ಘನತೆಗಾಗಿ ಸಂಘಟನೆ

7

ಘನತೆಗಾಗಿ ಸಂಘಟನೆ

Published:
Updated:

ಬೆಂಗಳೂರು: `ರಾಜ್ಯದಲ್ಲಿ ಬಿಜೆಪಿ ವರ್ಚಸ್ಸು ದಿನೇ ದಿನೇ ಅಧೋಗತಿಗೆ ಇಳಿಯುತ್ತಿದೆ. ಪಕ್ಷದ ಘನತೆ ಕಾಪಾಡಲು `ಕರ್ನಾಟಕ ಬಿಜೆಪಿ ಹಿರಿಯರ ವೇದಿಕೆ~ ಮೂಲಕ ರಾಜ್ಯದಾದ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡಲಿದ್ದೇವೆ~ ಎಂದು ವೇದಿಕೆಯ ಅಧ್ಯಕ್ಷ ಬಿ.ಬಿ.ಶಿವಪ್ಪ ತಿಳಿಸಿದರು.ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, `ಈಗಿನ ಸರ್ಕಾರದ ಆಡಳಿತ ಕಾರ್ಯಕರ್ತರಲ್ಲಿ ಬೇಸರ ಮೂಡಿಸಿದೆ. ಇದರಿಂದ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ನೋವಾಗಿದೆ~ ಎಂದು ಬೇಸರ ವ್ಯಕ್ತಪಡಿಸಿದರು.ವೇದಿಕೆ ಮೂಲಕ ರಾಜ್ಯದಾದ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟಿಸಲು ಹಿರಿಯ ಮುಖಂಡರು ತೀರ್ಮಾಸಿದ್ದೇವೆ. ಪಕ್ಷದ ನಾಯಕರು ತತ್ವ ಸಿದ್ಧಾಂತಗಳನ್ನು ಬಲಿಕೊಟ್ಟಿದ್ದಾರೆ. ಹಳಿ ತಪ್ಪಿರುವ ಪಕ್ಷವನ್ನು ಮರಳಿ ಮೂಲ ಸಿದ್ಧಾಂತದೆಡೆಗೆ ಕೊಂಡೊಯ್ಯಲು ಪ್ರಥಮ ಹೆಜ್ಜೆ ಇರಿಸುತ್ತಿದ್ದೇವೆ ಎಂದರು.ಮಾಜಿ ಶಾಸಕ ಉರಿಮಜಲು ರಾಮಭಟ್ಟ, `ಆರ್‌ಎಸ್‌ಎಸ್ ರಾಜಕೀಯದಲ್ಲಿ ಪ್ರವೇಶ ಮಾಡುವುದಿಲ್ಲ. ಪಕ್ಷ ಬಯಸಿದಲ್ಲಿ ಸಲಹೆ ಮಾತ್ರ ನೀಡುತ್ತೇವೆ. ಸಂಘ ಮೂಲದ ಅನೇಕ ಸಚಿವರು ವಿಫಲರಾಗಿರುವುದು ನೋವಿನ ಸಂಗತಿ. ನಾವು ಚುನಾವಣೆಗೆ ಸ್ಪರ್ಧಿಸುವುದಿಲ್ಲ.

 

ಪಕ್ಷದ ಸಂಘಟನೆ ಮಾಡಿ ಜನರಲ್ಲಿ ಹೊಸ ಭರವಸೆ ಮೂಡಿಸಲು ಪ್ರಯತ್ನಿಸುತ್ತೇವೆ. ತಪ್ಪಿತಸ್ಥರಿಗೆ ಕಿವಿ ಹಿಂಡಿ ಬುದ್ಧಿ ಹೇಳುತ್ತೇವೆ~ ಎಂದು ನುಡಿದರು. ವಿಧಾನ ಪರಿಷತ್ ಮಾಜಿ ಸದಸ್ಯ ವಿನಯ್‌ಚಂದ್ರ, ವೇದಿಕೆಯ ಕಾರ್ಯಾಧ್ಯಕ್ಷ ಟಿ.ಗೋವಿಂದಪ್ಪ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry