ಘೇಂಡಾಮೃಗ

7

ಘೇಂಡಾಮೃಗ

Published:
Updated:
ಘೇಂಡಾಮೃಗ

ಘೇಂಡಾಮೃಗ ಮೇಲುನೋಟಕ್ಕೆ ನಿಧಾನ ಎನಿಸಿದರೂ ಚುರುಕು ಪ್ರಾಣಿ. ಅದು ವೇಗವಾಗಿ ಓಡಬಲ್ಲದು, ನೆಗೆಯಬಲ್ಲದು, ಈಜಬಲ್ಲದು, ಡೈವ್ ಹೊಡೆಯಬಲ್ಲದು. ಕೋಡುಗಳ ಸಂಖ್ಯೆಯನ್ನು ಆಧರಿಸಿ ಅವುಗಳನ್ನು ಏಷ್ಯಾ ಮತ್ತು ಆಫ್ರಿಕಾ ಘೇಂಡಾಮೃಗಗಳೆಂದು ವರ್ಗೀಕರಿಸಲಾಗಿದೆ. ಎರಡು ಕೋಡುಗಳಿರುವ ಘೇಂಡಾ ಆಫ್ರಿಕದ್ದಾದರೆ, ಒಂದು ಕೋಡಿರುವ ಘೇಂಡಾ ಏಷ್ಯಾದ್ದು.ಆಫ್ರಿಕಾದ ಘೇಂಡಾಗಳಲ್ಲಿ ಎರಡು ಮತ್ತು ಏಷ್ಯಾದ ಘೇಂಡಾಮೃಗಗಳಲ್ಲಿ ಮೂರು ವಿಧಗಳಿವೆ. ಆಫ್ರಿಕಾದ ಘೇಂಡಾಗಳೆಂದು ಆಫ್ರಿಕಾ ಮತ್ತು ಸುಮಾತ್ರಾ ಘೇಂಡಾಗಳನ್ನು ಗುರುತಿಸಲಾಗುತ್ತದೆ. ಆಫ್ರಿಕಾದ ಘೇಂಡಾಗಳ ಗುಂಪಿಗೆ ಮತ್ತೆ ಕಪ್ಪು ಘೇಂಡಾ ಮತ್ತು ಬಿಳಿ ಘೇಂಡಾ ಸೇರುತ್ತದೆ.ಬಿಳಿ ಘೇಂಡಾದ ಬಾಯಿಯ ಆಕಾರ ದೊಡ್ಡದಾಗಿ ಚಪ್ಪಟೆಯಾಗಿರುತ್ತದೆ. ಬಿಳಿ ಘೇಂಡಾ ಸಂಪೂರ್ಣ ಬಿಳಿಯಾಗಿಲ್ಲದೇ ಬೂದುಬಣ್ಣದವಾಗಿರುತ್ತವೆ.ಏಷ್ಯಾದ ಘೇಂಡಾಗಳಲ್ಲಿ ಭಾರತೀಯ ಮತ್ತು ಜವಾನ್ ಘೇಂಡಾಗಳೆಂಬ ವಿಧಗಳಿವೆ. ಏಷ್ಯಾದಲ್ಲಿ ಕಂಡು ಬರುತ್ತಿದ್ದ ಮತ್ತೊಂದು ವಿಧದ ಘೇಂಡಾ 10 ಮಿಲಿಯನ್ ವರ್ಷಗಳ ಹಿಂದೆ ಅವನತಿ ಹೊಂದಿವೆ. ಯುರೋಪ್ ಮತ್ತು ಏಷ್ಯಾದಲ್ಲಿ ಕಂಡು ಬರುತ್ತಿದ್ದ ವೂಲಿ ಘೇಂಡಾಮೃಗಗಳು ಕೂಡ ಕಣ್ಮರೆಯಾಗಿವೆ. ಘೇಂಡಾಗಳ ಚರ್ಮವನ್ನು ದೂರದಿಂದ ನೋಡಿದಾಗ ಒರಟು ಎನಿಸಿದರೂ ಸ್ಪರ್ಶಿಸಿದಾಗ ಅದು ಮೃದುವಾಗಿರುತ್ತದೆ.ಕೆರಾಟಿನ್ ಎಂಬ ಪ್ರೋಟೀನಿನಿಂದ ಮಾಡಲ್ಪಟ್ಟಿರುವ ಅದರ ಕೋಡುಗಳಿಗೆ ಅಗೋಚರ ಶಕ್ತಿ ಇದೆ ಎಂದು ನಂಬಲಾಗುತ್ತದೆ. ಅವುಗಳನ್ನು ಪಡೆಯಲು ಜನ ಸಾಕಷ್ಟು ಹಣ ಖರ್ಚು ಮಾಡುತ್ತಿದ್ದಾರೆ. ಇದಕ್ಕಾಗಿ ಕಾನೂನುಬಾಹಿರವಾಗಿದ್ದರೂ ಅವ್ಯಾಹತವಾಗಿ ಘೇಂಡಾ ಮೃಗಗಳ ಬೇಟೆ ನಡೆಯುತ್ತಿದೆ.ಮತ್ತೊಂದು ವಿಶೇಷ ಏನೆಂದರೆ ಸಸ್ತನಿಗಳಲ್ಲಿ ಅತಿಹೆಚ್ಚು ವರ್ಣತಂತು ಹೊಂದಿರುವ ಪ್ರಾಣಿ ಘೇಂಡಾಮೃಗಗಳು. ಕಪ್ಪು ಘೇಂಡಾಗೆ 84 ವರ್ಣತಂತುಗಳಿದ್ದರೆ, ಉಳಿದವಕ್ಕೆ 82 ಇರುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry