ಗ್ಲೋಬಲ್ ಬಿಸಿನೆಸ್ ಚಾಲೆಂಜ್

7

ಗ್ಲೋಬಲ್ ಬಿಸಿನೆಸ್ ಚಾಲೆಂಜ್

Published:
Updated:

ಚಾರ್ಟೆಡ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಅಕೌಂಟೆಂಟ್ಸ್ (ಸಿಐಎಂಎ) ನಡೆಸಿದ್ದ ಸಿಐಎಂಎ ಗ್ಲೋಬಲ್ ಬಿಸಿನೆಸ್ ಚಾಲೆಂಜ್ (ಜಿಬಿಸಿ) 2012ರ ಸ್ಪರ್ಧೆಯ ಅಂತಿಮ ವಿಜೇತರನ್ನು ಘೋಷಿಸಿದೆ. ಇದರ ಅಂತಿಮ ಸ್ಪರ್ಧೆಯು ಮುಂಬೈನಲ್ಲಿ ಮಾರ್ಚ್ 10ರಂದು ನಡೆಯಲಿದೆ.4ನೇ ಆವೃತ್ತಿಯ ಗ್ಲೋಬಲ್ ಬಿಸಿನೆಸ್ ಚಾಲೆಂಜ್ ಸ್ಪರ್ಧೆಗೆ ಈ ಬಾರಿ ದೇಶದಾದ್ಯಂತ ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ವಿದ್ಯಾರ್ಥಿಗಳಲ್ಲಿ ವ್ಯಾಪಾರ ಕುಶಲತೆ ಪ್ರದರ್ಶಿಸಲು ಅತ್ಯುನ್ನತ ವೇದಿಕೆ ಈ ಸ್ಪರ್ಧೆಯಾಗಿದೆ ಎಂದು ಸಿಐಎಂಎ ಇಂಡಿಯಾ ಮುಖ್ಯ ಪ್ರತಿನಿಧಿ ಆರತಿ ಪೋರ್ವಾಲ್ ಹೇಳುತ್ತಾರೆ.ಪದವಿ ಪೂರ್ವ ವಿದ್ಯಾರ್ಥಿಗಳಿಗೆ ವಿಶಿಷ್ಟವಾದ `ವಿಷಯ ಅಧ್ಯಯನ~ ಸ್ಪರ್ಧೆ ಇದಾಗಿದ್ದು, ದೇಶದ ವಿವಿಧ ಕಾಲೇಜುಗಳ 400 ತಂಡಗಳು ನೋಂದಣಿಯಾಗಿದ್ದವು. ದೇಶದ 100 ವಿಶ್ವವಿದ್ಯಾಲಯಗಳ ಸುಮಾರು 1500 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದೀಗ ಸ್ಪರ್ಧೆಗೆ ಆಯ್ಕೆಯಾದವರ ಅಂತಿಮ ಪಟ್ಟಿ ಬಿಡುಗಡೆಯಾಗಿದೆ ಎಂದು ಅವರು ತಿಳಿಸಿದರು.ಕ್ರೈಸ್ಟ್ ವಿಶ್ವವಿದ್ಯಾಲಯ (ಬೆಂಗಳೂರು), ಕಾರ್ಪೊರೇಟ್ ಹಾಂಕೋಸ್- ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ತಿರುಚಿ), ಕ್ರೈಸಿಸ್ ಬ್ರೇಕರ್ಸ್ - ಚಿನ್ಮಯ ವಿದ್ಯಾಪೀಠ (ಎರ್ನಾಕುಲಮ್ - ಕೊಚ್ಚಿ), ಗ್ರೇ ಹಾಕ್ಸ್ - ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಎನ್‌ಕೋರ್ `ಇವು~ ತಂತ್ರಜ್ಞಾನ (ತಿರುಚಿ), ಶುದ್- ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ (ಸುರತ್ಕಲ್) ಮತ್ತು ಎಸ್ಪ್ರಿಟ್ - ಎಸ್‌ಪಿರಿಟ್ ಕಾಲೇಜು (ಕೊಟ್ಟಾಯಂ) ದಕ್ಷಿಣ ಪ್ರಾದೇಶಿಕದ ಅಂತಿಮ ಸುತ್ತಿಗೆ ಆಯ್ಕೆಯಾದ ತಂಡಗಳು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry