ಘಟಿಕೋತ್ಸವ ಸಂಭ್ರಮ

ಬುಧವಾರ, ಜೂಲೈ 17, 2019
26 °C

ಘಟಿಕೋತ್ಸವ ಸಂಭ್ರಮ

Published:
Updated:

ಐಬಿಎಸ್ ಬ್ಯುಸಿನೆಸ್ ಸ್ಕೂಲ್‌ನ ಮ್ಯೋನೇಜ್‌ಮೆಂಟ್ ಸ್ನಾತಕೋತ್ತರ ಪದವಿ (ಪಿಡಿಪಿಎಂ) ವಿದ್ಯಾರ್ಥಿಗಳ ಮೊದಲ ಘಟಿಕೋತ್ಸವ ಶನಿವಾರ ಕೆಂಗೇರಿಯಲ್ಲಿನ ಶಾಲಾ ಆವರಣದಲ್ಲಿ ನಡೆಯಿತು.ಟಾಟಾ ಗ್ಲೋಬಲ್ ಬಿವರೇಜಸ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಹರೀಶ್ ಭಟ್ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.ಐಬಿಎಸ್ ಬ್ಯುಸಿನೆಸ್ ಸ್ಕೂಲ್ ಬೆಂಗಳೂರಿನ ನಿರ್ದೇಶಕ ಡಾ.ಕೆ. ಬಾಲಕೃಷ್ಣನ್, ಐಐಎಂಬಿಯ ಮಾಹಿತಿ ವ್ಯವಸ್ಥೆ ವಿಭಾಗದ ನಿವೃತ್ತ ಮುಖ್ಯಸ್ಥ ಪ್ರೊ.ಎಸ್. ಜಗದೀಶ್, ಐಸಿಎಫ್‌ಎಐ ಅಧ್ಯಕ್ಷೆ ಶೋಭಾರಾಣಿ ಅತಿಥಿಯಾಗಿ ಭಾಗವಹಿಸಿದ್ದರು. ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ತಮ್ಮ ಸಾಧನೆ ಸಂಭ್ರಮಿಸಲು ಸೂಕ್ತ ವೇದಿಕೆ ಕಲ್ಪಿಸಲಾಗಿತ್ತು. ಪ್ರಿಯಾಂಶು ಶರ್ಮಾ ಚಿನ್ನದ ಪದಕ ಪಡೆದರೆ, ಹರ್ಷ ಸೇತಿಯಾ ಬೆಳ್ಳಿ ಪದಕ ಪಡೆದರು. ಅರುಷಿ ಮಸಲ್ಡಾನ ಆಲ್‌ರೌಂಡರ್ ಪ್ರಶಸ್ತಿ ಪಡೆದರು.ನಿರ್ದೇಶಕರ ವರದಿ ಐಬಿಎಸ್ ಬ್ಯುಸಿನೆಸ್ ಕ್ಯಾಂಪಸ್‌ನ ನಾನಾ ಚಟುವಟಿಕೆಗಳನ್ನು ಒಳಗೊಂಡಿತ್ತು. ಮಂಥನ, ತರ್ಕಶ, ಕೊಲಿಸಂ, ಆರ್ಟ್‌ಬೀಟ್, ಕನ್‌ಫ್ಲ್ಯುಯೆನ್ಸ್, ದಹಿ ಹಂಡಿ ಮೊದಲಾದ ಚಟುವಟಿಕೆಗಳ ಸಮಗ್ರ ಚಿತ್ರಣ ಹೊಂದಿತ್ತು. ನೀವ್, ಐಬಿಎಸ್‌ಬೆಂಗಳೂರಿನ ಉದ್ಯಮ ಘಟಕ. ಫೆಬ್ರುವರಿ 2013ರಲ್ಲಿ ಸರಣಿ ಉಪನ್ಯಾಸವನ್ನು ತಜ್ಞರಿಂದ ಆಯೋಜಿಸಲಾಗಿತ್ತು.ಎನ್.ಜೆ. ಯಶಸ್ವಿ ಸ್ಮಾರಕ ಉಪನ್ಯಾಸವನ್ನು ಮ್ಯೋನೇಜ್‌ಮೆಂಟ್ ಶಿಕ್ಷಣದ ಮೇಲೆ ಡಾ.ಕೆ.ಆರ್.ಎಸ್. ಮೂರ್ತಿ ನಡೆಸಿಕೊಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry