ಘರ್ಷಣೆ: ಯುವಕ ಕೊಲೆ

7

ಘರ್ಷಣೆ: ಯುವಕ ಕೊಲೆ

Published:
Updated:

ಶ್ರೀರಂಗಪಟ್ಟಣ: ಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ತಾಲ್ಲೂಕಿನ ಗಣಂಗೂರು ಗ್ರಾಮದ ಬಸವೇಶ್ವರ ದೇವಾಲಯದ ಬಳಿ ~ಪರ~ ಮಾಡುವ ವಿಷಯಕ್ಕೆ ಎರಡು ಗ್ರಾಮಗಳ ಜನರ ಗುಂಪುಗಳ ನಡುವೆ ಘರ್ಷಣೆ ನಡೆದು, ಯುವಕನೋರ್ವ ಕೊಲೆಗೀಡಾಗಿರುವ ಪ್ರಕರಣ ತಾಲ್ಲೂಕಿನ ಗಣಂಗೂರು ಬಳಿ ಸೋಮವಾರ ತಡರಾತ್ರಿ ನಡೆದಿದೆ.ತಾಲ್ಲೂಕಿನ ಗಣಂಗೂರು ಮತ್ತು ಗೌಡಹಳ್ಳಿ ಗ್ರಾಮಗಳ ಜನರ ನಡುವೆ ಗುಂಪು ಘರ್ಷಣೆ ನಡೆದ್ದ್ದಿದು ಗಣಂಗೂರು ಗ್ರಾಮದ ಪುಟ್ಟಲಿಂಗೇಗೌಡ ಎಂಬವರ ಮಗ ಪ್ರಸನ್ನ (28) ಎಂಬಾತನ ಕೊಲೆಯಾಗಿದೆ.ಘಟನೆಯಲ್ಲಿ ಗಣಂಗೂರಿನ ರಾಮಕೃಷ್ಣ, ಗೌಡಹಳ್ಳಿಯ ದೇವೇಗೌಡ, ಬಳ್ಳಾರಿ, ಜಯರಾಂ, ಮಲ್ಲೇಶ್ ಎಂಬವರು ಗಾಯಗೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ 15ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಎರಡೂ ಗ್ರಾಮಗಳಲ್ಲಿ ಬಿಗುವಿನ ವಾತಾವರಣ ಇದ್ದು, ಡಿಎಆರ್ ಮತ್ತು ಕೆಎಸ್‌ಆರ್‌ಪಿ ತುಕಡಿಗಳನ್ನು ನಿಯೋಜಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry