ಭಾನುವಾರ, ಅಕ್ಟೋಬರ್ 20, 2019
27 °C

ಘರ್ಷಣೆ: ನಾಲ್ವರಿಗೆ ಗಾಯ

Published:
Updated:

ಇಂಫಾಲ (ಪಿಟಿಐ): ಮಣಿಪುರದ ಥೌಬಾಲ್ ಜಿಲ್ಲೆಯಲ್ಲಿ ನಡೆದ ಚುನಾವಣೆ ಘರ್ಷಣೆಯಲ್ಲಿ ನಾಲ್ವರು ಗಾಯಗೊಂಡ ಘಟನೆ ಶುಕ್ರವಾರ ರಾತ್ರಿ ನಡೆದಿದೆ.ಜ.28ರಂದು ನಡೆಯುವ ಚುನಾವಣೆಗಾಗಿ ಕೆಲವರು ತಮ್ಮ  ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಿದ್ದಾಗ, ಎದುರಾಳಿ ಅಭ್ಯರ್ಥಿ ಕಡೆಯವರು ಥೌಬಾಲ್ ಪ್ರದೇಶದಲ್ಲಿ ಶುಕ್ರವಾರ ರಾತ್ರಿ ಹಲ್ಲೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ರಾಜಕೀಯ ದ್ವೇಷಿಗಳು ಬಂದೂ ಕಿನಿಂದಲೂ ಹಲ್ಲೆ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಎದುರಾಳಿ ಅಭ್ಯರ್ಥಿಯ ಬೆಂಬಲಿಗರು ವಾಹನ ಬೆನ್ನಟ್ಟಿ ನಾಲ್ವರ ಮೇಲೆ ಹಲ್ಲೆ ಮಾಡಿದ್ದಾರೆ. ಬಂದೂಕು ತೋರಿಸಿದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

 

Post Comments (+)