ಶನಿವಾರ, ಮೇ 21, 2022
20 °C

ಚಂದಕವಾಡಿ: ಕುಸಿದು ಬಿದ್ದ ಟ್ಯಾಂಕ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ತಾಲ್ಲೂಕಿನ ಚಂದಕವಾಡಿ ಗ್ರಾಮದಲ್ಲಿರುವ ಕಾಗಲವಾಡಿ ಶಾಖೆಯ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕುಡಿಯುವ ನೀರು ಪೂರೈಕೆಗಾಗಿ ಸಿಂಥೆಟಿಕ್ ಟ್ಯಾಂಕ್ ಇಡಲು ನಿರ್ಮಿಸಿದ್ದ ಸಿಮೆಂಟ್ ಕಂಬ ಮಂಗಳವಾರ ಕುಸಿದು ಬಿದ್ದಿದೆ.ಸಮೀಪದಲ್ಲಿದ್ದ ತಂತಿಬೇಲಿಯ ಕಾಂಪೌಂಡ್ ಕೂಡ ನೆಲಕಚ್ಚಿದೆ. ಈ ಶಾಖೆ 33:11 ಕೆವಿ ವಿದ್ಯುತ್ ಸಾಮರ್ಥ್ಯ ಹೊಂದಿದೆ. 2010ರಲ್ಲಿ ಈ ಶಾಖೆಯನ್ನು 66 ಕೆವಿ ಸಾಮರ್ಥ್ಯಕ್ಕೆ ಮೇಲ್ದರ್ಜೆಗೆ ಏರಿಸಲಾಗಿತ್ತು. ಅಂದು ಆರಂಭವಾದ ಕಾಮಗಾರಿ ಇಂದಿಗೂ ಪೂರ್ಣಗೊಂಡಿಲ್ಲ.

33:11 ಕೆವಿ ಹತ್ತಿರದಲ್ಲಿ ಸಿಮೆಂಟ್ ಕಂಬ ನಿರ್ಮಿಸಿ ಅದರ ಮೇಲೆ ಸಿಂಥೆಟಿಕ್ ಟ್ಯಾಂಕ್ ಇಡಲಾಗಿತ್ತು. ಕಳಪೆ ಕಾಮಗಾರಿ ಪರಿಣಾಮ ಸಿಮೆಂಟ್ ಕಂಬ ಕುಸಿದು ಬಿದ್ದಿದೆ ಎನ್ನುವುದು ನಾಗರಿಕರ ದೂರು.ಈ ಸಿಮೆಂಟ್ ಕಂಬಕ್ಕೆ ಹೊಂದಿಕೊಂಡಂತೆ ವಿದ್ಯುತ್ ಪರಿವರ್ತಕ ಅಳವಡಿಸಲಾಗಿದೆ. ಶಾಖೆಯ ಸಿಬ್ಬಂದಿ ಯಾರಾದರೂ ಈ ವೇಳೆ ದುರಸ್ತಿಗೆ ಬಂದಿದ್ದರೆ ಪ್ರಾಣಹಾನಿ ಸಂಭವಿಸುವ ಸಾಧ್ಯತೆಯಿತ್ತು. ಆದರೆ, ಯಾವುದೇ ಅನಾಹುತ ಸಂಭವಿಸಿಲ್ಲ.4 ವರ್ಷ ಕಳೆದರೂ ವಿದ್ಯುತ್ ಶಾಖೆಯಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡಿಲ್ಲ. ಅಧಿಕಾರಿಗಳು ಮತ್ತು ಗುತ್ತಿಗೆದಾರರ ನಿರ್ಲಕ್ಷ್ಯದಿಂದಲೇ ಸಿಂಥೆಟಿಕ್ ಟ್ಯಾಂಕ್ ಇಡಲು ನಿರ್ಮಿಸಿದ್ದ ಸಿಮೆಂಟ್ ಕಂಬ ಕುಸಿದು ಬಿದ್ದಿದೆ. ಕೂಡಲೇ, ಸಂಬಂಧಪಟ್ಟ ಅಧಿಕಾರಿಗಳು ಗುಣಮಟ್ಟದ ಕಾಮಗಾರಿಗೆ ಒತ್ತು ನೀಡಬೇಕು. ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಲು ಕ್ರಮಕೈಗೊಳ್ಳಬೇಕು ಎಂಬುದು ಗ್ರಾಮಸ್ಥರ ಒತ್ತಾಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.