ಭಾನುವಾರ, ಜೂನ್ 7, 2020
23 °C

ಗ್ರೀನ್‌ವುಡ್ ರೋಬೊಕಿಡ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗ್ರೀನ್‌ವುಡ್ ರೋಬೊಕಿಡ್

ಕೆನಡಿಯನ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಈಚೆಗೆ ನಡೆದ ಇಂಡಿಯನ್ ರೋಬೊ ಒಲಿಂಪಿಯಾಡ್ ಸ್ಪರ್ಧೆಯಲ್ಲಿ ಗ್ರೀನ್‌ವುಡ್ ಶಾಲೆಯ ರೋಬೊಕಿಡ್ಸ್ ತಂಡ ಜಯ ಗಳಿಸಿದೆ.

ಮನಪ್ರೀತ್ ರಿಯಲ್ ಅವರ ಮಾರ್ಗದರ್ಶನದಲ್ಲಿ ತಯಾರಾದ ಈ ತಂಡದ ಸಂದೀಪ್ ರೀಹಲ್ (ಗ್ರೇಡ್ 2) ಮತ್ತು ಧ್ರುವ್ ವೆಂಕಟರಾಮನ್ (ಗ್ರೇಡ್ 3) ನ. 19 ಮತ್ತು 20 ರಂದು ಅಬುದಾಬಿಯಲ್ಲಿ ನಡೆಯುವ ಅಂತರರಾಷ್ಟ್ರೀಯ ರೋಬೊಟಿಕ್ಸ್ ಒಲಿಂಪಿಯಾಡ್‌ನಲ್ಲಿ ಭಾಗವಹಿಸುವ ಅವಕಾಶ ಪಡೆದುಕೊಂಡಿದ್ದಾರೆ.ಇದು ಟೆಕ್ರಾನಿಕ್ಸ್ ಎಜುಕೇಷನ್ ಲಿಮಿಟೆಡ್ ಶಾಲಾ ಮಕ್ಕಳಿಗಾಗಿ ಆಯೋಜಿಸುವ ದೇಶದ ಅತಿದೊಡ್ಡ ಸ್ಪರ್ಧೆ. ದೇಶದ ಎಲ್ಲೆಡೆಯಿಂದ 600 ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಈ ಬಾರಿ ಸ್ಪರ್ಧೆಗೆ `ರೋಬ್ಸೊ-ಇಂಪ್ರೂವಿಂಗ್ ಲೈಫ್~ ಎಂಬ ವಿಷಯ ನೀಡಲಾಗಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.