ಮಂಗಳವಾರ, ಜೂನ್ 15, 2021
21 °C

ಗ್ರೀಸ್: ಪರಿಹಾರ ಪ್ಯಾಕೇಜ್‌ಗೆ ಸಮ್ಮತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬರ್ಲಿನ್ (ಪಿಟಿಐ): ಗ್ರೀಸ್ ಸಾಲದ ಬಿಕ್ಕಟ್ಟು ಇತ್ಯರ್ಥಕ್ಕೆ 35 ಶತಕೋಟಿ ಯೂರೋಗಳಷ್ಟು ನೆರವು ಬಿಡುಗಡೆ ಮಾಡಲು ಯೂರೋಪ್ ಒಕ್ಕೂಟದ ಹಣಕಾಸು ಸಚಿವರು ಒಪ್ಪಿಗೆ ಸೂಚಿಸಿದ್ದಾರೆ. ಇದು ಗ್ರೀಸ್‌ಗೆ ಲಭಿಸುತ್ತಿರುವ ಎರಡನೆಯ ಸುತ್ತಿನ ಪರಿಹಾರ ಪ್ಯಾಕೇಜ್ ಆಗಿದೆ. ಪರಿಹಾರ ಪ್ಯಾಕೇಜ್‌ಗೆ ಸಂಬಂಧಿಸಿದಂತೆ ಗ್ರೀಸ್ ಸರ್ಕಾರ ಖಾಸಗಿ ಸಾಲ ಸಂಸ್ಥೆಗಳ ಜತೆ ಮಹತ್ವದ ಒಪ್ಪಂದ ಮಾಡಿಕೊಂಡಿದೆ.  ಯೂರೋ ವಲಯದ 17 ದೇಶಗಳ ಹಣಕಾಸು ಸಚಿವರು, ಸಾಲಪತ್ರ ವಿನಿಯಮದ ಮೂಲಕ ಸಾಲ ಪಡೆಯಲು ಒಪ್ಪಿಗೆ ಸೂಚಿಸಿದ್ದಾರೆ. ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಮತ್ತು ಯೂರೋಪ್ ಒಕ್ಕೂಟ ವಿಧಿಸಿರುವ ಎಲ್ಲ ನಿಬಂಧನೆಗಳನ್ನು ಪಾಲಿಸುವು ದಾಗಿ ಗ್ರೀಸ್ ಹೇಳಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.