ಚಂದನ... ವಸ್ತ್ರಾಭರಣಗಳ ನಂದನ

7

ಚಂದನ... ವಸ್ತ್ರಾಭರಣಗಳ ನಂದನ

Published:
Updated:

ಬೆಂಗಳೂರಿನಲ್ಲಿ ನಿತ್ಯವೂ ಹಬ್ಬ. ಹೊಸತನಕ್ಕೆ ತೆರದುಕೊಳ್ಳುವ ನಗರದಲ್ಲಿ ಫ್ಯಾಷನ್ ಪ್ರಿಯರೂ ಹೆಚ್ಚಾಗುತ್ತಿದ್ದಾರೆ. ಅದಕ್ಕನುಗುಣವಾಗಿ ನಿತ್ಯ ಹೊಸ ಹೊಸ ಶೋರೂಮ್‌ಗಳು ಆರಂಭವಾಗುತ್ತವೆ. ಆ ಸಾಲಿನಲ್ಲಿ `ಚಂದನ ಬ್ರದರ್ಸ್ ಫ್ಯಾಮಿಲಿ ಟೆಕ್ಸ್‌ಟೈಲ್ ಶೋರೂಮ್~ ಸೇರ್ಪಡೆಯಾಗಿದೆ.ಮಾರತ್‌ಹಳ್ಳಿ ಔಟರ್ ರಿಂಗ್‌ರೋಡ್, ಕೃಷ್ಣ ಸೆನೆಟ್‌ನಲ್ಲಿ ಇತ್ತೀಚೆಗೆ `ಚಂದನ ಬ್ರದರ್ಸ್~ ಆರಂಭವಾಗಿದೆ. ಇಲ್ಲಿ ಕಾಂಚೀಪುರಂ, ಬನಾರಸ್ ಸೇರಿದಂತೆ ಅನೇಕ ಪ್ರಸಿದ್ಧ ರೇಷ್ಮೆ ಹಾಗೂ ಕಾಟನ್ ಸೀರೆಗಳು ಹೆಂಗಳೆಯರ ಕಣ್ಮನ ಸೆಳೆಯುತ್ತಿವೆ.

 

ಜೊತೆಗೆ ಯುವಕರ ಅಭಿರುಚಿಗೆ ತಕ್ಕ ಬಟ್ಟೆಗಳಿವೆ. 2ಸಾವಿರ ರೂ.ದಿಂದ 50ಸಾವಿರ ಬೆಲೆಯ ಸೀರೆಗಳು ಇಲ್ಲಿವೆ.ಬಟ್ಟೆಗಳ ಜೊತೆಗೆ ಆಭರಣ ಮಳಿಗೆಯೂ ಇದೆ. ಒಂದೇ ಸೂರಿನಡಿ ಬಟ್ಟೆ ಮತ್ತು ಚಿನ್ನಾಭರಣಗಳನ್ನು ಕೊಳ್ಳುವ ಸೌಲಭ್ಯವನ್ನು ಚಂದನ ಕಲ್ಪಿಸಿದೆ.ಆಂಧ್ರ ಪ್ರದೇಶದಲ್ಲಿ 60ಕ್ಕೂ ಹೆಚ್ಚು ಮಳಿಗೆಗಳನ್ನು ಹೊಂದಿರುವ `ಚಂದನ ಬ್ರದರ್ಸ್~ ಉದ್ಯಾನ ನಗರಿಯಲ್ಲಿ ತನ್ನ ಮೊದಲ ಶೋರೂಮ್ ಆರಂಭಿಸಿದೆ. ಆಂಧ್ರದ ಮಾಜಿ ಹಣಕಾಸು ಸಚಿವ ಎನಮಲ ರಾಮಕೃಷ್ಣಡು, ನಟ ಶಿವರಾಜಕುಮಾರ್, ನಟಿ ಆಯೇಷಾ ಉದ್ಘಾಟನೆ ಮಾಡಿದರು.  ಸಿ.ಎಂ.ಆರ್ ಗ್ರೂಪ್‌ನ ಅಧ್ಯಕ್ಷ ಮಾವುರಿ ವೆಂಕಟರಮಣ, `ಚಂದನ ಬ್ರದರ್ಸ್~ ಮಾಲೀಕ ರಮೇಶ್ ಮತ್ತಿತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry