ಚಂಡೀಗಡ ಯುವಕರಿಗೆ ಎಕೆ-47ಖಯಾಲಿ!

7

ಚಂಡೀಗಡ ಯುವಕರಿಗೆ ಎಕೆ-47ಖಯಾಲಿ!

Published:
Updated:

ಚಂಡೀಗಡ: ಚಂಡೀಗಡ ಯುವಕರಲ್ಲಿ ಈಗ ಹೊಸ ಖಯಾಲಿ ಶುರುವಾಗಿದೆ. ಅದೆಂದರೆ ಎಕೆ-47 ಮತ್ತು ಎಕೆ-56. ಆದರೆ ಇವು ಭಯೋತ್ಪಾದನೆಗೆ ಬಳಸುವ ಬಂದೂಕುಗಳಲ್ಲ. ಬದಲು ಬೈಕ್ ಮತ್ತು ಕಾರಿನ ಅತಿ ಹೆಚ್ಚು ದರದ ನೋಂದಣಿಯ ಸಂಖ್ಯೆಗಳು!ಚಂಡೀಗಡದ ನೋಂದಣಿ ಮತ್ತು ಪರವಾನಗಿ ಪ್ರಾಧಿಕಾರ ಶುಕ್ರವಾರ ಈ ಸಂಖ್ಯೆಗಳನ್ನು ಹರಾಜು ಹಾಕಲು ಸಜ್ಜಾಗಿದೆ. ನಗರ, ಪಂಜಾಬ್‌ನ  ಸುಮಾರು 20ಕ್ಕೂ ಹೆಚ್ಚು ಯುವಕರು ಇದರಲ್ಲಿ ಪಾಲ್ಗೊಂಡು ಈ ಎರಡು ವಿಶೇಷ ಸಂಖ್ಯೆಗಳ `ಹೆಮ್ಮೆಯ~ ಮಾಲೀಕರಾಗಲು ಯತ್ನಿಸಲಿದ್ದಾರೆ.ಕಳೆದ ವರ್ಷ ನೋಂದಣಿ ಸಂಖ್ಯೆ 0001 ಚಂಡೀಗಡ ಆಡಳಿತಕ್ಕೆ ರೂ 10 ಲಕ್ಷದ ಭಾರಿ ಮೊತ್ತವನ್ನು ಗಳಿಸಿಕೊಟ್ಟಿತ್ತು. ಈ ಸಲ ಎಕೆ-47 ಮತ್ತು ಎಕೆ-56 ಸಂಖ್ಯೆಗಳು ಇತರ ಎಲ್ಲಾ ವಿಶೇಷ ಸಂಖ್ಯೆಗಳನ್ನೂ ಮೀರಿ ಹೆಚ್ಚಿನ ದರಕ್ಕೆ ಬಿಕರಿಯಾಗಲಿವೆ ಎಂಬ ವಿಶ್ವಾಸ ಅಧಿಕಾರಿಗಳದ್ದು.ಈ ಎರಡು ಸಂಖ್ಯೆಗಳಿಗೆ ಹರಾಜು ಪ್ರಕ್ರಿಯೆ ರೂ 10 ಸಾವಿರದಿಂದ ಆರಂಭವಾಗಲಿದ್ದು, ಸುಮಾರು 25 ಮಂದಿ ಸವಾಲಿಗೆ ಸಿದ್ಧರಾಗಿದ್ದಾರೆ.`ನಂಬರ್ ಪ್ಲೇಟ್ ಮೇಲೆ ವಿಶೇಷ ಅಥವಾ ವಿಐಪಿ ಸಂಖ್ಯೆ ಹೊಂದುವುದು ನಗರದ ಯುವಕರಿಗೆ ಪ್ರತಿಷ್ಠೆಯ ವಿಷಯ. ಹಾಗಾಗಿ ಇಂತಹ ಸಂಖ್ಯೆಗಳನ್ನು ಪಡೆಯಲು ಅವರು ಭಾರಿ ಮೊತ್ತ ತೆರಲೂ ಸಿದ್ಧರಾಗಿರುತ್ತಾರೆ~ ಎಂದು ಪ್ರಾಧಿಕಾರದ ಅಧಿಕಾರಿಯೊಬ್ಬರು ಹೇಳುತ್ತಾರೆ.ಇದೇ ಕಾರಣಕ್ಕಾಗಿ ಆಡಳಿತ ವರ್ಗ ಕೆಲ ವರ್ಷಗಳ ಹಿಂದೆ ಇಂತಹ ಸಂಖ್ಯೆಗಳನ್ನು ವಿತರಿಸುವುದನ್ನೇ ಹಣ ಮಾಡುವ ಕಾರ್ಯಕ್ರಮವಾಗಿ ಮಾಡಿಕೊಂಡಿದೆ ಎಂದೂ ಅವರು ಹೇಳುತ್ತಾರೆ. ಈ ಹರಾಜಿನಲ್ಲಿ ಎಕೆ-47 ಸಂಖ್ಯೆಗೆ ಅತಿ ಹೆಚ್ಚು ಮಂದಿ ಅರ್ಜಿ ಸಲ್ಲಿಸಿದ್ದಾರೆ. ಒಟ್ಟಾರೆ ಸುಮಾರು 500 ನೋಂದಣಿ ಸಂಖ್ಯೆಗಳನ್ನು ಹರಾಜು ಮೂಲಕ ವಿತರಿಸಲಾಗುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry