ಶನಿವಾರ, ಫೆಬ್ರವರಿ 27, 2021
23 °C
ಫ್ರಾನ್ಸ್ ಅಧ್ಯಕ್ಷರ ಮೂರು ದಿನಗಳ ಭಾರತ ಪ್ರವಾಸ ಆರಂಭ

ಚಂಡೀಗಡ: ಒಲಾಂಡ್‌ ಜತೆ ಮೋದಿ ಮಾತುಕತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಂಡೀಗಡ: ಒಲಾಂಡ್‌ ಜತೆ ಮೋದಿ ಮಾತುಕತೆ

ಚಂಡೀಗಡ (ಪಿಟಿಐ): ಮೂರು ದಿನಗಳ ಭಾರತ ಪ್ರವಾಸಕ್ಕೆ ಬಂದಿರುವ ಫ್ರಾನ್ಸ್‌ ಅಧ್ಯಕ್ಷ ಫ್ರಾಂಸ್ವಾ ಒಲಾಂಡ್‌ ಅವರನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಇಲ್ಲಿನ ರಾಕ್‌ ಗಾರ್ಡನ್‌ನಲ್ಲಿ  ಭೇಟಿಯಾಗಿ ಮಾತುಕತೆ ನಡೆಸಿದರು.

ಉನ್ನತ ವಾಣಿಜ್ಯ ನಿಯೋಗದ ಜತೆ  ಒಲಾಂಡ್‌ ಅವರು ಭಾನುವಾರ ಮಧ್ಯಾಹ್ನ ಒಂದು ಗಂಟೆಗೆ ಚಂಡೀಗಡಕ್ಕೆ ಬಂದಿಳಿದರು.

ಒಲಾಂಡ್‌ ಅವರು ಪ್ರಧಾನಿ ಜತೆಗೆ ರಾಕ್‌ ಗಾರ್ಡನ್‌, ಕ್ಯಾಪಿಟಲ್‌ ಕಾಂಪ್ಲೆಕ್ಸ್‌, ಸರ್ಕಾರಿ ಮ್ಯೂಸಿಯಂ ಮತ್ತು ಆರ್ಟ್‌ ಗ್ಯಾಲರಿಗಳಿಗೆ   ಭೇಟಿ ನೀಡಿದರು. ನಂತರ ಇಲ್ಲಿನ ಹೋಟೆಲ್‌ವೊಂದರಲ್ಲಿ ಆಯೋಜಿಸಿರುವ ಭಾರತ–ಫ್ರಾನ್ಸ್‌ ವಾಣಿಜ್ಯ ಶೃಂಗಸಭೆಯಲ್ಲಿ ಭಾಗವಹಿಸಲು ತೆರಳಿದರು.ಸಂಜೆಯ ವೇಳಗೆ ಉಭಯ ನಾಯಕರು ದೆಹಲಿಗೆ ಮರಳಲಿದ್ದು, ಒಲಾಂಡ್‌ ಅವರು ಗಣರಾಜ್ಯೋತ್ಸವದಲ್ಲಿ  ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.ಚಂಡೀಗಡ, ನಾಗಪುರ ಮತ್ತು ಪುದುಚೇರಿಗಳನ್ನು ಸುಸಜ್ಜಿತ ನಗರಗಳಾಗಿ ಅಭಿವೃದ್ಧಿಪಡಿಸಲು ನೆರವು ನೀಡುವುದಾಗಿ ಫ್ರಾನ್ಸ್‌ ಕಳೆದ ವರ್ಷ ತಿಳಿಸಿತ್ತು. ಅದರಂತೆ ಚಂಡೀಗಡವನ್ನು ಸ್ಮಾರ್ಟ್‌ಸಿಟಿಯಾಗಿ ಅಭಿವೃದ್ಧಿಪಡಿಸುವ ಒಪ್ಪಂದಕ್ಕೆ ಫ್ರಾನ್ಸ್‌ ಸಹಿ ಹಾಕುವ ಸಾಧ್ಯತೆ ಇದೆ ಎನ್ನಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.