ಮಂಗಳವಾರ, ಏಪ್ರಿಲ್ 13, 2021
32 °C

ಚಂಗಚಹಳ್ಳಿ ಗ್ರಾಮದಲ್ಲಿ ಸಮಸ್ಯೆಗಳ ಸರಮಾಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಳಂದೂರು: ಇಲ್ಲಿನ ಪಾಲವೊಂದರಲ್ಲಿ ಕಲ್ಲು ಕುಸಿದು ಎಂಟು ತಿಂಗಳು ಕಳೆದಿವೆ. ಇರುವ ಚರಂಡಿಗಳು ಗಬ್ಬೆದ್ದು ನಾರುತ್ತಿವೆ. ದಲಿತರ ಬಡಾವಣೆಯ ರಸ್ತೆಯ ಮಧ್ಯವೇ ಚರಂಡಿ ನೀರು ಹರಿಯುತ್ತದೆ. ಇದರ ನಡುವೆ ಮೂಗು ಮುಚ್ಚಿಕೊಂಡು ಜೀವನ ಸಾಗಿಸ ಬೇಕಾದ ಅನಿರ್ವಾತೆ ಇಲ್ಲಿಯ ನಿವಾಸಿಗಳದ್ದು.ಹೌದು, ಇದು ತಾಲ್ಲೂಕಿನ ಪುಟ್ಟ ಗ್ರಾಮಗಳಲ್ಲಿ ಒಂದಾದ ಚಂಗಚಹಳ್ಳಿ ಗ್ರಾಮದ ದುಃಸ್ಥಿತಿ. ಸುಮಾರು 200 ಮನೆಗಳನ್ನು ಹೊಂದಿರುವ ಗ್ರಾಮದಲ್ಲಿ 800 ಮಂದಿ ಮತದಾರರಿದ್ದಾರೆ. ಎಲ್ಲ ಜಾತಿ ಜನರೂ ಇಲ್ಲಿ ವಾಸ ಮಾಡುತ್ತಿದ್ದಾರೆ. ದಲಿತರ ಸಂಖ್ಯೆ ಹೆಚ್ಚಾಗಿರುವ ಗ್ರಾಮದಲ್ಲಿ ಅವರ ಬಡಾವಣೆಗೆ ಮೂಲಭೂತ ಸೌಕರ್ಯ ಕಡಿಮೆ.

ಇಲ್ಲಿರುವ ಕೆಲವು ಬೀದಿಗಳಲ್ಲಿ ರಸ್ತೆಯ ನಡುವೆ ಚರಂಡಿ ನೀರು ಹರಿಯುತ್ತದೆ. ಹಾಗಾಗಿ ಸೊಳ್ಳೆಗಳ ಆವಾಸ ಸ್ಥಾನವಾಗಿ ಮಾರ್ಪಟ್ಟಿದೆ. ಇದರಿಂದ ರೋಗ  ಹರಡುವ ಭೀತಿ ಇಲ್ಲಿನ ಜನರು ಕಾಡುತ್ತಿದೆ.ಗ್ರಾಮದ ಮುಖ್ಯ ರಸ್ತೆಯಿಂದ ದಲಿತರ ಬೀದಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಚರಂಡಿಗೆ ಅಡ್ಡಲಾಗಿ ನಿರ್ಮಿಸಿರುವ ಪಾಲವೊಂದರ ಕಲ್ಲು ಕುಸಿದು 8 ತಿಂಗಳಾಗಿವೆ. ಇದನ್ನು ದುರಸ್ತಿಗೊಳಿಸುವ ಕಾರ್ಯಕ್ಕೆ ಯಾರೂ ಮುಂದಾಗಿಲ್ಲ. ಇಲ್ಲಿ ಅನೇಕ ಜನ ಬಿದ್ದು ಗಾಯಗೊಂಡ ಉದಾಹರಣೆಗಳಿವೆ ಎನ್ನುತ್ತಾರೆ ಗ್ರಾಮದ ಕೆಂಪರಾಜು. ಇಲ್ಲಿನ ರಸ್ತೆಗಳಲ್ಲಿ ಮಣ್ಣು ಸುರಿಯ ಲಾಗಿದೆ. ಆದರೆ ಕೆಲವು ಬೀದಿಗಳಲ್ಲಿ ಇದನ್ನು ಮಾಡಿಲ್ಲವಾದ್ದರಿಂದ ಮಳೆಗಾಲದಲ್ಲಿ ತಗ್ಗು ಪ್ರದೇಶಗದ ಮನೆಗಳಿಗೆ ನೀರು ನುಗ್ಗುತ್ತದೆ ಎಂಬುದು ಇಲ್ಲಿನ ನಿವಾಸಿ ಮಹದೇವಸ್ವಾಮಿ ಅವರ ದೂರು.470 ದಲಿತ ಮತದಾರರನ್ನು ಹೊಂದಿ ರುವ ಗ್ರಾಮದಲ್ಲಿ ಬೀದಿಗಳು ಮನುಷ್ಯ ವಾಸಕ್ಕೆ ಯೋಗ್ಯವಲ್ಲ ಎಂಬುದು ಸಿದ್ದಯ್ಯ ಅವರ ದೂರು. ಕಲುಷಿತ ನೀರು ಮನೆ ಅಂಗಳದಲ್ಲಿ ನಿಲ್ಲುತ್ತದೆ. ಚರಂಡಿಯ ಗಬ್ಬು ನಾರುತ್ತಿದ್ದರೂ ಹೂಳು ತೆಗೆಯುವ ಕೆಲಸವಾಗಿಲ್ಲ.  ಬೇಸಿಗೆ ಕಾಲ ಸಮೀಪಿಸುತ್ತಿರು ವುದರಿಂದ ಸಾಂಕ್ರಾಮಿಕ ರೋಗ ರಡುವ ಭೀತಿ ಜನರು ಎದುರಿಸುತ್ತಿದ್ದಾರೆ. ಅಲ್ಲದೇ ಈ ಜನಾಂಗಕ್ಕೆ ಸ್ಮಶಾನಕ್ಕೂ ಜಾಗವಿಲ್ಲ.ಅಂಬಳೆ ಗ್ರಾ. ಪಂ. ವ್ಯಾಪ್ತಿಗೆ ಬರುವ ಗ್ರಾಮಕ್ಕೆ ಮೂಲಭೂತ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಪಂಚಾಯಿತಿ ಯಾವುದೆ ಅನುದಾನ ಲಭ್ಯವಿಲ್ಲ. ಮುಂದಿನ ದಿನಗಳಲ್ಲಿ ಬರುವ ಅನುದಾನ ಬಳಸಿಕೊಂಡು ಗ್ರಾಮದ ಅಭಿವೃದ್ಧಿ ಕೈಗೊಳ್ಳುವುದಾಗಿ ಗ್ರಾ.ಪಂ. ಸದಸ್ಯೆ ಜಯಮ್ಮ ತಿಳಿಸಿದರು. ಯಳಂದೂರು ತಾ.ಪಂ.ಗೆ ಅಧ್ಯಕ್ಷ ರಾಗಿರುವ ಗೌರಮ್ಮ ಇದೇ ಗ್ರಾಮಕ್ಕೆ ಸೇರಿದವರು. ತಮ್ಮ ಅಧಿಕಾರವಧಿಯಲ್ಲಿ ಗ್ರಾಮದ, ತಾಲ್ಲೂಕಿನ ಸಮಸ್ಯೆಗಳಿಗೆ ಸ್ಪಂದಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.