೆ.ಬೆಲೆ ಹೆಚ್ಚಿದ್ದರೂ ಖರೀದಿ ಅನಿವಾರ್ಯ

ಚೆನ್ನೈ, ಬೆಂಗಳೂರು, ಹೈದರಾಬಾದ್‌ನಿಂದ ಕ್ರಿಸ್‌ಮಸ್ ಹಬ್ಬದ ವಿಶೇಷ ಅಲಂಕಾರಿ ವಸ್ತು ಖರೀದಿಸಿ ತರಲಾಗುತ್ತದೆ. ಹೆಚ್ಚಿನ ಬೆಲೆ ಇದ್ದರೂ ಮಾರಾಟ ಅನಿವಾರ್ಯ. ಗ್ರಾಹಕರು ಖರೀದಿಸುತ್ತಿದ್ದಾರೆ ಎಂದು ರೈಲ್ವೆ ಸ್ಟೇಶನ್ ರಸ್ತೆಯಲ್ಲಿ ಹಲವು ವರ್ಷಗಳಿಂದ ಕ್ರಿಸ್‌ಮಸ್ ಹಬ್ಬದ ಸಾಮಗ್ರಿ ಮಾರಾಟ ಮಾಡುತ್ತಿರುವ ಸುಜಿತ್‌ಕುಮಾರ, ಹರ್ಷ ಲೇಡಿಸ್ ಕಾರ್ನರ್‌ನ ಅಮರೇಶ, ಲಕ್ಷ್ಮೀ ಜನರಲ್ ಸ್ಟೋರ್ಸ್‌ನ  ವಿಷ್ಣುರಾಮ ಮತ್ತು ರತ್ನಾಕರ್ `ಪ್ರಜಾವಾಣಿ'ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry