ಗುರುವಾರ , ಮೇ 6, 2021
23 °C

ಚಂಡಮಾರುತ: 7 ಸಾವು, 40 ಜನರಿಗೆ ಗಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ಅಗರ್ತಲ (ಪಿಟಿಐ): ರಾಜ್ಯದ ವಿವಿಧೆಡೆ ಬೀಸಿದ ಚಂಡಮಾರುತ ಹಾಗೂ ಸಿಡಿಲ ಅಬ್ಬರಕ್ಕೆ ಏಳು ಜನ ಮೃತಪಟ್ಟಿದ್ದು, 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಪಶ್ಚಿಮ ತ್ರಿಪುರಾ ಜಿಲ್ಲೆಯ ಮೋಹನ್‌ಪುರ ಹಾಗೂ ವಿಶಾಲ್‌ಗಡದಲ್ಲಿ ಸಿಡಿಲು ಬಡಿದು ಇಬ್ಬರು ಸಾವನ್ನಪ್ಪಿದ್ದಾರೆ. ಗೋಮತಿ ಜಿಲ್ಲೆಯ ಅಮರ್‌ಪುರದಲ್ಲಿ ಬಾಲಕಿ ಮತ್ತು ಬಾಲಕ ಮೃತಪಟ್ಟಿದ್ದಾರೆ.ಕಳೆದ ಮೂರು ದಿನಗಳ ಹಿಂದೆ ದಕ್ಷಿಣ ತ್ರಿಪುರಾ ಜಿಲ್ಲೆಯಲ್ಲೂ ಸಿಡಿಲಿನ ಅಬ್ಬರ ಕಾಣಿಸಿಕೊಂಡಿದೆ. ಬಿರುಗಾಳಿಯಿಂದಾಗಿ ನೂರಾರು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ವಿದ್ಯುತ್ ಪ್ರವಹಿಸುತ್ತಿದ್ದ ಕಂಬದಿಂದ ತಂತಿಯೊಂದು ನೆಲಕ್ಕೆ ಬಿದ್ದಿದ್ದು ಅದನ್ನು ಸ್ಪರ್ಶಿಸಿದ  ಉತ್ತರ ತ್ರಿಪುರಾ ಜಿಲ್ಲೆಯ ಧರ್ಮನಗರದ ಆರು ವರ್ಷದ ಬಾಲಕ ಮೃತಪಟ್ಟಿದ್ದಾನೆ. 1000ಕ್ಕೂ ಹೆಚ್ಚು ಮನೆಗಳನ್ನು ರಕ್ಷಣಾ ಪಡೆಯ ಕ್ಯಾಂಪ್‌ಗೆ ಸ್ಥಳಾಂತರಿಸಲಾಗಿದೆ.ರಕ್ಷಣಾ ಪಡೆಗಳು, ಪ್ರಕೃತಿ ವಿಕೋಪ ನಿರ್ವಹಣಾ ತಂಡಗಳಲ್ಲಿರುವ ಕ್ಷಿಪ್ರ ಕಾರ್ಯಪಡೆಯವರು ನಿರಂತರವಾಗಿ ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ.  ಮುಂದಿನ 48 ಗಂಟೆಗಳ ರಾಜ್ಯದಾದ್ಯಂತ ಚಂಡಮಾರುತ ಬೀಸುವ ಸಾಧ್ಯತೆ ಇದೆ ಹವಾಮಾನ ಇಲಾಖೆ ತಿಳಿಸಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.