ಗುರುವಾರ , ಜೂನ್ 24, 2021
29 °C

ಗ್ಲ್ಯಾಮರ್ ಬೊಂಬೆ ಪ್ರಿಯಾಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗ್ಲ್ಯಾಮರ್ ಬೊಂಬೆ ಪ್ರಿಯಾಂಕ

ಬಾಲಿವುಡ್ ಬೆಡಗಿಯರೆಲ್ಲಾ ಒಂಡೆದೆ ಸೇರಿದರೆ ಅಲ್ಲೊಂದು ನಂದನವನ ಸೃಷ್ಟಿಯಾಗುತ್ತದೆ. ಈ ನಟಿಯರಲ್ಲಿ ಒಬ್ಬೊಬ್ಬರದ್ದು ಒಂದೊಂದು ಸೊಬಗು. ಇವರ ಚೆಲುವು ಹೂಗೊಂಚಲಿನಲ್ಲಿರುವ ಒಂದೊಂದೇ ಹೂವನ್ನು ನೆನಪಿಸುತ್ತದೆ.

ಬಿ-ಟೌನ್‌ನ ಮೋಹಕ ಚೆಲುವೆ `ಪಿಗ್ಗಿ~ (ಪ್ರಿಯಾಂಕಾ ಚೋಪ್ರಾ)ಗೆ ಈಗ ಮತ್ತೊಂದು ಪ್ರಶಸ್ತಿಯ ಗರಿ. ಬಿ-ಟೌನ್‌ನ ಹೂಗೊಂಚಲಿನಲ್ಲಿದ್ದ ಕರೀನಾ ಕಪೂರ್, ದೀಪಿಕಾ ಪಡುಕೋಣೆ, ವಿದ್ಯಾ ಬಾಲನ್, ಐಶ್ವರ್ಯಾ ರೈ ಬಚ್ಚನ್, ಕತ್ರಿನಾ ಕೈಫ್, ಸೋನಂ ಕಪೂರ್, ಸುನಿಧಿ ಚವ್ಹಾಣ್, ಬಿಪಾಶಾ ಬಸು, ಏಕ್ತಾ ಕಪೂರ್, ಸೋನಾಕ್ಷಿ ಸಿನ್ಹಾ, ಸಾನಿಯಾ ಮಿರ್ಜಾ, ಫ್ರೀಡಾ ಪಿಂಟೋ ಹಾಗೂ ಶ್ರುತಿ ಹಾಸನ್ ಎಂಬ ಒಂದೊಂದೇ ಹೂವುಗಳನ್ನು ಹಿಂದಿಕ್ಕಿ `ಇಂಡಿಯಾ ಗ್ಲ್ಯಾಮ್ ದಿವ~ ಪ್ರಶಸ್ತಿಯನ್ನು ಪಿಗ್ಗಿ ಮುಡಿಗೇರಿಸಿಕೊಂಡಿದ್ದಾಳೆ. ಈ ಕಿರೀಟವನ್ನು ಅವಳ ತಲೆಗೆ ಇಟ್ಟಿದ್ದು ಪಿಗ್ಗಿಯ ಅಪ್ಪಟ ಅಭಿಮಾನಿ ಮುಂಬೈನ ಸಿದ್ದಿ ಸಿಂಗ್.

ಇಂಡಿಯನ್ ಎಂಟರ್‌ಟೇನ್‌ಮೆಂಟ್ ಇಂಡಸ್ಟ್ರಿ ಈ ಪ್ರಶಸ್ತಿಗಾಗಿ 14 ಮಂದಿ ಸುಂದರ ಹಾಗೂ ಪ್ರತಿಭಾನ್ವಿತ ಮಹಿಳೆಯರನ್ನು ಆಯ್ಕೆಮಾಡಿತ್ತು. ಇವರೆಲ್ಲರೂ ಜನಾಕರ್ಷಕ ವ್ಯಕ್ತಿಗಳು. ತಮ್ಮ ನೆಚ್ಚಿನ ಗ್ಲ್ಯಾಮರ್ ನಟಿಯರನ್ನು ಆಯ್ಕೆ ಮಾಡುವ ಅವಕಾಶವನ್ನು ಅವರ ಅಭಿಮಾನಿಗಳಿಗೆ ನೀಡಲಾಗಿತ್ತು. ಸ್ಪರ್ಧೆಯಲ್ಲಿದ್ದ ನಟಿಯರ ಅಭಿಮಾನಿಗಳೆಲ್ಲರೂ ತಮ್ಮ ನೆಚ್ಚಿನ ನಟಿ `ದಿವ~ ಕಿರೀಟ ಧರಿಸಬೇಕು ಎಂದು ಬಯಸಿ ವೋಟ್ ಮಾಡಿದ್ದರು. ಕೊನೆಗೂ ಈ ಕೀರಿಟವನ್ನು ಧರಿಸುವ ಅದೃಷ್ಟ ದಕ್ಕಿದ್ದು ಪ್ರಿಯಾಂಕಾ ಚೋಪ್ರಾಗೆ.

ಪಿಗ್ಗಿ `ಗ್ಲ್ಯಾಮ್ ದಿವ~ ಕೀರಿಟ ತೊಟ್ಟಾಗ ಭಾವೋದ್ವೇಗಕ್ಕೆ ಒಳಗಾಗಿದ್ದರು. `ನನ್ನ ಅಭಿಮಾನಿಗಳು ಹಾಗೂ ನನ್ನನ್ನು ಇಷ್ಟಪಡುವವರು ನನಗೆ ಹೆಚ್ಚು ವೋಟ್ ಮಾಡುವ ಮೂಲಕ ಆಯ್ಕೆ ಮಾಡಿದ್ದಾರೆ. ಇಷ್ಟೊಂದು ಅಭಿಮಾನಿಗಳನ್ನು ಹೊಂದಿರುವುದನ್ನು ನೆನೆದರೆ ರೋಮಾಂಚನವಾಗುತ್ತದೆ. ಈ ಸಂದರ್ಭದಲ್ಲಿ ನನಗೆ ಮತ್ತೊಮ್ಮೆ ವಿಶ್ವ ಸುಂದರಿ ಪಟ್ಟವನ್ನು ಅಲಂಕರಿಸಿದಷ್ಟು ಸಂತೋಷವಾಗಿದೆ. ಆ ಕ್ಷಣದಲ್ಲಿ ಅನುಭವಿಸಿದ ಪುಳಕ ಹಾಗೂ ನವಿರು ಕಂಪನವನ್ನು ನಾನು ಈ ಕ್ಷಣದಲ್ಲೂ ಅನುಭವಿಸಿಸುತ್ತಿದ್ದೇನೆ~ ಎಂದು ತಮ್ಮ ಖುಷಿಯನ್ನು ಹೊರಹಾಕಿದರು ಪ್ರಿಯಾಂಕಾ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.