ಗುರುವಾರ , ಮೇ 6, 2021
33 °C

ಘರ್ಷಣೆ: ಮೂವರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಗಣೇಶ ಪ್ರತಿಷ್ಠಾಪನೆಗೆ ಮುನ್ನ ಗಣಪತಿ ಮೂರ್ತಿಯನ್ನು ಮೆರವಣಿಗೆ ಮೂಲಕ ತರುವಾಗ ಗುರುವಾರ ಕೆಟಿಜೆ ನಗರದ ಬಳಿ ಎರಡು ಕೋಮುಗಳ ನಡುವೆ ಸಣ್ಣ ಪ್ರಮಾಣದ ಘರ್ಷಣೆ ನಡೆದಿದ್ದು, ಅದಕ್ಕೆ ಸಂಬಂಧಿಸಿದಂತೆ ಶುಕ್ರವಾರ ಮೂವರನ್ನು ಬಂಧಿಸಲಾಗಿದೆ.ಗಣಪತಿ ಮೆರವಣಿಗೆಯಲ್ಲಿ ಧ್ವನಿವರ್ಧಕದ ಸದ್ದಿಗೆ ಒಂದು ಕೋಮಿನ ಯುವಕರು ಆಕ್ಷೇಪಿಸಿದ್ದಾರೆ. ಅದಕ್ಕೆ ಗಣೇಶೋತ್ಸವ ಸಂಘದ ಯುವಕರು ಕಿವಿಗೊಟ್ಟಿಲ್ಲ. ಎರಡು ಕೋಮಿನ ನಡುವೆ ಮಾತಿಗೆ ಮಾತು ಬೆಳೆದಿದೆ. ಈ ಸಂದರ್ಭದಲ್ಲಿ ಕೆಲ ಕಿಡಿಗೇಡಿಗಳು ಗಣಪತಿ ಮೂರ್ತಿಯ ಮೇಲೆ ಕಲ್ಲು ತೂರಿದ್ದಾರೆ. ಇದು ಸಣ್ಣ ಪ್ರಮಾಣದ ಸಂಘರ್ಷಕ್ಕೆ ದಾರಿಯಾಗಿದ್ದು, ಕೆಲವರಿಗೆ ಗಾಯವಾಗಿದೆ.ತಕ್ಷಣ ಮಧ್ಯ ಪ್ರವೇಶಿಸಿದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ, ಗುಂಪು ಚದುರಿಸಿದ್ದಾರೆ. ಬೆಳಿಗ್ಗೆ ಕಾರ್ಯಾಚರಣೆ ನಡೆಸಿ ಘಟನೆಗೆ ಪ್ರಮುಖ ಕಾರಣರಾದ ಮೂವರನ್ನು ಬಂಧಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಕೆಟಿಜೆ ನಗರ 8ನೇ ತಿರುವಿನ ಬಳಿ ತಾತ್ಕಾಲಿಕ ಹೊರ ಠಾಣೆ ತೆರೆದು ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.